ಕನ್ನಡಿಗರಿಗೆ ಮತ್ತೊಂದು ಆಘಾತ! ಮಜಾ ಟಾಕೀಸ್ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ! ‘ಮಸಣದ ಹೂ’ವಾದ ನಟಿ, ನಿರೂಪಕಿ ಅಪರ್ಣಾ!

ಘಟನೆಗಳ ಹೃದಯವಿದ್ರಾವಕ ತಿರುವಿನಲ್ಲಿ, ಕನ್ನಡ ಮನರಂಜನಾ ಉದ್ಯಮವು ತನ್ನ ಪ್ರೀತಿಯ ತಾರೆಗಳಲ್ಲಿ ಒಬ್ಬರಾದ ಅಪರ್ಣಾ ಅವರ ನಷ್ಟಕ್ಕೆ ದುಃಖಿಸುತ್ತದೆ. ತನ್ನ ರೋಮಾಂಚಕ ವ್ಯಕ್ತಿತ್ವ ಮತ್ತು ಸೆರೆಹಿಡಿಯುವ ಪರದೆಯ ಉಪಸ್ಥಿತಿಗೆ ಹೆಸರುವಾಸಿಯಾದ ಗೌರವಾನ್ವಿತ ನಿರೂಪಕಿ ನಿಧನರಾದರು, ಅವರ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳ ಹೃದಯದಲ್ಲಿ ಶೂನ್ಯವನ್ನು ಬಿಟ್ಟಿದ್ದಾರೆ.

Famous Kannada presenter Aparna is no more
Famous Kannada presenter Aparna is no more

ಕನ್ನಡದ ಖ್ಯಾತ ಹಾಗೂ ಹಿರಿಯ ನಿರೂಪಕಿ ಅಪರ್ಣ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ ಅಪರ್ಣ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು (ಜುಲೈ 11) ಮೃತಪಟ್ಟಿದ್ದಾರೆ. ಅಪರ್ಣ ಸಾವಿನ ವಿಚಾರ ತಿಳಿದು ಅವರ ಅಭಿಮಾನಿಗಳು ಹಾಗೂ ಕನ್ನಡಿಗರು ಶಾಕ್‌ಗೆ ಒಳಗಾಗಿದ್ದಾರೆ.

ಖ್ಯಾತ ನಿರೂಪಕಿ ಅಪರ್ಣ ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ನಿವಾಸದಲ್ಲಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ನಿರೂಪಕಿಯಾಗಿ ಅಪರ್ಣಾ ಕನ್ನಡಿಗರ ಮನೆ ಮಾನಸದಲ್ಲಿ ನೆಲೆಸಿದ್ದರು. ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಕೆಲವೇ ಕೆಲವು ನಿರೂಪಕಿಯರಲ್ಲಿ ಇವರು ಕೂಡ ಒಬ್ಬರಾಗಿದ್ದರು.

ಅರ್ಪಣ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಪರ್ಣ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಪತಿ ನಾಗರಾಜ್ ವಸ್ತಾರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಪರ್ಣ ಕೇವಲ ನಿರೂಪಕಿಯಷ್ಟೇ ಅಲ್ಲ ನಟಿಯಾಗಿಯೂ ಗುರುತಿಸಿಕೊಂಡಿದ್ದರು. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಮಸಣದ ಹೂವು’ ಸಿನಿಮಾದಿಂದ ಅರ್ಪಣೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರು. ಶಿವರಾಜ್‌ಕುಮಾರ್ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಮ್’ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ