ಉದ್ಯೋಗ ವಾರ್ತೆ! ಗ್ರಾಮ ಪಂಚಾಯ್ತಿ ಖಾಲಿ ಹುದ್ದೆಗಳ ನೇಮಕಾತಿ.! ಅಪ್ಲೆ ಮಾಡಿದ್ರೆ ನಿಮ್ಮೂರಲ್ಲೆ ನಿಮಗೆ ಕೆಲಸ.

ನಮಸ್ಕಾರ ಸ್ನೇಹಿತರೆ ಗ್ರಾಮ ಪಂಚಾಯತಿಯಲ್ಲಿ ಕೆಲವು ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಆದಷ್ಟು ಬೇಗನೆ ಆದಿ ಸಲ್ಲಿಸಬೇಕಾಗಿ ಕೋರಿದೆ ಹೌದು ಕೆಲವು ಗ್ರಾಮ ಪಂಚಾಯತಿಯಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿಯನ್ನು ಕರೆಯಲಾಗಿದೆ ಈ ನೇಮಕಾತಿಗೆ ಬೇಕಾಗಿರುವಂತಹ ವಿದ್ಯಾರ್ಥಿ ಹಾಗೂ ದಾಖಲೆಗಳನ್ನು ನಾವು ಈ ಕೆಳಗಡೆ ನೀಡಿದ್ದೇವೆ.

Gram Panchayat Vacancies Recruitment 2024
Gram Panchayat Vacancies Recruitment 2024

ಕರ್ನಾಟಕ ಪಂಚಾಯತ್ ರಾಜ್‌ ಆಯುಕ್ತಾಲಯವು ಎಲ್ಲಾ ಜಿಲ್ಲಾ ಪಂಚಾಯ್ತಿ ಆಡಳಿತಾಧಿಕಾರಿಗಳಿಗೆ ಪ್ರತಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಿಕೊ:ಳ್ಳಲು ಆದೇಶ ಹೊರಡಿಸಿದೆ. ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ.

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್‌ ಇಲಾಖೆಯ ಅಡಿಯಲ್ಲಿನ ಕರ್ನಾಟಕ ಪಂಚಾಯತ್ ರಾಜ್‌ ಆಯುಕ್ತಾಲಯವು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ 4 ಪದನಾಮಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಗಳಿಗೆ ಆದೇಶ ನೀಡಿದೆ. ಈ ಹುದ್ದೆಗಳಿಗೆ ಆಯಾ ಜಿಲ್ಲಾ ಪಂಚಾಯ್ತಿಗಳು ನೇಮಕಾತಿ ಅಧಿಸೂಚನೆ ಹೊರಡಿಸಿ, ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿ, ಆಯ್ಕೆಪಟ್ಟಿ ಬಿಡುಗಡೆ ಮಾಡಲಿವೆ. ಯಾವ ಜಿಲ್ಲೆ ಯಾವಾಗ ಅಧಿಸೂಚನೆ ಹೊರಡಿಸಲಿದೆ ತಿಳಿಯಿರಿ. ಈ ಕುರಿತು ಆಯಾ ಜಿಲ್ಲೆಯ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಆಯಾ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಪಂಚಾಯತ್ ರಾಜ್‌ ಇಲಾಖೆ ನೇಮಕಾತಿ

  • ಕರವಸೂಲಿಗಾರರು / ಬಿಲ್‌ ಕಲೆಕ್ಟರ್‌
  • ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು
  • ವಾಟರ್ ಆಪರೇಟರ್
  • ಸ್ವಚ್ಛತಾಗಾರರು

ಹುದ್ದೆವಾರು ವಿದ್ಯಾರ್ಹತೆಗಳ ವಿವರ

  1. ಕರವಸೂಲಿಗಾರರು/ ಬಿಲ್‌ ಕಲೆಕ್ಟರ್-II PUC ಪಾಸ್.
  2. ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು-PUC ಪಾಸ್‌ ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು, ಪ್ರಮಾಣ ಪತ್ರ ಹೊಂದಿರುವುದು.
  3. ವಾಟರ್ ಆಪರೇಟರ್ – ಕನಿಷ್ಠ 7ನೇ ತರಗತಿ.
  4. ಸ್ವಚ್ಛತಾಗಾರರು – ಯಾವುದೇ ವಿದ್ಯಾರ್ಹತೆ ಕಡ್ಡಾಯವಲ್ಲ.

ಈ ಮೇಲಿನ ಹುದ್ದೆಗಳಿಗೆ ಜಿಲ್ಲಾ ಪಂಚಾಯಿತಿ ಇಂದ ಈಗಾಗಲೇ ಅನುಮೋದನೆ ಹೊಂದಿರುವ ಸದರಿ ನೌಕರರ ವಯೋನಿವೃತ್ತಿಯಿಂದ, ಮುಂಬಡ್ತಿಯಿಂದ / ಮರಣಹೊಂದಿರುವ ಕಾರಣಗಳಿಂದಾಗಿ ಖಾಲಿಯಾಗಿದ್ದಲ್ಲಿ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಖಾಲಿಯಾದ ಈ ಮೇಲಿನ 4 ವೃಂದದ ಹುದ್ದೆಗಳಲ್ಲಿ ಯಾರು ಕಾರ್ಯನಿರ್ವಹಿಸದೇ ಇದ್ದಲ್ಲಿ, ಸದರಿ ಹುದ್ದೆಗೆ ಒಂದು ಸಿಬ್ಬಂದಿಯನ್ನು ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 886 ಗ್ರಾಪಂಕಾ 2016 ದಿನಾಂಕ 29-06-2020 ರಲ್ಲಿ ಸೂಚಿಸಿರುವಂತೆ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದೆ.

ನೇಮಕಾತಿಗೆ ತಿದ್ದುಪಡಿ ತರುವ ಪ್ರಸ್ತಾವನೆ ಸರ್ಕಾರದ ಮುಂದೆ

ಪ್ರಸ್ತುತ ಪ್ರತಿ ಗ್ರಾಮ ಪಂಚಾಯತಿಗಳಿಗೆ ಸಿಬ್ಬಂದಿ ಸಂಖ್ಯೆಯನ್ನು ನಿಗದಿಪಡಿಸುವ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ತರುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆ ಮಾಡಲಾಗುವುದು. ಆದ್ದರಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳು ಮುಂದಿನ ಆದೇಶ ಬರುವವರೆಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಂಖ್ಯೆಯನ್ನು ನಿಗದಿಪಡಿಸುವ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳದಂತೆ ಮತ್ತು ಮುಂದಿನ ಆದೇಶ ನಿರೀಕ್ಷಿಸುವಂತೆ ತಿಳಿಸಲಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ