ಬಾಹ್ಯಾಕಾಶದಲ್ಲೇ ಕಳೆದು ಹೋಗುವ ಭೀತಿಯಲ್ಲಿ ಸುನೀತಾ ವಿಲಿಯಮ್ಸ್ – ಭೂಮಿಗೆ ಮರಳಿ ಬಾರದಂಥ ಪರಿಸ್ಥಿತಿ!

ಪ್ರಸಿದ್ಧ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ ಇದೀಗ ಬಾಹ್ಯಾಕಾಶದಲ್ಲಿ ನಷ್ಟವಾಗುವ ಭಯದಲ್ಲಿದ್ದಾರೆ. ಅವರು ಭೂಮಿಗೆ ಮರಳಿ ಬರುವ ಸಾಧ್ಯತೆ ಇಲ್ಲದ ಸ್ಥಿತಿಯಲ್ಲಿ ಇದ್ದಾರೆ ಎಂಬ ಸುದ್ದಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

Sunita Williams in fear of getting lost in space
Sunita Williams in fear of getting lost in space

ಇದೇ ಜೂ. 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ಭಾರತ ಮೂಲದ ವಿಜ್ಞಾನಿ ಸುನೀತಾ ವಿಲಿಯಮ್ಸ್ ಅವರು ಮರಳಿ ಭೂಮಿಗೆ ಬರುವುದು ಅನುಮಾನ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರ್ವ ಯೋಜನೆಯಂತೆ, ಅವರು ಜೂ. 14ರಂದೇ ಭೂಮಿಗೆ ಹಿಂದಿರುಗಬೇಕಿತ್ತು. ಆದರೆ, ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರ ವಾಪಸ್ಸಾತಿಯನ್ನು ಜೂ. 26ಕ್ಕೆ ಮುಂದೂಡಲಾಗಿತ್ತು. ಆದರೆ, ಈಗ ಪುನಃ ಅವರ ವಾಪಸ್ಸಾತಿಯನ್ನು ಮತ್ತೆ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಪ್ರಕಟಿಸಲಾಗಿಲ್ಲ.

ಇದೇ ಜೂ. 5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಹೋಗಿದ್ದ ಭಾರತ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುಗುವುದು ಕಷ್ಟಕರವಾಗಿದೆ. ಐಎಸ್ಎಸ್ ನಿಂದ ಭೂಮಿಗೆ ಹಿಂದಿರುಗಬೇಕಿದ್ದ ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ.

ಇಷ್ಟೊತ್ತಿಗಾಗಲೇ ಅವರು ಭೂಮಿಗೆ ವಾಪಸ್ಸಾಗಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಅವರು ಅಲ್ಲೇ ಉಳಿಯುವಂತಾಗಿದೆ. ಈ ಹಿಂದೆ, 2003ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ ಅವರಂತೆಯೇ ಸುನಿತಾ ವಿಲಿಯಮ್ಸ್ ಅವರೂ ಭೂಮಿಗೆ ಹಿಂದಿರುಗದಂಥ ಪರಿಸ್ಥಿತಿ ಸುನೀತಾ ವಿಲಿಯಮ್ಸ್ ಅವರಿಗೂ ಬರಲಿದೆಯೇ ಎಂಬ ಆತಂಕವೂ ಎದುರಾಗಿದೆ.

ಘಟನೆ

ಸುನಿತಾ ವಿಲಿಯಮ್ಸ್ ಅವರು ಇತ್ತೀಚೆಗೆ ತಮ್ಮ ಬಾಹ್ಯಾಕಾಶ ಪ್ರಯಾಣದ ವೇಳೆ ತಾಂತ್ರಿಕ ತೊಂದರೆಗಳನ್ನು ಎದುರಿಸಬೇಕಾಯಿತು. ಅವರ ಬಾಹ್ಯಾಕಾಶ ನೌಕೆ ನಿರೀಕ್ಷಿತ ಪಥದಿಂದ ವಿಭಿನ್ನವಾಗಿ ಚಲಿಸಲಾರಂಭಿಸಿದಾಗ, ಅವರು ಮತ್ತು ಮಿಷನ್ ನಿಯಂತ್ರಣ ಕೇಂದ್ರವು ತಕ್ಷಣವೇ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತು. ಆದರೆ, ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.

ಮಿಷನ್ ನಿಯಂತ್ರಣ ಕೇಂದ್ರದ ಪ್ರತಿಕ್ರಿಯೆ

ಮಿಷನ್ ನಿಯಂತ್ರಣ ಕೇಂದ್ರವು ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳು ಪ್ರಯತ್ನಿಸುತ್ತಿದೆ. ಸುನಿತಾ ವಿಲಿಯಮ್ಸ್ ಅವರ ಸುರಕ್ಷತೆ ಮತ್ತು ಭೂಮಿಗೆ ಅವರ ಸುರಕ್ಷಿತ ಮರಳಿಕೆಗೆ ಸಂಬಂಧಿಸಿದಂತೆ ಅವರು ಎಲ್ಲವನ್ನೂ ಮಾಡುತ್ತಿದ್ದಾರೆ. ತಾಂತ್ರಿಕ ತೊಂದರೆಯನ್ನು ಪರಿಹರಿಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳು ಸಹಾಯ ಮಾಡುತ್ತಿವೆ.

Join Telegram Group Join Now
WhatsApp Group Join Now

ಸುನಿತಾ ವಿಲಿಯಮ್ಸ್ ಅವರ ಪ್ರತಿಕ್ರಿಯೆ

ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಿಂದ ಸಂದೇಶ ಕಳುಹಿಸಿದ್ದು, “ನನ್ನ ಸಮ್ಮುಖದಲ್ಲಿ ಎಲ್ಲರೂ ಸಹಕರಿಸುತ್ತಿರುವುದಕ್ಕೆ ನಾನು ಧನ್ಯವಾದ ಗಳನ್ನು ಅರ್ಪಿಸುತ್ತೇನೆ. ಇಂತಹ ಸಂದರ್ಭದಲ್ಲಿ ನಾನು ಬಾಹ್ಯಾಕಾಶದಲ್ಲಿ ಸಂಪೂರ್ಣ ತೊಂದರೆವಿಲ್ಲದೆ ಇರುವೆನು ಎಂಬ ಭರವಸೆಯನ್ನು ನೀಡಲು ಸಹಕರಿಸುತ್ತೇನೆ.” ಎಂದಿದ್ದಾರೆ.

ಜೂ. 14ರಂದೇ ಹಿಂದಿರುಗಬೇಕಿತ್ತು!

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಅವರು, ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂ. 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು.

ಪೂರ್ವ ಯೋಜನೆಯಂತೆ ಅವರು ಜೂ. 14ರಂದು ಭೂಮಿಗೆ ಹಿಂದಿರುಗಬೇಕಿತ್ತು. ಆದರೆ, ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರ ವಾಪಸಾತಿಯನ್ನು ಜೂ. 26ಕ್ಕೆ ಮುಂದೂಡಲಾಗಿತ್ತು. ಆದರೆ, ತಾಂತ್ರಿಕ ದೋಷಗಳು ಸರಿಹೋಗದ ಕಾರಣ, ಅದರ ಜೊತೆಯಲ್ಲೇ ಮತ್ತಷ್ಟು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣದಿಂದಾಗಿ, ಈಗ ಪುನಃ ವಾಪಸ್ಸಾತಿ ದಿನಾಂಕವನ್ನು ಮುಂದೂಡಲಾಗಿದೆ. ಆದರೆ, ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಇದು ಆತಂಕವನ್ನು ಹೆಚ್ಚಿಸಲು ಮತ್ತೊಂದು ಕಾರಣವಾಗಿದೆ.

ನಿಜವಾದ ಆತಂಕವೇನು?

ಸುನಿತಾ ಹಾಗೂ ವಿಲ್ಮರ್ ಅವರನ್ನು ಭೂಮಿಗೆ ವಾಪಸ್ ಕರೆತರುವ ಸ್ಟಾರ್ ಲೈನರ್ ಆಕಾಶಕಾಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ನಿಜವಷ್ಟೇ. ಅವುಗಳನ್ನು ಬೇಗನೇ ಸರಿಪಡಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಸಲಿಗೆ, ಅದರಲ್ಲಿರುವ ಇಂಧನ 45 ದಿನಗಳಿಗೆ ಸಾಕಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲವು ದಿನಗಳ ಮಟ್ಟಿಗೆ ಹೆಚ್ಚಿಸಬಹುದು. ಆದರೆ, ತಾಂತ್ರಿಕ ದೋಷ ಬೇಗನೇ ನಿವಾರಣೆಯಾಗದಿದ್ದ ಇಂಧನ ಖಾಲಿಯಾಗುತ್ತಾ ಹೋಗುತ್ತದೆ. ತಾಂತ್ರಿಕ ದೋಷಗಳು ನಿವಾರಣೆಯಾಗುವ ಹೊತ್ತಿಗೆ ಇಂಧನ ಖಾಲಿಯಾದರೆ ಅವರು ಭೂಮಿಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಐಎಸ್ಎಸ್ ಗೆ ಸುನೀತಾ ಹೋಗಿದ್ಯಾಕೆ?

ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ನಾಸಾ) ಹಾಗೂ ಅಮೆರಿಕದ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ನ ಜಂಟಿ ಸಹಯೋಗದಲ್ಲಿ ಖಾಸಗಿಯಾಗಿ ಬಾಹ್ಯಾಕಾಶ ಪ್ರಯಾಣ ಮಾಡುವ ಆಸಕ್ತಿಯುಳ್ಳವರಿಗಾಗಿ ಹೊಸ ಕಾರ್ಯಕ್ರಮವನ್ನು ರೂಪಿಸಿದೆ. ಸಾಮಾನ್ಯವಾಗಿ ಟ್ರಿಪ್ ಹೋದಂತೆ ಬಾಹ್ಯಾಕಾಶಕ್ಕೆ ಟ್ರಿಪ್ ಹೋಗಿ, ಅಲ್ಲಿನ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಕೆಲ ದಿನಗಳವರೆಗೆ ಉಳಿದುಕೊಂಡು ಅಲ್ಲಿಂದ ಪುನಃ ಭೂಮಿಗೆ ಹಿಂದಿರುಗುವ ರೋಮಾಂಚನವನ್ನು ಖಗೋಳಾಸಕ್ತರಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿಯೇ ಬೋಯಿಂಗ್ ಸಂಸ್ಥೆ ಸ್ಟಾರ್ ಲೈನರ್ ಎಂಬ ಆಕಾಶಕಾಯವೊಂದನ್ನು ಪ್ರಯೋಗಿಕವಾಗಿ ಸಿದ್ಧಪಡಿಸಿದೆ.

ಭೂಮಿಯಿಂದ ಹೊರಡುವ ಸ್ಟಾರ್ ಲೈನರ್ , ಪ್ರಯಾಣಿಕರನ್ನು ಹೊತ್ತು ಐಎಸ್ಎಸ್ ತಲುಪಿ, ಕೆಲ ದಿನಗಳ ನಂತರ ಅಲ್ಲಿಂದ ಪುನಃ ಭೂಮಿಗೆ ಮರಳುವಂತೆ ಮಾಡುವುದು ಇದರ ಉದ್ದೇಶ. ಆದರೆ, ಇದು ಸುಲಭದ ಕೆಲಸವಲ್ಲ. ಬಾಹ್ಯಾಕಾಶಕ್ಕೆ ಮನುಷ್ಯರನ್ನು ಈ ಹಿಂದೆಯೂ ಕಳಿಸಲಾಗಿದೆ ಹಾಗೂ ಅವರನ್ನು ಪುನಃ ವಾಪಸ್ ಕರೆಯಿಸಿಕೊಳ್ಳಲಾಗಿದೆ. ಆದರೆ, ಅದೆಲ್ಲವೂ ರಾಕೆಟ್ ನ ಮೂಲಕ ಮಾಡಲಾಗುತ್ತಿದ್ದ ಕೆಲಸಗಳು. ಅಲ್ಲದೆ, ಬೆರಳೆಣಿಕೆಯಷ್ಟು ವ್ಯಕ್ತಿಗಳನ್ನು ಕಳುಹಿಸಲಾಗಿದ್ದ ಪ್ರಾಜೆಕ್ಟ್ ಗಳು.

ಇದೇ ಮೊದಲ ಬಾರಿಗೆ ಅನೇಕ ವ್ಯಕ್ತಿಗಳನ್ನು, ಬಾಹ್ಯಾಕಾಶದಲ್ಲಿ ಏಕಕಾಲಕ್ಕೆ ಕೊಂಡೊಯ್ಯುವಂಥ ಆಕಾಶಕಾಯವನ್ನು ಸೃಷ್ಟಿಸಬೇಕಾಗಿದ್ದರಿಂದ ಈ ಬಾರಿ, ಬೋಯಿಂಗ್ ನ ಸ್ಟಾರ್ ಲೈನ್ ಆಕಾಶಕಾಯವನ್ನು ಅನೇಕ ಪ್ರಯೋಗಗಳಿಗೆ ಒಡ್ಡಲಾಗಿತ್ತು. ಹಲವಾರು ವೈಫಲ್ಯಗಳು, ಆ ವೈಫಲ್ಯಗಳ ಸರಿಪಡಿಸುವಿಕೆ – ಇವೆಲ್ಲವುಗಳನ್ನು ಮುಗಿಸಿಕೊಂಡು ಆನಂತರ ಅಂತಿಮವಾಗಿ ಸುರಕ್ಷಿತವಾಗಿ ಪ್ರಯಾಣಿಸಬಹುದಾದ ಸ್ಟಾರ್ ಲೈನ್ ಆಕಾಶಕಾಯ ಸಿದ್ಧವಾಯಿತು. ಅದರ ಪ್ರಯೋಗಾರ್ಥವಾಗಿಯೇ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರನ್ನು ಐಎಸ್ಎಸ್ ಗೆ ಕಳುಹಿಸಲಾಗಿದೆ.

ಮುಂದೇನು?

ಸ್ಟಾರ್ ಲೈನ್ ಆಕಾಶಕಾಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ತಾಂತ್ರಿಕ ದೋಷಗಳನ್ನು ಅಲ್ಲಿಯೇ ಇದ್ದುಕೊಂಡು ಸರಿಪಡಿಸುವ ತರಬೇತಿಯನ್ನು ಈ ಮೊದಲೇ ಸುನಿತಾ ವಿಲಿಯಮ್ಸ್ ಅವರಿಗೆ ಹಾಗೂ ಅವರೊಂದಿಗಿರುವ ವಿಲ್ಮರ್ ಅವರಿಗೆ ಈಗಾಗಲೇ ನೀಡಲಾಗಿದೆ. ಅಷ್ಟೇ ಅಲ್ಲದೆ, ನಾಸಾ ಹಾಗೂ ಬೋಯಿಂಗ್ ನ ನೂರಾರು ತಂತ್ರಜ್ಞರು ಹಾಗೂ ಸ್ಟಾರ್ ಲೈನ್ ಆಕಾಶಕಾಯ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಬೋಯಿಂಗ್ ವಿಶೇಷ ಪರಿಣಿತರ ತಂಡ, ಭೂಮಿಯಿಂದಲೇ ನೇರವಾಗಿ ಅವರೊಂದಿಗೆ ನೇರ ಸಂಪರ್ಕದ ಮೂಲಕ ಅವರಿಗೆ ಅಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ನಿವಾರಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡುತ್ತಿದೆ.

ದೂರಸಂವೇದಿ (ರಿಮೋಟ್) ಮೂಲಕ ಮಾಡುವಂಥ ರಿಪೇರಿಗಳನ್ನು ಭೂಮಿಯಿಂದಲೇ ಕೈಗೊಳ್ಳಲಾಗಿದೆ. ಆದರೆ, ಒಂದು ರಿಪೇರಿ ಮಾಡಿದರೆ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಅಲ್ಲಿ ಸಮಸ್ಯೆ ಉಲ್ಬಣವಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ