Kantara Chapter 1: ಅಬ್ಬಬ್ಬಾ ಏನಿದು! ರಿಷಬ್ ಮುಖ ನೋಡಿ ಗೂಸ್​ಬಂಪ್ಸ್! BGM ಸೂಪರ್ ಎಂದ ಜನ.

ಕಾಂತಾರ ಚಾಪ್ಟರ್ 1 ಟೀಸರ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ರಿಷಬ್ ಅಕ್ಷರಶಃ ಥ್ರಿಲ್ ಕೊಟ್ಟಿದ್ದಾರೆ. ತಮ್ಮ ಮೇಲೆ ಜನ ಇಟ್ಟುಕೊಂಡ ನಿರೀಕ್ಷೆ ಉಳಿಸಿದ್ದಾರೆ ಎನ್ನುವುದೇ ನೆಟ್ಟಿಗರ ಮಾತು.

kantara 2 chapter 1 first look released
kantara 2 chapter 1 first look released

ಮೊದಲ ನೋಟವು ನಿಗೂಢ ಮತ್ತು ಗಾಢವಾಗಿದೆ ಮತ್ತು ರಿಷಬ್ ಅವರು ಬೆಳಕಿನ ಕಡೆಗೆ ನೋಡುತ್ತಿರುವಾಗ ವೃತ್ತದ ಮಧ್ಯದಲ್ಲಿ ನಿಂತಿರುವುದು ಕಂಡುಬರುತ್ತದೆ. ಮೊದಲ ಚಲನಚಿತ್ರದಲ್ಲಿ ಕೇಳಿದ ಪ್ರಸಿದ್ಧ ಮತ್ತು ಪರಿಚಿತ ಘರ್ಜನೆಯೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ, ನಿರೂಪಕ ಹೇಳುತ್ತಾರೆ, “ಬೆಳಕು. ಪ್ರತಿಯೊಬ್ಬರೂ ಎಲ್ಲವನ್ನೂ ಬೆಳಕಿನಲ್ಲಿ ನೋಡಬಹುದು. ಆದರೆ ಇದು ಬೆಳಕಲ್ಲ, ಇದು ದೃಷ್ಟಿ. ಏನಾಯಿತು, ಏನಾಗುತ್ತಿದೆ ಮತ್ತು ಏನಾಗಲಿದೆ ಎಂಬುದರ ದೃಷ್ಟಿ, ಎಲ್ಲವನ್ನೂ ತೋರಿಸುವ ಬೆಳಕು. ನೀವು ಅದನ್ನು ನೋಡಬಹುದೇ? ”

ಕಾಂತಾರದಂತಹ ಬ್ಲಾಕ್​ಬಸ್ಟರ್ ಸಿನಿಮಾ ಮಾಡಿದ ನಂತರ ಅದರ ಕನೆಕ್ಟೆಡ್ ಮೂವಿ ಮಾಡುವುದು ದೊಡ್ಡ ಸವಾಲಾಗಿತ್ತು.

ಕಾಂತಾರ 2 ಫಸ್ಟ್ ಲುಕ್ Click Here ✔️✔️✔️

ಯಾಕೆಂದರೆ ಕಾಂತಾರ ಮೂವಿ ಸೃಷ್ಟಿಸಿದ ನಿರೀಕ್ಷೆ ಅಷ್ಟಿಷ್ಟಲ್ಲ. ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಕಾಂತಾರ ಟೀಮ್ ಜನರ ನಿರೀಕ್ಷೆಯನ್ನು ಸಕ್ಸಸ್​ಫುಲ್ ಆಗಿ ಮುಟ್ಟಿದೆ.

ಸಿನಿಮಾದ ಟೀಸರ್ ನೋಡಿ ಜನರು ಪಾಸಿಟಿವ್ ಆಗಿಯೇ ರಿಯಾಕ್ಟ್ ಮಾಡುತ್ತಿದ್ದಾರೆ. ಇದು ಟೀಸರ್ ಅಲ್ಲ, ಇದು ಗೂಸ್​ಬಂಪ್ಸ್ ಎಂದಿದ್ದಾರೆ. ಇನ್ನೂ ಕೆಲವರು ಈ ಸಿನಿಮಾಗೆ ರೋಲ್​ಗೆ ಆಸ್ಕರ್ ಪಕ್ಕಾ ಎಂದಿದ್ದಾರೆ.

ಇನ್ನೂ ಬಹಳಷ್ಟು ಜನರು ಈ ಸಿನಿಮಾ ಭಾರತೀಯ ಚಿತ್ರರಂಗವನ್ನು ವಿಶ್ವಾದ್ಯಂತ ಮತ್ತೊಂದು ಲೆವೆಲ್​ಗೆ ತಲುಪಿಸಲಿದೆ ಎಂದಿದ್ದಾರೆ.

Join Telegram Group Join Now
WhatsApp Group Join Now

ಸಿನಿಮಾ ಖಂಡಿತಾವಾಗಿಯೂ ಮೊದಲ ಸಿನಿಮಾವನ್ನು ಮೀರಿಸುತ್ತದೆ. ಅದರಲ್ಲಿ ಸಂದೇಹವೇ ಇಲ್ಲ. ಅದಕ್ಕಿಂತ ದುಪ್ಪಟ್ಟು ಗಳಿಸುತ್ತದೆ. ಸಿನಿಮಾ ಥಿಯೇಟರ್​ನಲ್ಲಿ ನೋಡೋಕೆ ಕಾಯ್ತಿದ್ದೀವಿ ಎಂದಿದ್ದಾರೆ ನೆಟ್ಟಿಗರು.

ರಿಷಬ್ ಶೆಟ್ಟಿಯ ಮುಖ ನೋಡುತ್ತಲೇ ಗೂಸ್​ಬಂಪ್ಸ್ ಬರುತ್ತದೆ. ಎಂಥಾ ಸಿನಿಮಾಟೋಗ್ರಫಿ, ಎಂಥಾ ಕ್ಯಾಪ್ಚರಿಂಗ್ ಎಂದು ನೆಟ್ಟಿಗರು ಹೊಗಳಿದ್ದಾರೆ. ಟೀಸರ್​ಗೆ ವ್ಯಾಪಕ ಮೆಚ್ಚುಗೆ ಹರಿದುಬಂದಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ