HSRP ಅಳವಡಿಕೆಯ ಹೆಸರಿನಲ್ಲಿ ಆರಂಭವಾಗಿದೆ ಹೊಸ ರೀತಿಯ ಸ್ಕ್ಯಾಮ್. HSRP ನಂಬರ್ ಪ್ಲೇಟ್ ಹಾಕಿಸುವವರೇ ಎಚ್ಚರ!

HSRP Online Scam

HSRP Online Scam: ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (ಎಚ್‌ಎಸ್‌ಆರ್‌ಪಿ) ರಾಷ್ಟ್ರವ್ಯಾಪಿ ಅನುಷ್ಠಾನವು ವೇಗವನ್ನು ಪಡೆಯುತ್ತಿದೆ, ಗೊಂದಲದ ಪ್ರವೃತ್ತಿ ಹೊರಹೊಮ್ಮಿದೆ. ಆನ್‌ಲೈನ್ ಸ್ಕ್ಯಾಮರ್‌ಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸ್ವಾಧೀನಕ್ಕೆ ಸಂಬಂಧಿಸಿದ ಮೋಸದ ಯೋಜನೆಗಳನ್ನು ರೂಪಿಸುವ ಮೂಲಕ ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಲು ಸಾರ್ವಜನಿಕರ ಉತ್ಸುಕತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಂಚಕ ತಂತ್ರಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಲು ಮತ್ತು ಜಾಗರೂಕರಾಗಿರಿ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ತುರ್ತು ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.

HSRP Online Scam
HSRP Online Scam

ಎಚ್‌ಎಸ್‌ಆರ್‌ಪಿ ಉಪಕ್ರಮವು ವಾಹನ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ನಿಯಂತ್ರಕ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಈ ವಿಶೇಷ ಪ್ಲೇಟ್‌ಗಳು ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದ್ದು, ವಾಹನ-ಸಂಬಂಧಿತ ಅಪರಾಧಗಳನ್ನು ತಡೆಯುವ ಮತ್ತು ರಾಷ್ಟ್ರದಾದ್ಯಂತ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಸದ್ಯ ದೇಶದಲ್ಲಿ HSRP Number Plate ಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ವಾಹನ ಸವಾರರು ಈ HSRP ಅಳವಡಿಕೆಯ ಬಗ್ಗೆ ಹೆಚ್ಚು ಚಿಂತಿಸುವಂತಾಗಿದೆ. ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಎಲ್ಲ ವಾಹನ ಮಾಲೀಕರು ಕೂಡ HSRP Registration ಮಾಡಿಸುವಲ್ಲಿ ಬ್ಯುಸಿ ಆಗಿದ್ದಾರೆ.

HSRP ನಂಬರ್ ಪ್ಲೇಟ್ ಅಪ್ಲೈ ಮಾಡುವ ಮುನ್ನ ಎಚ್ಚರ\

ಇನ್ನು HSRP Number Plate ಯಾವುದೇ ಅಂಗಡಿಗಳಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಸಾರಿಗೆ ಇಲಾಖೆ ಪ್ರತ್ಯೇಕ ವೆಬ್ ಸೈಟ್ ಅನ್ನು ಪರಿಚಯಿಸಿದೆ. ಆನ್ಲೈನ್ ನಲ್ಲಿ ಮಾತ್ರ ವಾಹನ ಸವಾರರು ನಂಬರ್ ಪ್ಲೇಟ್ ಗೆ ಅಪ್ಲೈ ಮಾಡಲು ಸಾಧ್ಯವಾಗುತ್ತದೆ. ಸದ್ಯ ಸೈಬರ್ ಕ್ರಿಮಿನಲ್ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೌದು HSRP Number Plate ಅಳವಡಿಕೆಯ ಹೆಸರಿನಲ್ಲಿ ಈಗಾಗಲೇ ದೇಶದಲ್ಲಿ ಸ್ಕ್ಯಾಮ್ ಆರಂಭವಾಗಿದೆ. HSRP ಹೆಸರನ್ನು ಬಳಸಿಕೊಂಡು ಇದೀಗ ವಂಚಕರು ಜನಸಾಮಾನ್ಯರ ಖಾತೆಗೆ ಕನ್ನ ಹಾಕಲು ಹೊಸ ಪ್ಲಾನ್ ಹಾಕುತ್ತಿದ್ದಾರೆ.

HSRP ಹೆಸರಿನಲ್ಲಿ ಆರಂಭವಾಗಿದೆ ಹೊಸ ರೀತಿಯ ಸ್ಕ್ಯಾಮ್

ಈಗಾಗಲೇ ದೇಶದಲ್ಲಿ ವಿವಿಧ ವಿಧಾನಗಳ ಮೂಲಕ ವಂಚನೆ ಪ್ರಕ್ರಿಯೆ ನಡೆಯುತ್ತಿದೆ. ವಂಚನೆಯ ತಡೆಗಾಗಿ ಸರ್ಕಾರ ಎಷ್ಟೇ ಬ್ರೇಕ್ ಹಾಕಿದರೂ ಕೂಡ ಸೈಬರ್ ಅಪರಾಧಿಗಳು ಹೊಸ ಹೊಸ ತಂತ್ರವನ್ನು ಹೂಡುತ್ತಿದ್ದಾರೆ. ಸದ್ಯ ವಂಚಕರ ಕಣ್ಣು HSRP ನಂಬರ್ ಪ್ಲೇಟ್ ಮೇಲೆ ಬಿದ್ದಿದೆ.

ಕರೆ ಅಥವಾ ಸಂದೇಶದ ಮೂಲಕ ನಿಮಗೆ HSRP ನಂಬರ್ ಪ್ಲೇಟ್ ಆರ್ಡರ್ ಮಾಡುವ ನೆಪದಲ್ಲಿ ನಿಮ್ಮನ್ನು ವಂಚಿಸಲು ವಂಚಕರು ಕಾಯುತ್ತಿದ್ದಾರೆ. ಹೀಗಾಗಿ ಯಾವುದೇ ಮೂರನೇ ವ್ಯಕ್ತಿಗಳಿಂದ ಈ ರೀತಿಯ ಸಂದೇಶ ಅಥವಾ ಕರೆ ಬಂದರೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸೂಚಿಸಿದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮುನ್ನ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ