ಉದ್ಯೋಗ ವಾರ್ತೆ: ‘BMTC’ಯಲ್ಲಿ ‘2,500 ಖಾಲಿ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ!

ಬಿಎಂಟಿಸಿಯಲ್ಲಿ ಖಾಲಿ ಇರುವಂತ 2500 ನಿರ್ವಾಹಕರ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿದೆ.

BMTC Recruitment 2024
BMTC Recruitment 2024

ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ.

ಹುದ್ದೆಗಳ ವಿವರ

ಮಿಕ್ಕುಳಿದ ವೃಂದ -2286 ಹುದ್ದೆಗಳು

ಸ್ಥಳೀಯ ವೃಂದ – 199 ಹುದ್ದೆಗಳು ಹಾಗೂ ಹಿಂಬಾಕಿ 15 ಹುದ್ದೆಗಳು ಸೇರಿ 214 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ

Join Telegram Group Join Now
WhatsApp Group Join Now

ಪಿಯುಸಿ ಆರ್ಟ್ಸ್, ಕಾಮರ್ಸ್, ಸೈನ್ಸ್ ನಲ್ಲಿ ಉತ್ತೀರ್ಣರಾಗಿರಬೇಕು. ಅಥವಾ 10+2 ಐಸಿಎಸ್‌ಇ, ಸಿಬಿಎಸ್‌ಇರಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ವಿದ್ಯಾಹ್ರತೆ ಅಂದರೆ ತಾಂತ್ರಿಕ ಶಿಕ್ಷಣ ಇಲಾಖೆಯಿಂದ 3 ವರ್ಷಗಳ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರಬೇಕು.

ವಯೋಮಿತಿ

ಸಾಮಾನ್ಯ ವರ್ಗದವರಿಗೆ 35 ವರ್ಷಗಳು. 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷಗಳು. ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ. ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷ.

ವೇತನ ಶ್ರೇಣಿ – ರೂ.18,660ರಿಂದ 25,300

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಶುಲ್ಕ

ಸಾಮಾನ್ಯ ಅರ್ಹತೆ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ ರೂ.750. ಎಸ್ಸಿ, ಎಸ್ಟಿ ಪ್ರವರ್ಗ-1, ಮಾಜಿ ಸೈನಿಕರರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.

BMTC ನೇಮಕಾತಿ 2024 ಗೆ ಅರ್ಜಿ ಸಲ್ಲಿಸುವುದು ಹೇಗೆ

  1. ಮೊದಲನೆಯದಾಗಿ, BMTC ನೇಮಕಾತಿ ಅಧಿಸೂಚನೆ 2024 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
  2. ಅಪ್ಲಿಕೇಶನ್ ಆನ್‌ಲೈನ್ ಮೋಡ್ ಅನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಗಳಿಗಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
  3. BMTC ಕಂಡಕ್ಟರ್, ಸ್ಟಾಫ್ ನರ್ಸ್ ಆನ್‌ಲೈನ್‌ನಲ್ಲಿ ಅನ್ವಯಿಸು – ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. BMTC ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  5. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  6. BMTC ನೇಮಕಾತಿ 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-03-2024
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-Apr-2024
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 13-Apr-2024

BMTC ಅಧಿಸೂಚನೆ ಪ್ರಮುಖ ಲಿಂಕ್‌ಗಳು

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ