Bajaj CNG Bike: ಬಡವರ ಪಾಲಿಗೆ ವರದಾನವಾಗಲಿದೆ ಬಜಾಜ್ CNG ಬೈಕ್: ಬಿಡುಗಡೆ ಮಾಹಿತಿ ಬಹಿರಂಗ.

ಸುಮಾರು ಹತ್ತು ವರ್ಷಗಳ ಹಿಂದೆ ಬಜಾಜ್ ನೆಟ್ವರ್ಕ್ ಇಂಡಿಯಾದಲ್ಲಿ ಹೊಸ ಬೈಕ್ ಮಾರ್ಕೆಟ್‌ಗೆ ಹೆಸರು ಮಾಡಿದ್ದು, ಆಗಲೇ ಸ್ವಲ್ಪ ಮಟ್ಟಿಗೆ ಸ್ಥಳೀಯ ಬಜಾಜ್ ಮೋಟರ್‌ಸ್‌ನ ಬೈಕ್‌ಗಳು ಹಳೆಯ ಚಾಲನೆಯ ಬೈಕ್‌ಗಳನ್ನು ಕಟ್ಟಿದ್ದವು. ಆದರೆ ಈಗ, ಬಜಾಜ್ ನೆಟ್ವರ್ಕ್‌ನ ಹೊಸ ಹೊಸ ತಂತ್ರಾಂಶಗಳು ವಿವಿಧ ವಿಧದ ವಿನ್ಯಾಸಗಳಿಗಾಗಿ ಪ್ರಸಿದ್ಧವಾಗಿವೆ. ಆದರೆ, ಇದು ಮುಖ್ಯವಾಗಿ ಹಳೆಯ ಬೈಕ್‌ಗಳಿಗೆ ಆರ್‌ನಾಗದ ವಾತಾವರಣದಲ್ಲಿ ಹೊಸ ಬೈಕ್‌ಗಳನ್ನು ನಿರ್ಮಿಸುವ ಮೂಲಕ ಬಡವರಿಗೆ ಸಹಾಯ ಮಾಡಲು ಹೋರಾಟ ನಡೆಸುತ್ತಿದೆ.

cng bike information in kannada
cng bike information in kannada

ಭಾರತದಲ್ಲಿ ಸಿಎನ್‌ಜಿ ವಾಹನಗಳು ಭಾರೀ ಬೇಡಿಕೆಯನ್ನು ಪಡೆಯುತ್ತಿವೆ. ಪೆಟ್ರೋಲ್, ಡೀಸೆಲ್‌ಗೆ ಹೋಲಿಸಿಕೊಂಡಿರೆ ಸಿಎನ್‌ಜಿ ಅಗ್ಗವಾಗಿ ಸಿಗುತ್ತದೆ. ಜೊತೆಗೆ ಅದ್ಬುತ ಮೈಲೇಜ್ ಕೂಡ ಹಿಂದಿರುಗಿಸುತ್ತದೆ. ಕಾರು, ಆಟೋ, ಬೃಹತ್ ವಾಹನಗಳು ಸಿಎನ್‌ಜಿ ಆಯ್ಕೆಯೊಂದಿಗೆ ಬರುತ್ತವೆಯಾದ್ರೂ ಈವೆರೆಗೆ ದ್ವಿಚಕ್ರ ವಾಹನಗಳಿಗೆ ಈ ಆಯ್ಕೆ ನೀಡಿಲ್ಲ.

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ ವಿಶ್ವದ ಮೊದಲ ಸಿಎನ್‌ಜಿ ದ್ವಿಚಕ್ರ ವಾಹನವನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ಈ ಹೊಸ ಸಿಎನ್‌ಜಿ ಬೈಕ್ ಅನ್ನು ತೀವ್ರವಾಗಿ ಪರೀಕ್ಷಿಸಲಾಗುತ್ತಿದ್ದು, ಕಂಪನಿಯು 2024ರ ದೀಪಾವಳಿ ವೇಳೆಗೆ ಬಿಡುಗಡೆ ಮಾಡಲು ನೋಡುತ್ತಿದೆ. ಒಂದು ವೇಳೆ ಈ ದೀಪಾವಳಿ ತಪ್ಪಿದ್ರೆ ವರ್ಷದ ಕೊನೆಯಲ್ಲಿ ಖಂಡಿತ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಈ ಬೈಕ್ ಅನ್ನು ಬಿಡುಗಡೆ ಮಾಡುವ ಬಗ್ಗೆ ರಾಜೀವ್ ಬಜಾಜ್ ಅವರು ಧೃಡಪಡಿಸಿದ್ದಾರೆ. ಈಗಾಗಲೇ ಈ ಬೈಕ್ ಅನ್ನು ರಸ್ತೆಗಳಲ್ಲಿ ಪರೀಕ್ಷಿಸುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಈ ಹೊಸ ಬೈಕ್‌ಗೆ ಬಜಾಜ್ ಬ್ರೂಜರ್ ಎಂದು ನಾಮಕರಣ ಮಾಡಲಿದ್ದಾರೆ. ಈ 125 ಸಿಸಿ ಸಿಎನ್‌ಜಿ ಬೈಕ್ ಅನ್ನು ಮುಖ್ಯವಾಗಿ ಅರೆ-ನಗರ ಮತ್ತು ಗ್ರಾಮೀಣ ಭಾಗಗಳಲ್ಲಿನ ಗ್ರಾಹಕರಿಗಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಬೆಲೆ: ಮೂಲಗಳ ಪ್ರಕಾರ ಈ ಸಿಎನ್‌ಜಿ ಬೈಕ್ ಅನ್ನು ಅಗ್ಗದ ಬೆಲೆಗೆ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. ಸುಮಾರು 80 ಅಥವಾ 85 ಸಾವಿರ ರೂ. ನಡುವೆ ಇದರ ಬೆಲೆ ಇರಬಹುದು. ಇದರ ಮೈಲೇಜ್ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ ಈಗಿರುವ ಪೆಟ್ರೋಲ್ ಚಾಲಿತ ಬೈಕ್‌ಗಳಿಗಿಂತ ದುಪ್ಪಟ್ಟು ಮೈಲೇಜ್ ನೀಡಲಿದೆಯಂತೆ.

ಸಿಎನ್‌ಜಿ ವಾಹನಗಳು ತಮ್ಮ ಪೆಟ್ರೋಲ್ ಆವೃತ್ತಿಗಳಿಗಿಂತ ಸ್ವಲ್ಪ ಕಡಿಮೆ ಪವರ್ ಉತ್ಪಾದಿಸುತ್ತವೆ. ಆದರೆ, ಮೈಲೇಜ್ ವಿಷಯದಲ್ಲಿ ಮತ್ತೊಂದು ಮಟ್ಟದಲ್ಲಿರುತ್ತದೆ. ಆದ್ದರಿಂದ, ಮುಂಬರುವ ಬಜಾಜ್ ಬ್ರೂಜರ್ 125 ಪರ್ಫಾಮೆನ್ಸ್ ವಿಷಯದಲ್ಲಿ ಅತ್ಯಾಕರ್ಷಕ ಮೋಟಾರ್ ಸೈಕಲ್ ಆಗಿರದೇ ಇರಬಹುದು, ಆದರೆ ಮೈಲೇಜ್ ವಿಷಯದಲ್ಲಿ ಇದು ಹೊಸ ಕ್ರಾಂತಿ ಸೃಷ್ಟಿಸಬಹುದು.

Join Telegram Group Join Now
WhatsApp Group Join Now

ಸವಾಲಿನ ಕೆಲಸ: ಸಿಎನ್‌ಜಿ ಮೋಟಾರ್ ಸೈಕಲ್‌ ನಿರ್ಮಾಣಕ್ಕಿರುವ ದೊಡ್ಡ ಸವಾಲೆಂದರೆ ಸಿಲಿಂಡರ್ ಟ್ಯಾಂಕ್ ಅನ್ನು ಪ್ಯಾಕೇಜಿಂಗ್ ಮಾಡುವುದು. ಬಜಾಜ್ ಈ ಸಮಸ್ಯೆಯನ್ನು ಪರಿಹರಿಸಲು ಮೋಟಾರ್ ಸೈಕಲ್ ಉದ್ದಕ್ಕೂ, ಡಬಲ್ ಕ್ರೇಡಲ್ ಫ್ರೇಮ್‌ನ ಮಿತಿಯೊಳಗೆ ಇರಿಸುವ ಮೂಲಕ ಪರಿಹರಿಸಿದೆ ಎಂದು ತೋರುತ್ತಿದೆ. ಹಾಗಾಗಿಯೇ ಈ ಹಿಂದೆ ಪರೀಕ್ಷೆ ವೇಳೆ ಕಾಣಿಸಿಕೊಂಡಿದ್ದ ಸಿಎನ್‌ಜಿ ಬೈಕ್ ಯಾವುದೇ ಪೆಟ್ರೋಲ್ ಟ್ಯಾಂಕ್ ಒಳಗೊಂಡಿರಲಿಲ್ಲ.

ಆದ್ದರಿಂದ ಕಾರುಗಳಿಗಿಂತ ಭಿನ್ನವಾಗಿ ಬೈಕಿನಲ್ಲಿ ಯಾವುದೇ ಡ್ಯುಯಲ್ ಫ್ಯೂಯಲ್ ಪರಿಹಾರ ಲಭ್ಯವಿರುವುದಿಲ್ಲ. ಪೆಟ್ರೋಲ್ ಟ್ಯಾಂಕ್ ಇರಿಸಲಾದ ಪ್ರದೇಶವನ್ನು ಏರ್ ಫಿಲ್ಟರ್ ಗಳು, ಬ್ಯಾಟರಿ ಮತ್ತು ಇತರ ವಿಷಯಗಳಿಗೆ ಬಳಸಲಾಗುತ್ತದೆ. ಸ್ವಲ್ಪ ಇಂಧನವನ್ನು ಆನ್‌ಬೋರ್ಡ್‌ನಲ್ಲಿ ಸಂಗ್ರಹಿಸುವ ಲಿಂಪ್ ಹೋಮ್ ರಿಸರ್ವ್ ಇರಬಹುದು, ಇದರಿಂದಾಗಿ ನೀವು ಮೋಟಾರ್‌ಸೈಕಲ್ ಅನ್ನು ಹತ್ತಿರದ ಸಿಎನ್‌ಜಿ ಬಂಕ್‌ಗೆ ಕೊಂಡೊಯ್ಯಬಹುದು.

ಉಳಿದಂತೆ ಬ್ರೂಜರ್ 125 ಬೈಕ್ ಎಲ್ಲಾ ಪೆಟ್ರೋಲ್ ಚಾಲಿತ ಬೈಕ್‌ಗಳಂತೆ ಟೆಲಿಸ್ಕೋಪಿಕ್ ಫೋರ್ಕ್, ಸಿಬಿಎಸ್ ನೊಂದಿಗೆ ಫ್ರಂಟ್ ಡಿಸ್ಕ್ ಬ್ರೇಕ್ ಇರುತ್ತದೆ. ಬಜಾಜ್ ಕಂಪನಿಯು, ಶೀಘ್ರದಲ್ಲೇ ಬ್ರೂಜರ್ 125 ಸಿಎನ್‌ಜಿ ಬೈಕ್ ಬಿಡುಗಡೆ ಖಚಿತಪಡಿಸುವ ಪ್ರಕಟಣೆಯನ್ನು ಮಾಡಲಿದೆ. ಜೊತೆಗೆ ರಾಜೀವ್ ಬಜಾಜ್ ಅವರು ಮುಂಬರುವ ತಿಂಗಳುಗಳಲ್ಲಿ ಅತಿದೊಡ್ಡ ಪಲ್ಸರ್ ಸಿಎನ್‌ಜಿ ಬಿಡುಗಡೆಯನ್ನು ಸಹ ಖಚಿತಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ