ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಲು ಹೀಗೆ ಮಾಡಿ..ಇದು ಸಂಪೂರ್ಣ ಉಚಿತ! ಜಿಯೋ ಏರ್‌ಫೈಬರ್‌.

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಬಹುದೇ?..ಅರೇ, ಸಿಮ್‌ ಇಲ್ಲದೇ ಕರೆ ಮಾಡಲು ಹೇಗೆ ಸಾಧ್ಯ ಅಂತೀರಾ. ಅಚ್ಚರಿ ಎನಿಸಿದರೂ, ಸಿಮ್‌ ಕಾರ್ಡ್‌ ಇರದೇ ಕರೆ ಮಾಡಲು ಅವಕಾಶ ಇದೆ. ಈ ವಿಧಾನಕ್ಕೆ ನೆರವಾಗಲಿದೆ ಜಿಯೋ ಏರ್‌ಫೈಬರ್‌ ಕನೆಕ್ಷನ್.

How to make call without SIM
How to make call without SIM

ತಂತ್ರಜ್ಞಾನದ ಪ್ರಗತಿಗಳು ಒಮ್ಮೆ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಗಡಿಗಳನ್ನು ಮರುರೂಪಿಸುತ್ತಿರುವ ಜಗತ್ತಿನಲ್ಲಿ, ಸಿಮ್ ಕಾರ್ಡ್ ಇಲ್ಲದೆ ಕರೆ ಮಾಡುವ ಸಾಮರ್ಥ್ಯವು ಈಗ ರಿಯಾಲಿಟಿ ಆಗುತ್ತಿದೆ. ಈ ಅದ್ಭುತ ಬೆಳವಣಿಗೆಯು ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ, ಅಲ್ಲಿ ಸಾಂಪ್ರದಾಯಿಕ ನಿರ್ಬಂಧಗಳು ಸವಾಲು ಮತ್ತು ನವೀನ ಪರಿಹಾರಗಳಿಂದ ಹೊರಬರುತ್ತವೆ.

ಕರೆಗಳನ್ನು ಮಾಡಲು ಸಿಮ್ ಕಾರ್ಡ್ ಅನಿವಾರ್ಯವಾದ ಪೂರ್ವಾಪೇಕ್ಷಿತವಾಗಿದ್ದ ದಿನಗಳು ಹೋಗಿವೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಪ್ರವರ್ತಕ ಉಪಕ್ರಮಗಳಿಗೆ ಧನ್ಯವಾದಗಳು, ವ್ಯಕ್ತಿಗಳು ಈಗ ಭೌತಿಕ SIM ಕಾರ್ಡ್‌ನ ಅಗತ್ಯವಿಲ್ಲದೇ ಸಂವಹನದ ಅನುಕೂಲತೆಯನ್ನು ಆನಂದಿಸಬಹುದು.

ಹೌದು, ಜಿಯೋ ಏರ್‌ಫೈಬರ್‌ ಕನೆಕ್ಷನ್‌ ನೆರವಿನಿಂದ, ಸಿಮ್‌ ಕಾರ್ಡ್‌ ಇಲ್ಲದೇ ಕೂಡಾ ಕರೆ ಮಾಡಲು ಸಾಧ್ಯ ಇದೆ.

ಅದು ಕೂಡಾ ಅನಿಯಮಿತ ವಾಯಿಸ್‌ ಕರೆ ಮಾಡಲು ಅವಕಾಶ ಇದೆ. ಹಾಗಾದರೇ ಜಿಯೋ ಏರ್‌ಫೈಬರ್‌ ಮೂಲಕ ಕರೆ ಮಾಡುವುದು ಹೇಗೆ? ಜಿಯೋ ಏರ್‌ಫೈಬರ್‌ನ ಪ್ರಮುಖ ರೀಚಾರ್ಜ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಿಯೋಜಾಯಿನ್‌ (JioJoin App) ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಬೇಕು. ಬಳಿಕ ಆ ಆಪ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್ ನಮೂದಿಸಿ ರಿಜಿಸ್ಟರ್‌ ಆಗುವುದು. ರಿಜಿಸ್ಟರ್ ಆದ ಬಳಿಕ ಜಿಯೋ ಏರ್‌ಫೈಬರ್‌ ನಂಬರ್‌ ಸಿಗಲಿದೆ. ನಂತರ ಬಳಕೆದಾರರು ವಾಯಿಸ್‌ ಕರೆ ಮಾಡಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿಮ್ಮ ಫೋನ್‌, ಜಿಯೋ ಏರ್‌ಫೈಬರ್‌ ಜೊತೆಗೆ ವೈ-ಫೈ ಕನೆಕ್ಟ್‌ ಆಗಿರಬೇಕು.

Join Telegram Group Join Now
WhatsApp Group Join Now

ಜಿಯೋ ಏರ್‌ ಫೈಬರ್‌ ಪ್ಲ್ಯಾನ್‌ಗಳ ಮಾಹಿತಿ

ಜಿಯೋ ಏರ್‌ ಫೈಬರ್‌ 599ರೂ. ಯೋಜನೆಯು 30mpbs ವೇಗದಲ್ಲಿ ಕೆಲಸ ನಿರ್ವಹಿಸಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಇದರ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್‌, ಜೀ5, ಜಿಯೋ ಸಿನಿಮಾ, ಸನ್‌ ನೆಕ್ಸ್ಟ್‌ ಸೇರಿದಂತೆ 14 ಓಟಿಟಿ ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ. 14 ಆಪ್ಸ್‌ ಸೇವೆ ಪಡೆದಿದೆ.

ಜಿಯೋ ಏರ್‌ ಫೈಬರ್‌ 899ರೂ. ಪ್ಲ್ಯಾನ್‌ 100mpbs ವೇಗದ ಸೌಲಭ್ಯ ಪಡೆದಿದೆ. ಇದು 550+ ಡಿಜಿಟಲ್ ಕನೆಕ್ಷನ್‌ಗಳನ್ನು ಒಳಗೊಂಡಿದ್ದು, ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್‌, ಜೀ5, ಜಿಯೋ ಸಿನಿಮಾ, ಸನ್‌ ನೆಕ್ಸ್ಟ್‌ ಸೇರಿದಂತೆ 14 ಓಟಿಟಿ ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ.

ಜಿಯೋ ಏರ್‌ ಫೈಬರ್‌ 1199ರೂ. ರೀಚಾರ್ಜ್‌ ಯೋಜನೆಯು 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮಿಯಂ ಸೇವೆ ಸೇರಿದಂತೆ ಡಿಸ್ನಿ+ ಹಾಟ್‌ಸ್ಟಾರ್‌, ಜೀ5, ಜಿಯೋ ಸಿನಿಮಾ, ಸನ್‌ ನೆಕ್ಸ್ಟ್‌ ಸೇರಿದಂತೆ 14 ಓಟಿಟಿ ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 300mpbs ಯೋಜನೆಯ ದರವು 1499ರೂ ಆಗಿದೆ. ಈ ಪ್ಲ್ಯಾನ್‌ 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದೆ. ಇದರೊಂದಿಗೆ 14 ಆಪ್ಸ್‌ ಸೇವೆ ಹಾಗೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ