Alien Debris On Mars: ಮಂಗಳ ಗ್ರಹದಲ್ಲಿ ಅನ್ಯಜಗತ್ತಿನ ಅವಶೇಷ! ಪತ್ತೆಹಚ್ಚಿದ ನಾಸಾದ ಬಾಹ್ಯಾಕಾಶ ನೌಕೆ.

Alien Debris On Mars

Alien Debris On Mars: ಬ್ರಹ್ಮಾಂಡದ ಬಗ್ಗೆ ನಮ್ಮ ತಿಳುವಳಿಕೆ ಮತ್ತು ಭೂಮ್ಯತೀತ ಜೀವನದ ಸಾಧ್ಯತೆಯನ್ನು ಮರುರೂಪಿಸಬಲ್ಲ ಅಭೂತಪೂರ್ವ ಆವಿಷ್ಕಾರದಲ್ಲಿ, ನಾಸಾದ ಬಾಹ್ಯಾಕಾಶ ನೌಕೆ ಮಂಗಳದ ಮೇಲ್ಮೈಯಲ್ಲಿ ನಿಗೂಢ ಅವಶೇಷಗಳನ್ನು ಪತ್ತೆ ಮಾಡಿದೆ. ನಾಸಾ ಅಧಿಕಾರಿಗಳು ಇಂದು ಘೋಷಿಸಿದ ಈ ಅದ್ಭುತ ಸಂಶೋಧನೆಯು ಅನ್ಯಲೋಕದ ವಸ್ತುಗಳ ಮೂಲ, ಸಂಯೋಜನೆ ಮತ್ತು ಪರಿಣಾಮಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

NASA spacecraft discovered alien debris on Mars
NASA spacecraft discovered alien debris on Mars

ಮಂಗಳ ಗ್ರಹದ ಮೇಲ್ಮೈಯಲ್ಲಿ ಅನ್ಯಜಗತ್ತಿನ ಅವಶೇಷಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ನಾಸಾ)ದ ಮಾರ್ಸ್ಕಾಪ್ಟರ್ ಪತ್ತೆಹಚ್ಚಿದೆ ಎಂದು ವರದಿಯಾಗಿದೆ.

ಮಾರ್ಸ್ ಕಾಪ್ಟರ್

ಮಾರ್ಸ್ ಕಾಪ್ಟರ್ (ಮಂಗಳ ಗ್ರಹದ ಮೇಲೆ ಸಂಚರಿಸುವ ಹೆಲಿಕಾಪ್ಟರ್) ಎಪ್ರಿಲ್‌ ನಲ್ಲಿ ಪತ್ತೆಹಚ್ಚಿರುವ ಅವಶೇಷಗಳ ಫೋಟೋಗಳನ್ನು ನಾಸಾ ಬಿಡುಗಡೆಗೊಳಿಸಿದೆ.

ಇನ್ನು ಓದಿ: ಯುವ ನಿಧಿ ಯೋಜನೆ 26 ಡಿಸೆಂಬರ್‌ನಿಂದ ನೋಂದಣಿ, ಈ ದಾಖಲೆ ಸಿದ್ಧಪಡಿಸಿಕೊಳ್ಳಿ.

ಈ ಚಿತ್ರಗಳು ಅನ್ಯಜಗತ್ತು ಎಂದು ವಿವರಿಸಲ್ಪಟ್ಟಿರುವ ವಿಷಯದತ್ತ ಒಂದು ನೋಟವನ್ನು ನೀಡುತ್ತದೆ, ಆದರೆ ವಾಸ್ತವವಾಗಿ ವಾಸ್ತವವಾಗಿ 2021ರಲ್ಲಿ ‘ಪರ್ಸೆವರೆನ್ಸ್ ರೋವರ್'(ನಾಸಾದ ಬಾಹ್ಯಾಕಾಶ ನೌಕೆ) ಮಂಗಳನ ಮೇಲ್ಮೈಯನ್ನು ಸ್ಪರ್ಷಿಸುವ ಸಂದರ್ಭದ ಲ್ಯಾಂಡಿಂಗ್ ಉಪಕರಣಗಳಿಗೆ ಸಂಬಂಧಿಸಿದೆ. ಈ ಚಿತ್ರಗಳಲ್ಲಿ ಮಂಗಳನ ವಾತಾವರಣವನ್ನು ಪ್ರವೇಶಿಸುವಾಗ ರೋವರ್ ಮತ್ತು ಹೆಲಿಕಾಪ್ಟರ್ ರಕ್ಷಣೆಗೆ ಬಳಸುವ ಸಾಧನ(ಬ್ಯಾಕ್ಶೆಲ್)ದ ಅವಶೇಷಗಳಾಗಿವೆ. ಇದರಲ್ಲಿ 70 ಅಡಿ ಉದ್ದದ ಪ್ಯಾರಾಷೂಟ್ ಕೂಡಾ ಸೇರಿದೆ ಎಂದು ನಾಸಾದ ಇಂಜಿನಿಯರ್ ಇಯಾನ್ ಕ್ಲರ್ಕ್ ಹೇಳಿದ್ದಾರೆ. ಈ ಚಿತ್ರಗಳು ಎರಡು ಉದ್ದೇಶಗಳನ್ನು ಪೂರೈಸುತ್ತವೆ. ವಿಸ್ಮಯಕಾರಿ ದೃಶ್ಯಗಳ ಜತೆಗೆ ಭವಿಷ್ಯದ ಮಂಗಳ ಕಾರ್ಯಾಚರಣೆಯಲ್ಲಿ ಕೆಲಸ ಮಾಡುವ ಇಂಜಿನಿಯರ್ಗಳಿಗೆ ಮಾಹಿತಿ ಕೋಶಗಳಂತೆಯೂ ಕಾರ್ಯನಿರ್ವಹಿಸುತ್ತವೆ ಎಂದವರು ಹೇಳಿದ್ದಾರೆ.

NASA spacecraft discovered alien debris on Mars
NASA spacecraft discovered alien debris on Mars

ಪರ್ಸೆವರೆನ್ಸ್ ರೋವರ್

ಪರ್ಸೆವರೆನ್ಸ್ ನೌಕೆ ಮಂಗಳನ ಮೇಲ್ಮೈಯಲ್ಲಿ ಇಳಿಯುವ ಸಂದರ್ಭ ರೂಪುಗೊಂಡ ಕುಳಿಯಲ್ಲಿನ ಸಿಯೆತಾಹ್ ಮತ್ತು ಮಾಝ್ ಶಿಲಾರಚನೆಯ ನಡುವೆ ಇರುವ ಅವಶೇಷಗಳ ಆಯಕಟ್ಟಿನ ಸ್ಥಳವು ಆವಿಷ್ಕಾರಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿದೆ ಎಂದು ನಾಸಾ ವಿಜ್ಞಾನಿ ಕೆನ್ನೆತ್ ಫಾರ್ಲೆ ಹೇಳಿದ್ದಾರೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ