ಇನ್ನುಮುಂದೆ ಏಟಿಎಂ ಇಲ್ಲದಿದ್ದರೂ ಹಣವನ್ನ ವಿಥ್ಡ್ರಾ ಮಾಡಬಹುದು.! ಮೊಬೈಲ್ ಮೂಲಕ ಏಟಿಎಂಗಳಿಂದ ಹಣ ಡ್ರಾ, RBI ನಿಂದ ಹೊಸ ಸೇವೆ.

Hello ಸ್ನೇಹಿತರೇ, UPI ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ತರುತ್ತಿದೆ. ಬಳಕೆದಾರರು UPI ನ ಮೂಲಕ ಅನೇಕ್ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಬಹುದಾಗಿದೆ. ಯುಪಿಐ ಇತ್ತೀಚಿಗೆ ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡುವ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುತ್ತಿದೆ. ಈಗಾಗಲೇ UPI ನಲ್ಲಿ Loan ಕೂಡ ಲಭ್ಯವಿರುವ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ. ಇನ್ನು ನಿಮ್ಮ ಬಳಿ ಇಂಟರ್ನೆಟ್ ಇಲ್ಲದೆ ಇದ್ದ ಸಂದರ್ಭದಲ್ಲಿ ಕೂಡ UPI ಬಳಸಲು ಅವಕಾಶ ಮಾಡಿ ಕೊಡಲಾಗಿದೆ. ಈ ಎಲ್ಲ ಉಪಯುಕ್ತ ಫೀಚರ್ ಗಳ ಜೊತೆಗೆ ಇದೀಗ UPI ನಲ್ಲಿ ಮತ್ತೊಂದು ಹೊಸ ಫೀಚರ್ ಬರಲಿದೆ.

cardless cash withdrawal information in kannada

ಇನ್ನುಮುಂದೆ ATM ನಲ್ಲಿ UPI ಮೂಲಕ ಹಣ ಪಡೆಯಬಹುದು

ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕುಗಳು ತಮ್ಮ ಗ್ರಾಹಕರಿಗಾಗಿ ಎಟಿಎಂ ಸೌಲಭ್ಯವನ್ನು ಒದಗಿಸಿತ್ತು. ಹಾಗೆಯೆ UPI ವಹಿವಾಟಿನ ಸೌಲಭ್ಯ ಕೂಡ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ನೀಡುತ್ತಿದೆ. ಇದೀಗ UPI ವಹಿವಾಟು ಮತ್ತಷ್ಟು ವಿಸ್ತರಣೆಗೊಂಡಿದೆ.

ಇನ್ನುಮುಂದೆ Google Pay, Paytm, Phone Pe ಮೂಲಕ ನೀವು ATM Card ಇಲ್ಲದೆ ಹಣವನ್ನು ಪಡೆಯಬಹುದು. ಎಟಿಎಂ ನಲ್ಲಿ ಪ್ರದರ್ಶಿಸಲಾದ ಕ್ಯೂ ಆರ್ ಕೋಡ್ ಅನ್ನು ಸ್ಕಾನ್ ಮಾಡುವ ಮೂಲಕ ಗ್ರಾಹಕರು ಡೆಬಿಟಿ ಕಾರ್ಡ್ ಬಳಸದೆಯೇ ಹಣವನ್ನು ಪಡೆಯಬಹುದು. Union Bank Of India ಮತ್ತು NPCI ಸಹಯೋಗದೊಂದಿಗೆ UPI ATM ಕಾರ್ಡ್ ರಹಿತ ನಗದು ಹಿಂಪಡೆಯುವ ಯಂತ್ರವನ್ನು ಮಾಡಿದೆ.

ಯುಪಿಐ ಬಳಸಿ 10000 ನಗದು ಪಡೆಯಬಹುದು

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ಹಿಂಪಡೆಯುವಿಕೆಯ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದರಿಂದಾಗಿ ಜನರು ತಮ್ಮ UPI Application ಅನ್ನು ಬಳಸಿಕೊಂಡು ಎಟಿಎಂ ನ ಮೂಲಕ ಹಣವನ್ನು ಪಡೆಯಬಹುದು. ATM ಮಷಿನ್ UPI ವಿಥ್ ಡ್ರಾ ಸೇವೆಯ ಆಯ್ಕೆಯನ್ನು ಹೊಂದಿರಬೇಕು.

ಎಟಿಎಂ ಡಿಸ್ ಪ್ಲೇ ಮೇಲಿನ ವಿಥ್ ಡ್ರಾ ಕ್ಯಾಶ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ವಿಥ್ ಡ್ರಾ ಕ್ಯಾಶ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಯುಪಿಐ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ ಗರಿಷ್ಟ 5000 ಹಣವನ್ನು ಹಾಗೂ ಒಂದು ದಿನದಲ್ಲಿ ಎರಡು ವಹಿವಾಟುಗಳನ್ನು ಮಾಡಲು ಮಾತ್ರ ಅನುಮತಿ ಇರುತ್ತದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ