IPL Auction 2024: IPL​ ಇತಿಹಾಸದಲ್ಲೇ ಮಿಚೆಲ್​ ಸ್ಟಾರ್ಕ್​ ದುಬಾರಿ ಆಟಗಾರ: 24.75 ಕೋಟಿ ರೂ.ಗೆ KKR ಪಾಲು.

IPL Auction 2024

IPL Auction 2024: ಮಂಗಳವಾರ ನಡೆದ ಹರಾಜಿನಲ್ಲಿ ವೇಗಿಗಳು ದೊಡ್ಡ ಮೊತ್ತವನ್ನು ಗಳಿಸಿದ್ದರಿಂದ ಮಿಚೆಲ್ ಸ್ಟಾರ್ಕ್ ಅವರು ತಮ್ಮ ಆಸ್ಟ್ರೇಲಿಯನ್ ಬೌಲಿಂಗ್ ಪಾಲುದಾರ ಪ್ಯಾಟ್ ಕಮ್ಮಿನ್ಸ್ ಅವರನ್ನು 24.75 ಕೋಟಿ ರೂ.ಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿಯೊಂದಿಗೆ ಅತಿ ದುಬಾರಿ ಖರೀದಿ ಮಾಡಿದರು.

IPL Auction 2024 Mitchell Starc to KKR for Rs 24.75 Crores
IPL Auction 2024 Mitchell Starc to KKR for Rs 24.75 Crores

33 ವರ್ಷದ ಮಿಚೆಲ್​ ಸ್ಟಾರ್ಕ್​ ಅವರ ಮೂಲ ಬೆಲೆ 2 ಕೋಟಿ ರೂಪಾಯಿ. ಆದರೆ, ಹರಾಜಿನ ಆರಂಭದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸ್ಟಾರ್ಕ್​ಗಾಗಿ ಭಾರಿ ಪೈಪೋಟಿ ನಡೆಸಿದವು. ಇದೇ ವೇಳೆ ಕೋಲ್ಕತ ಮತ್ತು ಗುಜರಾತ್​ ಟೈಟಾನ್ಸ್​ ಕೂಡ ಹರಾಜು ಕೂಗಿದವು. ತೀವ್ರ ಪೈಪೋಟಿಯಿಂದ ಸ್ಟಾರ್ಕ್​ನ ಬೆಲೆ 20 ಕೋಟಿ ರೂ.ವರೆಗೂ ಏರಿತು. ಅಂತಿಮವಾಗಿ ಕೆಕೆಆರ್​ ತಂಡ 24.75 ಕೋಟಿ ರೂ. ದಾಖಲೆ ಬೆಲೆಗೆ ಎಡಗೈ ವೇಗಿ ಸ್ಟಾರ್ಕ್​ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿತು.

ಸ್ಟಾರ್ಕ್​ ಬರೋಬ್ಬರಿ 8 ವರ್ಷಗಳ ಬಳಿಕ ಐಪಿಎಲ್​ನಲ್ಲಿ ಭಾಗವಹಿಸುತ್ತಿದ್ದಾರೆ

ಅಂದಹಾಗೆ ಆಸ್ಟ್ರೇಲಿಯಾದ ಪ್ರೀಮಿಯರ್​ ಬೌಲರ್​ ಸ್ಟಾರ್ಕ್​ ಬರೋಬ್ಬರಿ 8 ವರ್ಷಗಳ ಬಳಿಕ ಐಪಿಎಲ್​ನಲ್ಲಿ ಭಾಗವಹಿಸುತ್ತಿದ್ದಾರೆ. ಆಸಿಸ್​ ತಂಡದ ಹಿರಿಯ ಬೌಲರ್​ ಆಗಿರುವ ಸ್ಟಾರ್ಕ್​, ತಮ್ಮ ರಾಷ್ಟ್ರೀಯ ತಂಡದ ಮೇಲೆ ಹೆಚ್ಚು ಗಮನ ಹರಿಸುವ ಸಲುವಾಗಿ 2015ರಲ್ಲಿ ಐಪಿಎಲ್​ ತಂಡದಿಂದ ದೂರ ಉಳಿದರು. ಬಳಿಕ 2018ರಲ್ಲಿ ಐಪಿಎಲ್​ ಹರಾಜಿನಲ್ಲಿ ಭಾಗವಹಿಸಿದರು. ಈ ವೇಳೆಯೂ ಕೆಕೆಆರ್​ ತಂಡ 9.4 ಕೋಟಿ ರೂ. ನೀಡಿ ಸ್ಟಾರ್ಕ್​ ಅವರನ್ನು ಖರೀದಿ ಮಾಡಿತ್ತು. ಆದಾಗ್ಯೂ ಗಾಯದ ಸಮಸ್ಯೆಯಿಂದಾಗಿ ಇಡೀ ಸೀಸನ್​ನಿಂದ ಹೊರಬಿದ್ದರು. ಇದಾದ ಬಳಿಕ ಮತ್ತೆ ಐಪಿಎಲ್​ನಿಂದ ಬಿಡುವು ಪಡೆದಿದ್ದ ಸ್ಟಾರ್ಕ್​ ಇದೀಗ ಮತ್ತೆ ಐಪಿಎಲ್​ಗೆ ಮರಳಿದ್ದು ಹುಬ್ಬೇರಿಸುವ ಬೆಲೆಗೆ ಮತ್ತೆ ಕೆಕೆಆರ್​ ಪಾಲಾಗಿದ್ದಾರೆ. ವಿಶ್ವಕಪ್​ನಲ್ಲಿ ಸ್ಟಾರ್ಕ್​ ಪ್ರದರ್ಶನ ಮತ್ತು ಲಿಮಿಟೆಡ್​ ಓವರ್​ ಪಂದ್ಯಗಳಲ್ಲಿ ಅವರ ಟ್ರ್ಯಾಕ್​ ರೆಕಾರ್ಡ್​ ನೋಡಿ ಕೆಕೆಆರ್​ ಸ್ಟಾರ್ಕ್​ಗೆ ಅಷ್ಟೊಂದು ದುಡ್ಡು ಸುರಿದಿದ್ದಾರೆ.

ಇನ್ನು ಓದಿ: ಗೂಗಲ್ ಮ್ಯಾಪ್ ನಲ್ಲಿ ಬಂತು ಆಕರ್ಷಕ ಅಪ್ಡೇಟ್!, ಬದಲಾವಣೆ ಜಾರಿಗೆ ತಂದ ಗೂಗಲ್.

ಸ್ಟಾರ್ಕ್​ ಅವರು ಎರಡು ಸೀಸನ್​ನಲ್ಲಿ ಐಪಿಎಲ್ ಟೂರ್ನಿ ಭಾಗವಾಗಿದ್ದರು. ಎರಡೂ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ತಂಡದ ಪರ ಆಡಿದರು. 2014ನೇ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 28.71ರ ಸರಾಸರಿಯಲ್ಲಿ 14 ವಿಕೆಟ್ ಪಡೆದು ಗಮನ ಸೆಳೆದರು. 2015ರ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ 20 ವಿಕೆಟ್​ ಪಡೆಯುವ ಮೂಲಕ ಅತ್ಯುತ್ತಮ ಬೌಲರ್​ ಎನಿಸಿಕೊಂಡರು. ಅಲ್ಲದೆ, ಪಂದ್ಯವೊಂದರಲ್ಲಿ 15 ರನ್​ 4 ವಿಕೆಟ್​ ಕಬಳಿಸಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದರು.​

IPL Auction 2024 Mitchell Starc to KKR for Rs 24.75 Crores
IPL Auction 2024 Mitchell Starc to KKR for Rs 24.75 Crores

ಆಸ್ಟ್ರೇಲಿಯಾ ತಂಡಕ್ಕೆ ಮಹತ್ವದ ಕೊಡುಗೆ

ಐಪಿಎಲ್​ನಿಂದಾಚೆಗೆ ಸ್ಟಾರ್ಕ್​ ಅವರು ತಮ್ಮ ಆಸ್ಟ್ರೇಲಿಯಾ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್​ ಟೂರ್ನಿಯಲ್ಲಿ ಸ್ಟಾರ್ಕ್​ ಸಾಧನೆ ಮರೆಯುವಂತಿಲ್ಲ. ಕೇವಲ 10 ಪಂದ್ಯಗಳಲ್ಲಿ 16 ವಿಕೆಟ್​ ಪಡೆದರು. ವಿಶ್ವಕಪ್​ ಟ್ರೋಫಿಯನ್ನು ಜಯಿಸಿದ ಆಸ್ಟ್ರೇಲಿಯಾ ತಂಡದ ಸಾಧನೆ ಹಿಂದೆ ಸ್ಟಾರ್ಕ್​ ಕಾಣಿಕೆಯೂ ಗಮನಾರ್ಹವಾಗಿದೆ. ಇದುವರೆಗೂ 121 ಏಕದಿನ ಪಂದ್ಯಗಳನ್ನು ಆಡಿರುವ ಸ್ಟಾರ್ಕ್​ 22.96 ಸರಾಸರಿಯೊಂದಿಗೆ 236 ವಿಕೆಟ್​ ಪಡೆದಿದ್ದಾರೆ. ಟಿ 20 ಮಾದರಿಯಲ್ಲಿ 58 ಪಂದ್ಯಗಳಲ್ಲಿ 22.91 ಸರಾಸರಿಯೊಂದಿಗೆ 73 ವಿಕೆಟ್​ ಕಬಳಿಸಿದ್ದು, ಬೌಲಿಂಗ್​ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

Join Telegram Group Join Now
WhatsApp Group Join Now
IPL Auction 2024 Mitchell Starc to KKR for Rs 24.75 Crores
IPL Auction 2024 Mitchell Starc to KKR for Rs 24.75 Crores

ಸ್ಟಾರ್ಕ್​ ಪ್ರತಿಕ್ರಿಯೆ ಏನು?

ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿರುವ ಬಗ್ಗೆ ಸ್ಟಾರ್ಕ್​ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಇದು ಅಚ್ಚರಿಯಾಗಿದೆ ಮತ್ತು ಕೆಕೆಆರ್​ ತಂಡಕ್ಕೆ ಮರಳುತ್ತಿರುವುದಕ್ಕೆ ಖುಷಿಯಾಗಿದೆ. ನನ್ನ ಪತ್ನಿ ಪ್ರಸ್ತುತ ಮಹಿಳಾ ತಂಡದೊಂದಿಗೆ ಭಾರತದಲ್ಲೇ ಇದ್ದಾರೆ ಮತ್ತು ಆಸ್ಟ್ರೇಲಿಯಾದಲ್ಲಿ ಅವರ ಕವರೇಜ್, ನಮಗಿಂತ ಸ್ವಲ್ಪ ಮುಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹರಾಜು ವಿರಾಮದ ವೇಳೆ ಜಿಯೋ ಸಿನಿಮಾ ಜತೆ ಸ್ಟಾರ್ಕ್​ ಮಾತನಾಡಿದರು.

ಸಾಕಷ್ಟು ಉತ್ಸಾಹವಿದೆ. ನಾನು ಹಲವಾರು ವರ್ಷಗಳಿಂದ ಭಾಗಿಯಾಗದ ಪಂದ್ಯಾವಳಿ ಇದಾಗಿದೆ. ನಾನು ಐಪಿಎಲ್‌ಗೆ ಮರಳಲು ಮತ್ತು ಸಾಕಷ್ಟು ಅದ್ಭುತ ಆಟಗಾರರು ಇರುವ ಟೂರ್ನಿಯಲ್ಲಿ ಭಾಗವಾಗಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್​ನೊಂದಿಗೆ ಭಾರತದಲ್ಲಿ ಸಾಕಷ್ಟು ಸಮಯವನ್ನು ಕಳೆದಿದೆ. ಹೀಗಾಗಿ ಭಾರತದಲ್ಲಿ ಕೆಲವು ಅಚ್ಚುಮೆಚ್ಚಿನ ನೆನಪುಗಳನ್ನು ಹೊಂದಿದೆ. ಖಂಡಿತವಾಗಿ ನಾನು ಐಪಿಎಲ್​ಗೆ ಹಿಂತಿರುಗಲು ಕಾಯುತ್ತಿದ್ದೇನೆ ಎಂದಿದ್ದಾರೆ.

ಉಳಿದಂತೆ ಡರೈಲ್​ ಮಿಚೆಲ್​ 14 ಕೋಟಿ ರೂ.ಗೆ ಸಿಎಸ್​ಕೆ ಪಾಲಾದರೆ, ಹರ್ಷಲ್​ ಪಟೇಲ್​ 11.7 ಕೋಟಿ ರೂ. ಪಂಜಾಬ್​ ಕಿಂಗ್ಸ್​ ಇಲೆವೆನ್​ ತಂಡದ ಪಾಲಾದರು. ಶಾರ್ದೂಲ್ ಠಾಕೂರ್ (ರೂ. 4 ಕೋಟಿ) ಮತ್ತು ರಚಿನ್ ರವೀಂದ್ರ (ರೂ. 1.80 ಕೋಟಿ) ಅವರನ್ನು ಸಿಎಸ್‌ಕೆ ಖರೀದಿ ಮಾಡಿತು. ರೋವ್‌ಮನ್ ಪೊವೆಲ್ (ರಾಜಸ್ಥಾನ ರಾಯಲ್ಸ್​ 7.40 ಕೋಟಿ ರೂ.), ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್, 6.80 ಕೋಟಿ ರೂ.) ಹಾಗೂ ಹ್ಯಾರಿ ಬ್ರೂಕ್ (ಡೆಲ್ಲಿ ಕ್ಯಾಪಿಟಲ್​ 4 ಕೋಟಿ ರೂ.) ಉತ್ತಮ ಮೊತ್ತಕ್ಕೆ ಬಿಕರಿಯಾಗಿದ್ದಾರೆ. (ಏಜೆನ್ಸೀಸ್​)

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ