Hello ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಆರಂಭಗೊಂಡಾಗಿಂದ ಸಾಕಷ್ಟು ನಿಯಮಗಳು ಬದಲಾಗುತ್ತಿದ್ದೆ. ಇನ್ನು ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಮೇ 2023 ರಲ್ಲಿನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಗೆಲುವನ್ನು ಸಾಧಿಸಿದೆ. ರಾಜ್ಯದ ಜನತೆಗೆ ಐದು ಉಚಿತ ಯೋಜನೆಗಳನ್ನು ಸರಕಾರ ಘೋಷಿಸಿದ್ದ ಕಾರಣ ರಾಜ್ಯದ ಜನತೆ ಕೈ ಗೆ ಬೆಂಬಲ ನೀಡಿದ್ದರು. ಇನ್ನು ಕಾಂಗ್ರೆಸ್ ತನ್ನ ಅಧಿಕಾರವನ್ನು ಆರಂಭಿಸಿದಾಗಿಂದ ಘೋಷಣೆ ಹೊರಡಿಸಿದ ಐದು ಯೋಜನೆಗಳ ಅನುಷ್ಠಾನ ಕಾರ್ಯದಲ್ಲಿ ತೊಡಗಿಕೊಂಡಿದೆ.

ಉಚಿತ ಯೋಜನೆಗಳ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ,ಆಸ್ಪತ್ರೆ
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹ ಜ್ಯೋತಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳು ಪಡೆಯುತ್ತಿದ್ದಾರೆ. ಇನ್ನು ಗೃಹ ಲಕ್ಷ್ಮಿ ಯೋಜನೆಗಳ ಲಭ್ಯ ಆಗಸ್ಟ್ 31 ರಂದು ಅರ್ಹ ಫಲಾನುಭವಿಗಳಿಗೆ ಸಿಗಲಿದೆ. ಕಾಂಗ್ರೆಸ್ ಸರ್ಕಾರ ಘೋಸಿರುವ ಉದ್ಯೋಗ ಭತ್ಯೆ ಯೋಜನೆಯಾಗಿರುವ ಯುವ ನಿಧಿ ಸದ್ಯದಲ್ಲೇ ಘೋಷಣೆಯಾಗಲಿದೆ.
ಈಗಾಗಲೇ ಯುವ ನಿಧಿ ಯೋಜನೆ ಅರ್ಹತೆಯ ಬಗ್ಗೆ ಅಪ್ಡೇಟ್ ನೀಡಲಾಗಿದೆ. ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆಯುತ್ತಿರುವ ಜನತೆಗೆ ರಾಜ್ಯ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಉಚಿತ ಯೋಜನೆಗಳ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮಗದೊಂದು ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಯೋಜನೆಯಡಿ ಕೋಟ್ಯಂತರ ಜನರು ಲಾಭ ಪಡೆದುಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆ ಜಾರಿ
ಜನರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧಿಯನ್ನು ಒದಗಿಸುವ ಗೃಹ ಆರೋಗ್ಯ (Gruha Arogya) ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆ ರೂಪಿಸಲು ಚಿಂತನೆ ನಡೆಸಿದೆ. ಈ ಯೋಜನೆಯಡಿ ಆರೋಗ್ಯ ಸಿಬ್ಬಂಧಿ ಎಲ್ಲ ಮನೆಗಳಿಗೆ ಭೇಟಿ ನೀಡಿ ಎಲ್ಲಾ ಕುಟುಂಬದ ಸದ್ಯಸ್ಯರನ್ನು ತಪಾಸಣೆ ನಡೆಸಲಿದ್ದಾರೆ.
ಇಂತಹ ಆರೋಗ್ಯ ಸಮಸ್ಯೆಗಳಿಗೆ ಗೃಹ ಆರೋಗ್ಯ ಯೋಜನೆ ಸಹಾಯವಾಗಲಿದೆ
ಬಿಪಿ, ಮಧುಮೇಹ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲೇ ಔಷಧ ನೀಡಲಿದ್ದು, ಸಂಕೀರ್ಣ ಕಾಯ್ದೆಗಳನ್ನು ಪತ್ತೆ ಹಚ್ಚಿ ಗಂಭೀರ ಸಮಸ್ಯೆ ಇದ್ದವರನ್ನು ಗುರುತಿಸಿ ಸೂಕ್ತ ಚಿಕೆತ್ಸೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದಾರೆ.
ಇನ್ನುಮುಂದೆ ರಾಜ್ಯದ ಜನತೆಗೆ ಸರ್ಕಾರ ಐದು ಉಚಿತ ಯೋಜನೆಗಳ ಜೊತೆಗೆ ಗೃಹ ಆರೋಗ್ಯ ಯೋಜನೆಯ ಲಾಭವನ್ನು ಕೂಡ ಪಡೆಯಬಹುದಾಗಿದೆ. ಸದ್ಯದಲ್ಲೇ ಈ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಾಗುತ್ತದೆ.