ಮದುವೆಯಾಗುವ ಯುವತಿಯರಿಗೆ 10 ಗ್ರಾಂ ಚಿನ್ನ ಮತ್ತು 1 ಲಕ್ಷ ಹಣ ಉಚಿತ, ಕಾಂಗ್ರೆಸ್ ಇನ್ನೊಂದು ಘೋಷಣೆ

ದೇಶದಲ್ಲಿ ಈಗ ಚುನಾವಣೆಯ ಕಾವು ಮುಗಿಲಿಮುಟ್ಟಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಚುನಾವಣೆಯ ಕಾರಣ ಹಲವು ಘೋಷಣೆಗಳನ್ನ ಮಾಡಲಾಗುತ್ತಿದೆ. ಸದ್ಯ ಕರ್ನಾಟಕದ ಚುನಾವಣೆಯ ಸಮಯದಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಹಲವು ಘೋಷಣೆಯನ್ನ ಮಾಡುವುದರ ಮೂಲಕ ಜನರನ್ನ ತಮ್ಮತ್ತ ಸೆಳೆದಿತ್ತು ಎಂದು ಹೇಳಬಹುದು.

Mahalakshmi Yojana information in kannada
Mahalakshmi Yojana information in kannada

ಇನ್ನು ಈಗ ಕಾಂಗ್ರೆಸ್ ಸರ್ಕಾರ ಯುವತಿಯರಿಗೆ ಇನ್ನೊಂದು ಘೋಷಣೆಯನ್ನ ಮಾಡಿದ್ದು ಈ ಘೋಷಣೆ ಮದುವೆಯಾಗುವ ಯುವತಿಯರಿಗೆ ಮಾತ್ರ ಎಂದು ಹೇಳಿದರೆ. ಮದುವೆಯಾಗುವ ಎಲ್ಲಾ ಯುವತಿಯರು ಈ ಯೋಜನೆಯ ಲಾಭವನ್ನ ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ. ಮದುವೆಯಾಗುವ ಯುವತಿಯರಿಗೆ ಒಂದು ಲಕ್ಷ ಹಣ ಮತ್ತು 10 ಚಿನ್ನವನ್ನ ಘೋಷಣೆ ಮಾಡಿ ಮಹಾಲಕ್ಷ್ಮಿ ಯೋಜನೆಯನ್ನ ಜಾರಿಗೆ ತರಲಾಗಿದೆ.

ಮಹಿಳೆಯರಿಗಾಗಿ “ಮಹಾಲಕ್ಷ್ಮಿ ಯೋಜನೆ”
ಸದ್ಯ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ “ಮಹಾಲಕ್ಷ್ಮಿ ಯೋಜನೆ”ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಈ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 25,00 ರೂ. ಗಳನ್ನೂ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದರ ಜೊತೆಗೆ 500 ರೂ. Gas Cylinder ಮತ್ತು RTC ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವುದಾಗಿ ಘೋಷಣೆ ಹೊರಡಿಸಿದೆ.

ಇದೆಲ್ಲದರ ಜೊತೆಗೆ ವಿವಾಹವಾಗುವ ಯುವತಿಯರಿಗೆ ವಿಶೇಷ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಚುನಾವಣೆಯ ಉದ್ದೇಶದಿಂದ ಕರ್ನಾಟಕದ ಕಾಂಗ್ರೆಸ್ ನೀಡಿದ ಗ್ಯಾರೆಂಟಿಯಂತೆ ಈಗ ತೆಲಂಗಾಣ ಕಾಂಗ್ರೆಸ್ ಗ್ಯಾರೆಂಟಿಯನ್ನ ನೀಡುತ್ತಿದ್ದು ಸದ್ಯ ಈ ಗ್ಯಾರೆಂಟಿ ಬಹಳ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು.

ವಿವಾಹವಾಗುವ ಯುವತಿಯರಿಗೆ 1 ಲಕ್ಷ ಹಣ 10 ಗ್ರಾಂ ಬಂಗಾರ
ಇನ್ನು ಮಹಾಲಕ್ಷ್ಮಿ ಯೋಜನೆಯಡಿ ಹಿಂದುಳಿದ ಸಮುದಾಯದ ಮಹಿಳೆಯರಿಗೆ ವಿವಾಹವಾಗುವ ಸಮಯದಲ್ಲಿ 1 ಲಕ್ಷ ರೂ. ಹಾಗೂ 10 ಗ್ರಾಂ ಚಿನ್ನವನ್ನು ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕಾಂಗ್ರೆಸ್ ನ ಈ ಯೋಜನೆಯ ಅನುಷ್ಠಾನಕ್ಕಾಗಿ 250 ಕೋಟಿ ರೂ. ಅಗತ್ಯವಿದೆ. ಇನ್ನು ಕಾಂಗ್ರೆಸ್ ನ ಈ ನಿರ್ಧಾರಕ್ಕೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ ಎನ್ನಬಹುದು. ತೆಲಂಗಾಣದಲ್ಲಿ ಕಾಂಗ್ರೆಸ್ ಈ ಘೋಷಣೆಯನ್ನ ಮಾಡಿದೆ ಮತ್ತು ಕಾಂಗ್ರೆಸ್ ನ ಈ ಘೋಷಣೆಗೆ ಪರ ವಿರೋಧ ಚರ್ಚೆ ಕೂಡ ಆಗುತ್ತಿದೆ ಎಂದು ಹೇಳಬಹುದು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ