LPG Subsidy: LPG ಗ್ಯಾಸ್ ಸಬ್ಸಿಡಿ ರದ್ದು ! ಹೌದು ತಕ್ಷಣ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ರದ್ದು.

ಮನೆಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ಶುದ್ಧ ಇಂಧನ ಅಳವಡಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ದೇಶಾದ್ಯಂತ ಗ್ರಾಹಕರಿಗೆ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಬ್ಸಿಡಿಗಳನ್ನು ಒದಗಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕ್ರಮವು ನಿರ್ಣಾಯಕ ಮನೆಯ ಅಗತ್ಯವು ಕೈಗೆಟುಕುವ ದರದಲ್ಲಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ ಆದರೆ ಸಮರ್ಥನೀಯ ಮತ್ತು ಪರಿಸರ ಸ್ನೇಹಿ ಇಂಧನ ಬಳಕೆಯ ಸರ್ಕಾರದ ದೊಡ್ಡ ದೃಷ್ಟಿಗೆ ಕೊಡುಗೆ ನೀಡುತ್ತದೆ.

December 31 is the last day to update LPG subsidy e-kyc
December 31 is the last day to update LPG subsidy e-kyc

ಇತ್ತೀಚಿಗೆ ದೇಶದಲ್ಲಿ ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಗ್ಯಾಸ್ ಬಹಳ ಮುಖ್ಯವಾಗಿದೆ. ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ LPG ಗ್ರಾಹಕರಿಗೆ ಹೊಸ ಆದೇಶವನ್ನು ಹೊರಡಿಸಿದೆ.

LPG ಗ್ರಾಹಕರಿಗೆ ಕೇಂದ್ರ ಸರ್ಕಾರದ ಹೊಸ ಆದೇಶ
ನೀವು LPG ಅನಿಲದ ಗ್ರಾಹಕರಾಗಿದ್ದರೆ ಕೇಂದ್ರ ಸರ್ಕಾರದ ಈ ಹೊಸ ನಿಯಮವನ್ನು ತಿಳಿಯುದು ಅವಶ್ಯಕವಾಗಿದೆ. ಹೌದು LPG ಗ್ರಾಹಕರ ಕುರಿತಂತೆ ಕೇಂದ್ರ ಸರ್ಕಾರ ಹೊಸ ನಿರ್ಧಾರವನ್ನು ಪ್ರಕಟಿಸಿದೆ. ಅದೇನೆಂದರೆ LPG ಗ್ರಾಹಕರು LPG ಗ್ಯಾಸ್ ಸಿಲಿಂಡರ್ ಗೆ e-kyc ಮಾಡುವಂತೆ ಆದೇಶ ಹೊರಡಿಸಿದೆ.

ಈಗಾಗಲೇ ಹಲವು ನಾಗರೀಕ ಸೇವೆಗಳಿಗೆ e-kyc ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿಯಮದ ಪ್ರಕಾರ LPG ಗ್ರಾಹಕರು e-kyc ಮಾಡಿಸದಿದ್ದರೆ ಅವರ ಕನೆಕ್ಷನ್ ರದ್ದಾಗಲಿದೆ.

e-kyc ಅಪ್ಡೇಟ್ ಮಾಡಲು ಡಿಸೇಂಬರ್ 31 ಕೊನೆಯ ದಿನ
LPG ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ರಾಹಕರ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ವಿತರಕರ ಮೂಲಕ ಮಾಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ನಿರ್ದಿಷ್ಟ ಅಪ್ಲಿಕೇಶನ್ ಮೂಲಕ LPG ಗ್ರಾಹಕರ ಬೆರಳಚ್ಚು ಅಥವಾ ಮುಖವನ್ನು ಸ್ಕ್ಯಾನ್ ಮಾಡುತ್ತಾರೆ.

ನಂತರ ಅವರು ನಿರ್ದಿಷ್ಟ ವೆಬ್ ಸೈಟ್ ನಲ್ಲಿ ಬಯೋಮೆಟ್ರಿಕ್ ಗುರುತಿನ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ. e-kyc ಅಪ್ಡೇಟ್ ಮಾಡಲು ಡಿಸೇಂಬರ್ 31 ಕೊನೆಯ ದಿನ ಆಗಿದೆ. ಈ ದಿನಾಂಕದ ಒಳಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವವರು ಬಂದಾಗ ನಿಮ್ಮ e-kyc ಅನ್ನು ಅಪ್ಡೇಟ್ ಮಾಡಿಸಬೇಕು ಇಲ್ಲದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ