ಮಾಂಸಪ್ರಿಯರಿಗೆ ಬಿತ್ತು ಜೆಬಿ ಗೆ ಕತ್ತರಿ! ಚಿಕನ್, ಮಟನ್, ಮೊಟ್ಟೆ ಬೆಲೆ‌ ಗಗನಕ್ಕೆ ಏರಿಕೆ‌.

ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಮಾಂಸದ ಬೆಲೆಯು ಗಗನಕೇರುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ ಬನ್ನಿ ಈ ಲೇಖನದಲ್ಲಿ ನಾವು ಇದರ ಬಗ್ಗೆ ನಿಮಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀಡಲಿದ್ದೇವೆ ಹಾಗೂ ಚಿಕನ್ ಮಟನ್ ಹಾಗೂ ಮೊಟ್ಟೆಯ ಬೆಲೆಯನ್ನು ನಿಮಗೆ ತಿಳಿಸಿ ಕೊಡಲಿದ್ದೇವೆ.

Chicken, mutton, egg prices hike in india
Chicken, mutton, egg prices hike in india

ಇಷ್ಟು ದಿನ ಬೇಸಿಗೆ ಇತ್ತು ಮೊಟ್ಟೆ, ಮಾಂಸ ತಿನ್ನುವುದನ್ನು ಜನರು ಕಡಿಮೆ ಮಾಡಿದ್ದರು. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ದೇಹವನ್ನು ಬೆಚ್ಚಗೆ ಮಾಡಿಕೊಳ್ಳೊಣ ಅಂತ ಮಾಂಸ ಖರೀದಿಸಿ ರುಚಿಕರವಾದ ಆಹಾರ ತಯಾರಿಸಿ, ಸವಿಯೋಣ ಎಂದುಕೊಂಡಿರುವ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್​​ ನೀಡಿದೆ. ಚಿಕನ್ ಬೆಲೆಯು ಇದೀಗ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕೇಳಿ ಮಾಂಸ ಪ್ರಿಯರು ದಂಗಾಗಿದ್ದಾರೆ..

ಇಷ್ಟು ದಿನ ತರಕಾರಿಗಳ ಬೆಲೆ‌ ಏರಿಕೆಯಾಗಿತ್ತು. ಇದೀಗ ‌ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್​ಗೆ 380 ರೂ ಆಗಿದೆ. ಕೆಜಿ ಮಟನ್​ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ‌‌ ಮಾಡಲಾಗಿದೆ.

ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ. ಬೇಡಿಕೆಗೆ ತಕ್ಕಷ್ಟು ಕೋಳಿ‌‌ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ.‌

ಅಲ್ಲದೆ ಮದುವೆ ಸೀಜನ್​ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎಂದು ಮಾಂಸ ವ್ಯಾಪಾರಿ ಉಬೇದ್ ಉಲ್ಲಾ ಖಾನ್ ಹೇಳಿದ್ದಾರೆ.

‌ತರಕಾರಿ ಬೆಲೆಹೆಚ್ಚಾಗಿದೆ. ಇದೀಗ ಮಾಂಸ‌ದ ಬೆಲೆಯೂ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಮಾಂಸವನ್ನು ತಿನ್ನುವುದಾದರೂ‌ ಹೇಗೆ?. ‌ಭಾನುವಾರ ಬಂದರೆ ಸಾಕು ಮನೆಯಲ್ಲಿ ಮಾಂಸಾಹಾರ ಇರಲೇ ಬೇಕು.‌ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಟ್ಟೆಯನ್ನು ಪ್ರತಿದಿನ ಕೊಡಬೇಕಾಗುತ್ತದೆ. ಆದ್ರೆ ಮೊಟ್ಟೆಯ ಬೆಲೆಯು 7 ರೂ ಆಗಿದೆ.‌ ಮಟನ್ ಬೆಲೆಯು ಸಾವಿರದ ಗಡಿ ತಲಪುತ್ತಿದೆ.‌ ಎಷ್ಟೇ ಬೆಲೆ ಏರಿಕೆಯಾದರು ಚಿಕನ್ ಹಾಗೂ ಮಟನ್ ತಿನ್ನಲೇಬೇಕು.‌ ಹೀಗಾಗಿ‌ಯೇ ಚಿಕನ್ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೇವೆ ಅಂತ ಗ್ರಾಹಕ ನವಾಬ್ ಹೇಳಿದರು. ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಆಗಿದ್ದು, ಇನ್ನೂ ಒಂದು ತಿಂಗಳು ಕಾಲ ಬೆಲೆ‌ ಏರಿಕೆಯಾಗುವ ಸಾಧ್ಯತೆ ಇದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ