ಐದು ಗ್ಯಾರೆಂಟಿ ಬೆನ್ನಲ್ಲೇ ಇನ್ನೊಂದು ಘೋಷಣೆ ಮಾಡಿದ ಸಿದ್ದರಾಮಯ್ಯ.! ಮನೆ ಬಾಗಿಲಿಗೆ ಉಚಿತವಾಗಿ ಬರಲಿದೆ .

Hello ಸ್ನೇಹಿತರೇ,  ರಾಜ್ಯದಲ್ಲಿ ನೂತನ ಸರ್ಕಾರ ಜಾರಿಯದಾಗಿನಿಂದ ಹೊಸ ಹೊಸ ಸೌಲಭ್ಯಗಳು ಜಾರಿಯಾಗುತ್ತಿದೆ. ಕಾಂಗ್ರೆಸ್ ಘೋಷಿಸಿರುವ ಐದು ಯೋಜನೆಗಳು ಜಾರಿಯಾಗುವುದರ ಜೊತೆಗೆ ಇನ್ನಿತರ ಯೋಜನೆಗಳನ್ನು ಕೂಡ ಜನರ ಅನುಕೂಲಕ್ಕಾಗಿ ಜಾರಿಗೊಳಿಸಲಾಗುತ್ತಿದೆ. ಇನ್ನು ಈಗಾಗಲೇ ರಾಜ್ಯದ ಜನತೆ ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹ ಜ್ಯೋತಿ,ಯೋಜನೆಗಳ ಲಭ್ಯ ಪಡೆಯುತ್ತಿದ್ದು, ಇನ್ನೇನ್ನು ಸದ್ಯದಲ್ಲೇ ಗೃಹ ಲಕ್ಷ್ಮಿ ಯೋಜನೆ ಕೂಡ ಅನುಷ್ಠಾನಗೊಳ್ಳಲಿದೆ. ಆಗಸ್ಟ್ 31 ರಂದು ರಾಜ್ಯದ ಅರ್ಹ ಫಲಾನುಭವಿಗಳ ಖಾತೆಗೆ 2000 ರೂ. ಜಮಾ ಆಗಲಿದೆ. ಇನ್ನು ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಸಲುವಾಗಿ ಘೋಷಿಸಿರುವ ಯುವ ನಿಧಿ ಯೋಜನೆ ಇನ್ನೇನು ಸದ್ಯದಲ್ಲೇ ಘೋಷಣೆ ಆಗುವ ಸಾಧ್ಯತೆ ಇದೆ.

asha kiran scheme in karnataka
asha kiran scheme in karnataka

6th guarantee scheme in kannada

ಈ ಎಲ್ಲಾ ಯೋಜನೆಗಳ ಲಾಭ ಪಡೆಯುತ್ತಿರುವ ರಾಜ್ಯದ ಜನತೆಗೆ ಇದೀಗ ರಾಜ್ಯ ಸರ್ಕಾರ ಮತ್ತೊಂದು ನೂತನ ಯೋಜನೆಯನ್ನು ಜಾರಿಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ರಾಜ್ಯ ಸರ್ಕಾರದ ಈ ಹೊಸ ಯೋಜನೆ ರಾಜ್ಯದ ಕೋಟ್ಯಾಂತರ ಗ್ರಾಮೀಣ ಪ್ರದೇಶದ ಜನತೆಗೆ ನೆರವಾಗಲಿದೆ.

ಗ್ರಾಮೀಣ ಪ್ರದೇಶದ ಜನತೆಗಾಗಿ ‘ಆಶಾಕಿರಣ’ ಗ್ಯಾರೆಂಟಿ ಯೋಜನೆ ಜಾರಿ

ಗ್ರಾಮೀಣ ಪ್ರದೇಶದಲ್ಲಿನ ಜನರು ಸಾಕಷ್ಟು ಸೌಲಭ್ಯಗಳಿಂದ ವಂಚಿತರುತ್ತಾರೆ. ಯಾವುದೇ ರೀತಿಯ ಸೌಕರ್ಯಗಳಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶ ಜನರ ಅನುಕೂಲಕ್ಕಾಗಿ ನೂತನ ಯೋಜನೆನ್ನು ಪರಿಚಯಿಸಿದೆ. ಗ್ರಾಮೀಣ ಪ್ರದೇಶದ ಜನತೆಗಾಗಿ ‘ಆಶಾಕಿರಣ’ ಯೋಜನೆ ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ರಾಜ್ಯದ ಗ್ರಾಮೀಣ ಜನತೆಗಾಗಿ ಹೊಸ ಯೋಜನೆ

ಮುಂದಿನ ತಿಂಗಳು ಗ್ರಾಮೀಣ ಜನರಿಗೆ ಕಣ್ಣಿನ ತಪಾಸಣೆ, ಪೊರೆಗೆ ಚಿಕೆತ್ಸೆ ಸೇರಿದಂತೆ ವಿವಿಧ ಚಿಕೆತ್ಸೆ ನೀಡುವ ಆಶಾಕಿರಣ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೆ ತರಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಮೊಬೈಲ್ ಚಿಕಿತ್ಸ ವಾಹನದ ಮೂಲಕ ತೆರಳಿ ಸಕಲ ಚಿಕಿತ್ಸಾ ಸೌಲಭ್ಯ ಹೊಂದಿರುವ ಮೊಬೈಲ್ ಯುನಿಟ್ ತಲುಪಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ವಾಹನಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಹೃದಯಾಘಾತ, ಕಾನ್ಸರ್ ನಂತಹ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಆಶಾಕಿರಣ ಯೋಜನೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಇನ್ನು ಸದ್ಯದಲ್ಲೇ ರಾಜ್ಯದ ಗ್ರಾಮೀಣ ಪ್ರದೇಶ ಜನತೆ ಆಶಾಕಿರಣ ಯೋಜನೆಯಡಿ ಸೌಲಭ್ಯವನ್ನು ಪಡೆಯಬಹುದಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ