ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಬರೆಯಲಿದೆ ಜೋಳದ ಬೆಲೆ, ಅಂಕಿ-ಅಂಶ, ಮಾಹಿತಿ ವಿವರ

ಐತಿಹಾಸಿಕ ಘಟನೆಯೊಂದರಲ್ಲಿ, ಜೋಳದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರುತ್ತಿದ್ದಂತೆ ಜಾಗತಿಕ ಕೃಷಿ ಕ್ಷೇತ್ರವು ಅಭೂತಪೂರ್ವ ಮೈಲಿಗಲ್ಲುಗೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಮಾರುಕಟ್ಟೆಯ ಪ್ರವೃತ್ತಿಗಳಿಂದ ಗಮನಾರ್ಹವಾದ ನಿರ್ಗಮನವನ್ನು ಗುರುತಿಸುವ ಈ ಉಲ್ಬಣವು ರೈತ ಸಮುದಾಯ, ಸರಕು ಮಾರುಕಟ್ಟೆಗಳು ಮತ್ತು ವಿಶ್ವಾದ್ಯಂತ ಆರ್ಥಿಕತೆಗಳ ಮೂಲಕ ಆಘಾತ ತರಂಗಗಳನ್ನು ಕಳುಹಿಸಿದೆ.

For the first time the historical record will be set for the price of corn
For the first time the historical record will be set for the price of corn

ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಜೋಳಕ್ಕೆ ಹೆಚ್ಚಿನ ಬೆಲೆ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಏಕೆಂದರೆ ಮಾರುಕಟ್ಟೆಗೆ ಆವಕ ಆಗುವುದು ಕಡಿಮೆಯಾಗಿದ್ದಲ್ಲದೇ, ಈ ಬಾರಿಯ ಹಿಂಗಾರು ಜೋಳ (Maize) ಬಿತ್ತನೆ ಕೂಡ ಕಡಿಮೆ ಆಗಿದೆ. ಆದ್ದರಿಂದ ಈ ವರ್ಷ ಕ್ವಿಂಟಾಲ್ ಜೋಳಕ್ಕೆ ಅಂದಾಜು 8,000 ರೂ.ವರೆಗೆ ಏರಿಕೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಬೇರೆ ಬೇರೆ ಉತ್ಪನ್ನ ಬೆಳೆಯುವ ರೈತರು ಆಹಾರ ಧಾನ್ಯಗಳ ಪ್ರಮುಖ ಬೆಳೆಯಾದ ಜೋಳ ಬೆಳೆಯುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಿಂಗಾರು ಹಂಗಾಮಿನ ವೇಳೆ ಹೆಚ್ಚಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಈ ಭಾರಿ ಅಗತ್ಯವಾಗಿದ್ದ ‘ಹಿಂಗಾರು’ ಮಳೆ ಕೈ ಕೊಟ್ಟಿದ್ದರಿಂದ ಜೋಳ ಬಿತ್ತನೆಯಲ್ಲಿ ಕುಸಿತವಾಗಿದೆ. ಹೀಗಾಗಿ ಈ ಬಾರಿ ಹಿಂದೆಂದಿಗಿಂತಲೂ ಜೋಳದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ.

ಇದೆಲ್ಲ ಬೆಳವಣಿಗೆ ಮಧ್ಯೆ ಈ ವರ್ಷ ಜೋಳಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರತಿ ಕ್ವಿಂಟಾಲ್ ಬೆಲೆ (ರೂ.8000/ಕ್ವಿಂಟಾಲ್) ಗಗನಕ್ಕೆರಲಿದೆ ಎಂದು ಕೃಷಿ ಸಹಾಯ ನಿರ್ದೇಶಕರೊಬ್ಬರು ಮಾಹಿತಿ ನೀಡಿದ್ದಾರೆ. ದಾಖಲೆಯ ಮಟ್ಟದ ಈ ಬೆಲೆ ಕಂಡು ರೈತರು ತಾವ್ಯಾಕೆ ಈ ಬಾರಿ ಜೋಳ ಬೆಳೆಯಲಿಲ್ಲ ಎಂದು ಕೊರಗುವ ಸನ್ನಿವೇಶ ಎದುರಾಗಿದೆ.

ಜೋಳ ಅಭಾವಕ್ಕೆ ಮಳೆ ಕೊರತೆಯೂ ಕಾರಣ

ಮಾರುಕಟ್ಟೆಗೆ ಆಮದು ಕಡಿಮೆ ಇದ್ದರೂ ಜೋಳ ಬೆಳೆಯುತ್ತಿಲ್ಲ. ಈ ಹಿಂದೆ ಜಾನುವಾರುಗಳಿಗೆ ಮೇವು ಬೇಕೆಂದು ಕೆಲವರು ಜೋಳ ಬೆಳೆಯುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಜಾನುವಾರುಗಳು ಕಡಿಮೆ ಆಗುತ್ತಿವೆ. ಇನ್ನು ಅಲ್ಪ ಸ್ವಲ್ಪ ಜನ ಬೆಳೆದರೂ ಸಹ ಆ ಜೋಳಗಳನ್ನು ತಮ್ಮ ಮನೆಗೆ ಇಟ್ಟುಕೊಳ್ಳುತ್ತಾರೆ. ಇದರಿಂದಲೂ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಅಭಾವ ಸೃಷ್ಟಿಯಾಗುತ್ತಿತ್ತು. ಇದೀಗ ಆ ಅಭಾವದ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

Join Telegram Group Join Now
WhatsApp Group Join Now

ಈ ಭಾರಿಯು ಅಂತದ್ದೇ ವಾತಾವರಣ ನಿರ್ಮಾಣವಾಗಲಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯು ಏರಿಕೆ ಆಗಲಿದೆ. ಜೋಳ ಬೆಳೆಯುವ ರೈತನೇ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಜೋಳ ಖರೀದಿಸುವ ಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿ ನಿರ್ಮಾಣಕ್ಕೆ ಮಳೆ ಕೊರತೆಯೇ ಕಾರಣ ಅಂತಲೂ ರೈತರು ದೂರಿದ್ದಾರೆ.

‘ಜೋಳ’ ಬೆಳೆಗೂ ಸರ್ಕಾರ ಪ್ರೋತ್ಸಾಹ ನೀಡಬೇಕು

ಜೋಳ ಬೆಳೆಯಲು ಕಡಿಮೆ ತೇವಾಂಶ ಇದ್ದರೂ ಸಾಕಾಗುತ್ತದೆ. ಆದರೆ ಜೋಳ ಬಿತ್ತದ ಮೇಲೆ ಅದು ಗೇಣುದ್ದ ಬೆಳೆಯುವವರೆಗೆ ಭೂಮಿಯಲ್ಲಿ ತೇವಾಂಶ ಇರಬೇಕು. ಆದರೆ ಈ ಭಾರೀ ಇಷ್ಟು ತೇವ ಹಿಡಿಯುವಷ್ಟು ಮಳೆ ಆಗಿಲ್ಲ. ಇದು ಸಹ ಜೋಳ ಬೆಳೆ ಹೆಚ್ಚಳಕ್ಕೆ ಕಾರಣವಾಗಿದೆ.

‘ಹತ್ತಿ, ತೊಗರಿ’ ಬೆಳೆಯುವ ರೈತರಿಗೆ ಜೋಳ ಬೆಳೆಯುವ ಕುರಿತು ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ಕೃಷಿ ಇಲಾಖೆಯಿಂದ ‘ಸಿರಿಧಾನ್ಯ’ ಬೆಳೆಯುಲು ಪ್ರೋತ್ಸಾಹ ಸಿಗುತ್ತಿದೆ. ಆದರೆ ಈ ಸಾಲಿನಲ್ಲಿ ‘ಬಿಳಿಜೋಳ’ ಸೇರ್ಪಡೆಯಾಗಿಲ್ಲ. ಹೀಗಾಗಿ ಜೋಳ ಬೆಳೆಗೂ ಉತ್ತೇಜನ ನೀಡುವ ಜೊತೆಗೆ ಸಬ್ಸಿಡಿ ಬೀಜ ವಿತರಣೆಗೆ ಸರ್ಕಾರ ಮುಂದಾಗಬೇಕು. ತರಬೇತಿ ನೀಡಬೇಕು ಎಂದು ಅಫಜಲಪುರದ ರೈತರು ಒತ್ತಾಯಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆ

ಜೋಳಕ್ಕೆ ದಾಖಲೆ ಮಟ್ಟದಲ್ಲಿ ಬೆಲೆ ಬರುವುದು ಒಂದು ಕಡೆಯಾದರೆ, ಬಿತ್ತನೆ ಕಡಿಮೆ ಆಗಿದೆ. ಸಣ್ಣ ಹಿಸುವಳಿದಾರರು ಮಾರುಕಟ್ಟೆಗೆ ಬೆಳೆದ ಜೋಳ ನೀಡದೇ ತಮಗೇ ವರ್ಷ ಪೂರ್ತಿ ಬೇಕೆಂದು ಇಟ್ಟುಕೊಳ್ಳುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಖರೀದಿ ಜೋಳ ನೆಚ್ಚಿಕೊಂಡಿದ್ದ ಜನಸಾಮಾನ್ಯರಿಗೆ ಬರಗಾಲದ ಸಂದರ್ಭದಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಲಿದೆ. ಅವರು ಪ್ರತಿ ಕೇಜಿ ಜೋಳಕ್ಕೆ 80-100 ರೂಪಾಯಿ ಕೊಟ್ಟು ಖರೀದಿಸಬೇಕಾಗುತ್ತದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ