Breaking News.! ಲೀಕ್ ಆಯ್ತು ಬಿಗ್ ಬಾಸ್ ಸೀಸನ್ 10 ಸ್ಪರ್ದಿಗಳ ಹೆಸರು, ಗ್ರಾಂಡ್ ಎಂಟ್ರಿ ಕೊಡಲಿದ್ದಾರೆ ಈ ನಟ ನಟಿಯರು.

Hello ಸ್ನೇಹಿತರೇ,  ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಮತ್ತೆ ಮನೆ ಮನೆಗಳಲ್ಲಿ ರಾರಾಜಿಸಲು ಸಿದ್ಧತೆ ನಡೆಸುತ್ತಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಮೂಡಿ ಬರುವ ಬಿಗ್ ಬಾಸ್ ಕನ್ನಡ ಸೀಸನ್ ರಾಜ್ಯದಾದ್ಯಂತ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಒಂದೊಂದು ಸೀಸನ್ ಮುಗಿಯುತ್ತಿದ್ದಂತೆ ಮತ್ತೆ ಹೊಸ ಸೀಸನ್ ಗಾಗಿ ಬಿಗ್ ಬಾಸ್ ಅಭಿಮಾನಿಗಳು ಕಾಯುತ್ತಿರುತ್ತಾರೆ.

bigg boss season 10 contestants list
bigg boss season 10 contestants list

bigg boss season 10 kannada start date

ಬಿಗ್ ಬಾಸ್ ಕನ್ನಡ ಸೀಸನ್

ಬಿಗ್ ಬಾಸ್ ಈಗಾಗಲೇ 9 ಸೀಸನ್ ಗಳನ್ನೂ ಪೊರ್ನ್ಗೊಳಿಸಿದೆ.ಸ್ಟಾರ್ ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿದ್ದರು. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 9 ಕಳೆದ ಡಿಸೇಂಬರ್ ಅಂತ್ಯದಲ್ಲಿ ಮುಕ್ತಾಯ ಕಂಡಿತ್ತು. ಇನ್ನು ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದು, ರಾಕೇಶ್ ಅಡಿಗ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 10 ಬಿಗ್ ಅಪ್ಡೇಟ್

ಇನ್ನು ಸೀಸನ್ 9 ಮುಗಿದು ಬರೋಬ್ಬರಿ 8 ತಿಂಗಳು ಕಳೆಯುತ್ತಿದೆ. ಇನ್ನು ಕೂಡ ಹೊಸ ಸೀಸನ್ ಬಗ್ಗೆ ಯಾವುದೇ ಅಪ್ಡೇಟ್ ಬರಲಿಲ್ಲ. ಇದೀಗ ಸೀಸನ್ 10 ಬಗ್ಗೆ ಬಿಗ್ ಬಿಸ್ ಪ್ರಿಯರಿಗೆ ಸಿಹಿ ಸುದ್ದಿ ಲಭಿಸಿದೆ. ಸದ್ಯದಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 10 ಕನ್ನಡಿಗರ ಮುಂದೆ ಬರಲಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆ ಬರುವ ಕೆಲ ಸ್ಪರ್ಧಿಗಳ ಬಗ್ಗೆ ಬಹುದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಸೀಸನ್ 10 ರಲ್ಲಿ ಯಾರ್ಯಾರು ಬರಲಿದ್ದಾರೆ ಎನ್ನುವ ಬಗ್ಗೆ ಎಲ್ಲರಿಗು ಕುತೂಹಲವಿದೆ. ಇನ್ನು ಕಳೆದ ಸೀಸನ್ 9 ರಲ್ಲಿ ಓಟಿಟಿ ಮೂಲಕ ಸ್ಪರ್ಧಿಗಳು ಪರಿಚಯವಾಗಿದ್ದರು. ಮೊದಲು ಮೊಬೈಲ್ ಗಳಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು ಅಲ್ಲಿ ಆಯ್ಕೆಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ಈ ಬಾರಿ ವಾಹಿನಿ ಓಟಿಟಿ ಕಾನ್ಸೆಪ್ಟ್ ಅನ್ನು ಕೈಬಿಟ್ಟಿದೆ ಎನ್ನಲಾಗುತ್ತಿದೆ. ನೇರವಾಗಿ ಸ್ಪರ್ದಿಗಳು ಎಲ್ಲರ ಮನೆಯ ಟಿವಿಯಲ್ಲಿಯೇ ಬರಲಿದ್ದಾರೆ.

ಈ ಬಾರಿ ದೊಡ್ಮನೆಯಲ್ಲಿ ಮಿಂಚಲಿದ್ದಾರೆ ಈ ಸ್ಪರ್ಧಿಗಳು

ಇನ್ನು ನಾಗಿಣಿ 2 , ಪುಟ್ಟ ಗೌರಿ ಮದುವೆ ಖ್ಯಾತಿಯ ನಮೃತಾ ಗೌಡ, ಕಿಚ್ಚ ಸಿನಿಮಾದ ನಾಯಕಿ ರೇಖಾ, ಅಗ್ನಿಸಾಕ್ಷಿ ರಾಜೇಶ್ ದ್ರುವ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಕಳೆದ ಎರಡು ಸೀಸನ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಎಂಟ್ರಿ ಜೋರಾಗಿಯೇ ಇತ್ತು. ಈ ಬಾರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್, ವರ್ಷ ಕಾವೇರಿ, ಕಾಫಿ ನಾಡು ಚಂದು ಇವರ ಹೆಸರು ಕೇಳಿಬರುತ್ತಿದೆ. ಇನ್ನು ಬಿಗ್ ಸೀಸನ್ 10 ರಲ್ಲಿ ಈ ಸ್ಪರ್ಧಿಗಳು ಇದ್ದಾರಾ ಇಲ್ಲವ ಎನ್ನುವುದನ್ನು ಸೀಸನ್ ಅನೌನ್ಸ್ಮೆಂಟ್ ಆಗುವ ವರೆಗೂ ಕಾದು ನೋಡಬೇಕಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ