‘ಸಾರ್ವಜನಿಕ’ರೇ ಎಚ್ಚರ.! ಈ ‘ವನ್ಯಜೀವಿ ವಸ್ತು’ಗಳನ್ನು ಬಳಕೆ ಮಾಡಿದ್ರೇ ‘ಜೈಲು ಶಿಕ್ಷೆ’ ಫಿಕ್ಸ್.!

ವನ್ಯಜೀವಿ ಸಂರಕ್ಷಣೆಯು ಜಾಗತಿಕ ಪ್ರಾಮುಖ್ಯತೆಯ ವಿಷಯವಾಗಿದೆ ಮತ್ತು ಅಳಿವಿನಂಚಿನಲ್ಲಿರುವ ಜೀವಿಗಳಿಗೆ ಗಂಭೀರ ಬೆದರಿಕೆಗಳೆಂದರೆ ವನ್ಯಜೀವಿ ಉತ್ಪನ್ನಗಳ ಅಕ್ರಮ ವ್ಯಾಪಾರ. ದಂತ ಮತ್ತು ಖಡ್ಗಮೃಗದ ಕೊಂಬಿನಿಂದ ಹಿಡಿದು ವಿಲಕ್ಷಣ ಸಾಕುಪ್ರಾಣಿಗಳವರೆಗೆ ಈ ಉತ್ಪನ್ನಗಳು ಕಪ್ಪು ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆಯಿವೆ, ಅಸಂಖ್ಯಾತ ಜಾತಿಗಳನ್ನು ಅಳಿವಿನ ಅಪಾಯದಲ್ಲಿರಿಸುತ್ತದೆ.

Imprisonment is prescribed to prevent the public from consuming these wildlife products
Imprisonment is prescribed to prevent the public from consuming these wildlife products

ವನ್ಯಜೀವಿ ವಸ್ತುಗಳನ್ನು ಇಟ್ಟಿಕೊಳ್ಳೋದು, ಬಳಕೆ ಮಾಡೋದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನುಸಾರ ಅಪರಾಧವಾಗಿದೆ. ಒಂದು ವೇಳೆ ಇಟ್ಟುಕೊಂಡು ಸಿಕ್ಕಿಬಿದ್ರೇ ನಿಮಗೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಆದಂತೆ ಜೈಲಿ ಶಿಕ್ಷೆ ಫಿಕ್ಸ್.

ಹೌದು ಈ ಕುರಿತಂತೆ ರಾಜ್ಯ ಸರ್ಕಾರದಿಂದ ಇಂದು ಎಲ್ಲಾ ಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಈ ಕಾಯ್ದೆಯಂತೆ ವನ್ಯಜೀವಿಗಳನ್ನು ಬೇಟೆ ಆಡೋದು, ಸ್ವಾಧೀನ ಪಡಿಸಿಕೊಳ್ಳೋದು, ಇಟ್ಟುಕೊಳ್ಳೋದು ಸೇರಿದಂತೆ ಖರೀದಿಸಿಸೋದು, ಸಾಗಾಣೆ ಮಾಡೋದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ತಿಳಿಸಿದೆ.

ಇದಷ್ಟೇ ಅಲ್ಲದೇ ವನ್ಯಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ. ಹೀಗೆ ಮಾಡದಂತೆ ಎಚ್ಚರಿಕೆಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿದೆ.

ನೀವು ಒಂದು ವೇಳೆ ಈ ಎಲ್ಲಾ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿದ್ದರೂ, ಮುಂದಿನ ಸಚಿವ ಸಂಪುಟ ಸಭೆಯ ವೇಳೆಯಲ್ಲಿ 2-3 ತಿಂಗಳ ಒಳಗಾಗಿ ಸರ್ಕಾರಕ್ಕೆ ಹಿಂದಿರುಗಿಸೋದಕ್ಕೆ ಅವಕಾಶವನ್ನು ನೀಡೋ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಅಂತ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಕರಡು ಮಂಡಿಸಿ, ಅನುಮೋದನೆ ಪಡೆದು ಆದೇಶ ಕೂಡ ಮಾಡಲಾಗುತ್ತದೆ ಅಂತ ಹೇಳಿದ್ದಾರೆ.

Join Telegram Group Join Now
WhatsApp Group Join Now

ಆದ್ರೇ ರಾಜ್ಯದ ಅನೇಕ ಜನರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡ್ರೇ ಅಂತವರಿಗೆ ಸುಮಾರು 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿ ಎಂದು ಕೂಡ ಅರಣ್ಯ ಇಲಾಖೆ ತಿಳಿಸಿದೆ. ಇದಷ್ಟೇ ಅಲ್ಲದೇ ಶಿಕ್ಷೆಯ ಜೊತೆಗೆ 1 ಲಕ್ಷದವರೆಗೂ ದಂಡವನ್ನು ಕೂಡ ವಿಧಿಸಬಹುದಾಗಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ