Onion Prices : ಈರುಳ್ಳಿ ಬೆಲೆ ಏರಿಕೆ ತಡೆಗೆ ಮಹತ್ವದ ಕ್ರಮ: ಮಾರ್ಚ್ ವರೆಗೆ ರಫ್ತು ನಿಷೇಧ.

ಈರುಳ್ಳಿ ಬೆಲೆಯಲ್ಲಿ ನಿರಂತರ ಏರಿಕೆಯು ರಾಷ್ಟ್ರದಾದ್ಯಂತದ ಕುಟುಂಬಗಳಿಗೆ ಗಂಭೀರ ಕಾಳಜಿಯ ವಿಷಯವಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ಪೂರೈಕೆ ಸರಪಳಿ ಅಡೆತಡೆಗಳು ಮತ್ತು ಹೆಚ್ಚಿದ ಬೇಡಿಕೆಯಿಂದಾಗಿ ಈರುಳ್ಳಿ, ಭಾರತೀಯ ಮನೆಗಳಲ್ಲಿ ಅಡಿಗೆ ಅಗತ್ಯವಾಗಿದೆ, ಬೆಲೆಯಲ್ಲಿ ತೀಕ್ಷ್ಣವಾದ ಏರಿಕೆಯನ್ನು ಅನುಭವಿಸಿದೆ. ಈ ನಿರ್ಣಾಯಕ ಸಮಸ್ಯೆಗೆ ಪ್ರತಿಕ್ರಿಯೆಯಾಗಿ, ಏರುತ್ತಿರುವ ಬೆಲೆಗಳನ್ನು ನಿಗ್ರಹಿಸುವ ಮತ್ತು ಗ್ರಾಹಕರಿಗೆ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿರುವ ಕ್ರಮಗಳನ್ನು ಜಾರಿಗೆ ತರಲು ಸರ್ಕಾರವು ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡಿದೆ.

An important step to curb the rise in onion prices
An important step to curb the rise in onion prices

ಈರುಳ್ಳಿ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, 2024ರ ಲೋಕಸಭೆ ಚುನಾವಣೆಗೆ ಮುನ್ನ ಮುಂದಿನ ವರ್ಷ ಮಾರ್ಚ್‌ ವರೆಗೆ ಈರುಳ್ಳಿ ರಫ್ತು ನಿಷೇಧಿಸಿದೆ.

ದೇಶಿಯ ಲಭ್ಯತೆ ಹೆಚ್ಚಿಸುವುದು, ಬೆಲೆ ಏರಿಕೆ ನಿಯಂತ್ರಣ ಉದ್ದೇಶದಿಂದ 2024ರ ಮಾರ್ಚ್ ವರೆಗೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದೆ.

ಈರುಳ್ಳಿಯ ರಫ್ತು ನೀತಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು, 2024ರ ಮಾರ್ಚ್ 31ರವರೆಗೆ ರಫ್ತು ನಿಷೇಧಿಸಲಾಗಿದೆ ಎಂದು ವಿದೇಶ ವ್ಯವಹಾರ ಪ್ರಧಾನ ನಿರ್ದೇಶನಾಲಯ ತಿಳಿಸಿದೆ.

ದೆಹಲಿಯಲ್ಲಿ ಕೆಜಿ ಈರುಳ್ಳಿ ದರ 70- 80ರೂ.ಗೆ ಮಾರಾಟವಾಗುತ್ತಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಅಕ್ಟೋಬರ್ ನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 25 ರೂ.ನಂತೆ ಮಾರಾಟ ಮಾಡಲಾಗಿತ್ತು.

ಇನ್ನು ಓದಿ : ಆಧಾರ್ ಕಾರ್ಡ್ ಉಚಿತ ʻನವೀಕರಣʼಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿವೆ! ಬೇಗ ಅಪ್ ಡೇಟ್ ಮಾಡಿಸಿ

Join Telegram Group Join Now
WhatsApp Group Join Now

ಒಂದು ಪ್ಲೇಟ್ ಊಟದ ದರವೂ ಏರಿಕೆ!

ನವೆಂಬರ್‌ನಲ್ಲಿ ಈರುಳ್ಳಿ ಮತ್ತು ಟೊಮೆಟೊ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ರಿಸಿಲ್‌ನ ಇತ್ತೀಚಿನ ಮಾಸಿಕ ಆಹಾರದ ಪ್ಲೇಟ್ ಬೆಲೆಯ ಪ್ರಕಾರ, ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳು (ಆಹಾರ ಪ್ಲೇಟ್) ದುಬಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಲೆ ಏರಿಕೆಯಾಗಿದೆ.

ಅನಿಯಮಿತ ಮಳೆಯ ಕಾರಣದಿಂದಾಗಿ ಖಾರಿಫ್ ಸೀಸನ್‌ನಲ್ಲಿ ಕಡಿಮೆ ಉತ್ಪಾದನೆಯಿಂದಾಗಿ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳಲ್ಲಿ ಕ್ರಮವಾಗಿ ಶೇಕಡ 58 ಮತ್ತು ಶೇಕಡ 35 ರಷ್ಟು ಏರಿಕೆಯಾಗಿದೆ. ಸಸ್ಯಾಹಾರಿ ಥಾಲಿಯ ಬೆಲೆಯು ವರ್ಷಕ್ಕೆ ಶೇಕಡ 9 ರಷ್ಟು ಏರಿಕೆಯಾಗಿದೆ. ಮನೆಯಲ್ಲಿ ಥಾಲಿಯನ್ನು ತಯಾರಿಸುವ ಸರಾಸರಿ ವೆಚ್ಚವನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಆಹಾರ ತಯಾರಿಕ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ