Hello ಸ್ನೇಹಿತರೇ, ಇತ್ತೀಚಿಗೆ ವಂಚನೆಯ ಪ್ರಕರಣಗಳು ಹೆಚ್ಚುತ್ತಿದೆ. ದೇಶದಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಲು ಸರ್ಕಾರ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಒಂದು ವಿಧದಲ್ಲಿ ವಂಚನೆಯನ್ನು ತಡೆಯಲು ಪ್ರಯತ್ನಿಸಿದರೆ ವಂಚಕರು ಇನ್ನೊಂದು ವಿಧದಲ್ಲಿ ವಂಚನೆಯನ್ನು ಆರಂಭಿಸುತ್ತಾರೆ. ದಿನದಿಂದ ವಂಚನೆ ಹೆಚ್ಚುತ್ತಲೇ ಇರುತ್ತದೆ. ಸಾಮಾನ್ಯವಾಗಿ ಜನರು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಅನ್ನು ಬಳಸುತ್ತಾರೆ. ಕೆಲವೊಂದು ವಂಚನೆಗಳು ಕರೆಯ ಮೂಲಕ ನಡೆಯುತ್ತದೆ. ಒಂದು ಸಿಮ್ ಕಾರ್ಡ್ ಅನ್ನು ಬಳಸಿ ವಂಚನೆ ಮಾಡಿದರೆ ಮತ್ತೊಮ್ಮೆ ಆ ಸಿಮ್ ಕಾರ್ಡ್ ಅನ್ನು ಬಳಸುವುದಿಲ್ಲ. ಹೀಗಾಗಿ ಈ ಕಾರಣಕ್ಕೆ ಸಾಕಷ್ಟು ಸಿಮ್ ಗಳು ಬೇಕಾಗುತ್ತದೆ. ಈ ಕಾರಣಕ್ಕೆ ಸರ್ಕಾರ ಹೊಸ ಸಿಮ್ ಖರೀದಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.

new sim card rules in kannada
ಹೊಸ ಸಿಮ್ ಕಾರ್ಡ್ ಖರೀದಿಸುವವರಿಗೆ ಹೊಸ ನಿಯಮ
ಹೆಚ್ಚುತ್ತಿರುವ ಸೈಬರ್ ಪ್ರಕರಣವನ್ನು ತಡೆಹಿಡುಯುವ ಹಿನ್ನಲೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಏಕ ಕಾಲದಲ್ಲಿ ಬಹು ಸಿಮ್ ಖರೀದಿಯನ್ನು ಸರ್ಕಾರ ನಿಷೇಧಿಸಿದೆ. ಡಿಜಿಟಲ್ ವಂಚನೆಯನ್ನು ತಡೆಯಲು ಸರ್ಕಾರವು ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆಯನ್ನು ಕಡ್ಡಾಗೊಳಿಸಿದೆ.
ಇನ್ನುಮುಂದೆ ಸಿಮ್ ಡೀಲರ್ ಗಳು ಸಿಮ್ ನೀಡುವ ಮುನ್ನ ಎಚ್ಚರ ವಹಿಸಬೇಕು. ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಡೀಲರ್ ಗಳು ಮತ್ತು ಸಿಮ್ ಕಾರ್ಡ್ ಮಾರಾಟ ಮಾಡುವ ಗ್ರಾಹಕರು ಕೆವೈಸಿ ನಿಯಮವನ್ನು ಅನುಸರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಹೊಸ ನಿಯಮದ ಪ್ರಕಾರ ಈಗಾಗಲೇ 52 ಲಕ್ಷ ಮೊಬೈಲ್ ಸಂಪರ್ಕವನ್ನು ರದ್ದುಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು 10 ಲಕ್ಷ ದಂಡ
ಇನ್ನು ಮುಂದೆ ಹೊಸ ನಿಯಮದ ಪ್ರಕಾರ ಸಿಮ್ ಕಾರ್ಡ್ ಗಳನ್ನೂ ಖರೀದಿಸಬೇಕಾಗುತ್ತದೆ. ಇನ್ನುಮುಂದೆ ಹೊಸ ಸಿಮ್ ಕಾರ್ಡ್ ಖರೀದಿಸುವ ಎಲ್ಲಾ ಬಳಕೆದಾರರು ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಈ ಪರಿಶೀಲನೆಯನ್ನು ಸಿಮ್ ಕಾರ್ಡ್ ವಿತರಕರು ಅಥವಾ ಆಯಾ ಟೆಲಿಕಾಂ ಆಪರೇಟರ್ ಗಳು ಮಾಡುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆಯ ಜೊತೆಗೆ 10 ಲಕ್ಷ ದಂಡವನ್ನು ವಿಧಿಸಲಾಗುತ್ತದೆ.