Hello ಸ್ನೇಹಿತರೇ,, ತೈಲ ಮಾರುಕಟ್ಟೆಯಲ್ಲಿ ಕಂಪನಿಗಳು ವಾಣಿಜ್ಯ Gas Cylinder ಗಳ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಇಳಿಕೆ ಮಾಡಿದೆ. ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬೆನ್ನಲ್ಲೇ ಕೇಂದ್ರ ಸರ್ಕಾರ Gas Cylinder ಸಬ್ಸಿಡಿಯನ್ನು ಕೂಡ ಘೋಷಿಸಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ (PM Ujjwala Yojana) ಅಡಿಯಲ್ಲಿ 200 ರೂ. ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇನ್ನು ದೇಶದಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಕಡಿಮೆ ಆಗುವ ಮೂಲಕ ಗ್ರಾಹಕರಿಗೆ ಖುಷಿ ನೀಡಿದೆ.

ಇನ್ನು ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ 200 ರೂ. ಇಳಿಕೆಯ ನಂತರ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಗ್ಯಾಸ್ ಬೆಲೆಯ ಇಳಿಕೆಯ ಖುಷಿಯಲ್ಲಿದ್ದ ಜನರಿಗೆ ಇದೀಗ ಮತ್ತೊಂದು ಖುಷಿ ಸುದ್ದಿ ಹೊರಬಿದ್ದಿದೆ. ಗ್ಯಾಸ್ ಬೆಲೆ ಮತ್ತಷ್ಟು ಕಡಿಮೆ ಮಾಡಲು ಇದೀಗ ಈ ಸರ್ಕಾರ ಪಡಿತರ ಚೀಟಿದಾರರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.
ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ದೇಶದಲ್ಲಿ ಹೆಚ್ಚುತ್ತಿರುವ ಗ್ಯಾಸ್ ಬೆಲೆಗೆ ಬ್ರೇಕ್ ನೀಡಲು ಇದೀಗ ಗೋವಾ ಸರ್ಕಾರ ಮುಂದಾಗಿದೆ. ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಪಡಿತರ ಚೀಟಿದಾರರು ಕಡಿಮೆ ಬೆಲೆ Gas Cylinder ಗಳನ್ನೂ ಖರೀದಿಸಬಹುದಾಗಿದೆ. ಇನ್ನು ಸರ್ಕಾರೀ ತೈಲ ಕಂಪನಿಗಳು ದೇಶದಾದ್ಯಂತ ಹೊಸ ಗ್ಯಾಸ್ ಬೆಲೆ ವ್ಯವಸ್ಥೆಯನ್ನು ಪರಿಚಯಿಸಲು ಹೊರಟಿದೆ. ಇದರಿಂದಾಗಿ ಜನಸಾಮಾನ್ಯರು ಗ್ಯಾಸ್ ಬೆಲೆಯ ಏರಿಕೆಯಿಂದ ಪರಿಹಾರವನ್ನು ಪಡೆಯಬಹುದು.
ಕೇವಲ 428 ರೂ ನಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಸದ್ಯ ಗೋವಾ ಸರ್ಕಾರ ಅಂತ್ಯೋದಯ ಆನಂದ್ ಯೋಜನೆಯಡಿ ಕಾರ್ಡ್ ಮಾಡಿದವರಿಗೆ ಕೇವಲ 428 ರೂ. ಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡಲು ಮುಂಡಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶಿರ್ಪಾದ್ ವೈ ನಾಯಕ್ ಅವರು ಪಣಜಿಯಲ್ಲಿ ‘ಎಲ್‌ಪಿಜಿ ಸಿಲಿಂಡರ್ ಮರುಪೂರಣಕ್ಕಾಗಿ ಮುಖ್ಯಮಂತ್ರಿ ಆರ್ಥಿಕ ನೆರವು ಯೋಜನೆ’ ಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಕಡಿಮೆ ಬೆಲೆಗೆ ಸಿಗಲಿದೆ.
ಇನ್ನು ಓದಿ : ಈ ಸೇವೆಗಳಿಗೆ ಜನನ ಪ್ರಮಾಣ ಪತ್ರ ಕಡ್ಡಾಯ: ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ
428 ರೂ. ಗಳಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವುದು ಹೇಗೆ..?
ದೇಶದಲ್ಲಿ LPG Cylinder ದರವನ್ನು 200 ರೂ. ಗಳಷ್ಟು ಕಡಿಮೆ ಮಾಡಲಾಗಿದ್ದು, ಈ ಮೂಲಕ ಗೋವಾದ ರಾಜಧಾನಿ ಪಣಜಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 903 ರೂ. ಆಗಿದೆ. ದಕ್ಷಿಣ ಗೋವಾದಲ್ಲಿ ಸಿಲಿಂಡರ್ ಬೆಲೆ 917 ರೂ. ಆಗಿದೆ. ಇನ್ನು PM ಉಜ್ವಲ ಯೋಜನೆಯಿಂದ 200 ರೂ., ಸರಕಾರದಿಂದ 275 ರೂ. ಗಳ ಲಭ್ಯತೆಯ ನಂತರ Gas Cylinder ಬೆಲೆ 428 ರೂ. ಆಗುತ್ತದೆ.
ಈ ಮೂಲಕ ಗೋವಾ ರಾಜ್ಯದಲ್ಲಿ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ ಹೊಂದಿರುವವರು ಕೇವಲ 428 ರೂ. ಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ಸರ್ಕಾರ ಕೂಡ ಗ್ಯಾಸ್ ಸಿಲಿಂಡರ್ ವಿಷಯವಾಗಿ ಹೊಸ ನಿಯಮವನ್ನ ಜಾರಿಗೆ ತರುವ ಸಾಧ್ಯತೆ ಇದ್ದು ಕರ್ನಾಟಕದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆಗುವ ಲಕ್ಷಣ ಇದೆ.