ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಪೋಟೋ ಅಪ್‌ಡೇಟ್ ಮಾಡಬೇಕೇ?, ಹೇಗೆ ತಿಳಿಯಿರಿ.

ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಆನ್‌ಲೈನ್‌ನಲ್ಲಿ ನವೀಕರಿಸುವ ಪ್ರಕ್ರಿಯೆಯು ಲಭ್ಯವಿರಲಿಲ್ಲ. ಆದಾಗ್ಯೂ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಸೇವೆಗಳನ್ನು ನಿರಂತರವಾಗಿ ಸುಧಾರಿಸುತ್ತಿದೆ ಮತ್ತು ಭವಿಷ್ಯದಲ್ಲಿ ಆನ್‌ಲೈನ್ ಫೋಟೋ ನವೀಕರಣಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಅತ್ಯಂತ ನವೀಕೃತ ಮಾಹಿತಿ ಮತ್ತು ಕಾರ್ಯವಿಧಾನಗಳನ್ನು ಪರಿಶೀಲಿಸಲು, ದಯವಿಟ್ಟು ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಹತ್ತಿರದ ಆಧಾರ್ ನೋಂದಣಿ ಅಥವಾ ನವೀಕರಣ ಕೇಂದ್ರವನ್ನು ಸಂಪರ್ಕಿಸಿ. ಫೋಟೋ ಸೇರಿದಂತೆ ಆಧಾರ್ ಮಾಹಿತಿಯನ್ನು ನವೀಕರಿಸಲು ಸಾಮಾನ್ಯ ಪ್ರಕ್ರಿಯೆ ಇಲ್ಲಿದೆ, ಆದರೆ ದಯವಿಟ್ಟು ಅಧಿಕೃತ ವೆಬ್‌ಸೈಟ್ ಅಥವಾ ಕೇಂದ್ರದಿಂದ ಇತ್ತೀಚಿನ ವಿವರಗಳನ್ನು ಪರಿಶೀಲಿಸಿ:

Need to update aadhaar card photo online know how
Need to update aadhaar card photo online know how

ಭಾರತದ ನಾಗರಿಕರಿಗೆ ಪ್ರಮುಖವಾದ ಗುರುತಿನ ಪುರಾವೆ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡಾ ಒಂದಾಗಿದೆ. ಈ ಆಧಾರ್ ಕಾರ್ಡ್ ಮೂಲಕ 12-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆಯನ್ನು ಭಾರತ ಸರ್ಕಾರದ ಪರವಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡುತ್ತದೆ. ಪ್ರಸಕ್ತ ನಾವು ಯಾವುದೇ ವಹಿವಾಟು ನಡೆಸಲು, ಯಾವುದೇ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಪ್ರಮುಖವಾಗಿದೆ.

ಆಧಾರ್ ಕಾರ್ಡ್ ಕಾರ್ಡ್‌ದಾರರ ಬಹುತೇಕ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ. ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುತ್ತದೆ. ಆದ್ದರಿಂದಾಗಿ ಸರ್ಕಾರಿ ಪ್ರಯೋಜನಗಳನ್ನು ಪಡೆಯಲು, ಶಾಲೆಗಳು ಅಥವಾ ಕಾಲೇಜುಗಳಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಲು ಮತ್ತು ಇತರ ಅಧಿಕೃತ ಕೆಲಸಗಳಿಗೆ ಇದು ಅತ್ಯಗತ್ಯವಾಗಿದೆ.

ಆಧಾರ್‌ನಲ್ಲಿರುವ ಎಲ್ಲಾ ವಿಶಿಷ್ಟ ಗುರುತಿನ ಸಂಖ್ಯೆಗಳು ಜೀವನದುದ್ದಕ್ಕೂ ಒಂದೇ ಆಗಿರುತ್ತವೆ. ಆದರೂ ನೀವು ಕೆಲವೊಂದು ಮಾಹಿತಿಯನ್ನು ಆಗಾಗೇ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಜನರು ಕೆಲವೊಮ್ಮೆ ತಮ್ಮ ಫೋನ್ ಸಂಖ್ಯೆ, ವಿಳಾಸ ಮತ್ತು ಫೋಟೋವನ್ನು ಕೂಡಾ ಸಮಯಕ್ಕೆ ತಕ್ಕಂತೆ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ನೀವು ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾವಣೆ ಮಾಡಲು ಬಯಸಿದರೆ, ನೀವು ಆಧಾರ್ ನೋಂದಣಿ ಕೇಂದ್ರ/ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ನೀವು ಆನ್‌ಲೈನ್‌ನಲ್ಲಿ ಸಹ ಬದಲಾವಣೆಗಳನ್ನು ಮಾಡಬಹುದು. ಆದರೆ ಸಮೀಪದ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

ಆನ್‌ಲೈನ್ ಆಧಾರ್ ಕಾರ್ಡ್ ಫೋಟೋ ಹೀಗೆ ಬದಲಾಯಿಸಿ

Join Telegram Group Join Now
WhatsApp Group Join Now

ಹಂತ 1: ಅಧಿಕೃತ ಯುಐಡಿಎಐ ವೆಬ್‌ಸೈಟ್‌ uidai.gov.in ಗೆ ಭೇಟಿ ನೀಡಿ

ಹಂತ 2: ಆಧಾರ್ ದಾಖಲಾತಿ ಫಾರ್ಮ್ ವಿಭಾಗವನ್ನು ಡೌನ್‌ಲೋಡ್ ಮಾಡುವ ಆಯ್ಕೆ ಕ್ಲಿಕ್ ಮಾಡಿಕೊಳ್ಳಿ.

ಹಂತ 3: ಫಾರ್ಮ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

ಹಂತ 4: ಫಾರ್ಮ್ ಅನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಸಲ್ಲಿಸಿ.

ಹಂತ 5: ಪ್ರಸ್ತುತ ಇರುವ ಆಧಾರ್ ಕಾರ್ಯನಿರ್ವಾಹಕರು ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಖಚಿತಪಡಿಸುತ್ತಾರೆ.

(ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಚಿತ್ರವನ್ನು ಅಪ್‌ಡೇಟ್ ಮಾಡಬೇಕಾದರೆ, ಈ ಸೇವೆಗಾಗಿ ಪ್ರಾಧಿಕಾರ 100 ರೂಪಾಯಿ ಶುಲ್ಕವನ್ನು ಜಿಎಸ್‌ಟಿಯೊಂದಿಗೆ ವಿಧಿಸುತ್ತದೆ.)

ಹಂತ 6: ಆಧಾರ್ ಕಾರ್ಯನಿರ್ವಾಹಕರು ನಿಮಗೆ ಸ್ವೀಕೃತಿ ಸ್ಲಿಪ್ ಮತ್ತು ನವೀಕರಣ ವಿನಂತಿ ಸಂಖ್ಯೆ ಅಥವಾ ಯುಆರ್‌ಎನ್‌ ಅನ್ನು ನಿಮಗೆ ನೀಡುತ್ತಾರೆ.

ಹಂತ 7: ಇಲ್ಲಿಗೆ ಪ್ರಕ್ರಿಯೆ ಪೂರ್ಣವಾಗಲಿದೆ. ನೀವು ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಲ್ಲಿ ಯುಆರ್‌ಎನ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಇತ್ತೀಚಿನ ಆಧಾರ್ ಕಾರ್ಡ್‌ನ ಸ್ಥಿತಿಯನ್ನು ತಿಳಿಯಬಹುದಾಗಿದೆ.

ಸಾಮಾನ್ಯವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಪ್ರಕ್ರಿಯೆಯು 90 ದಿನಗಳವರೆಗೆ ತೆಗೆದುಕೊಳ್ಳಬಹುದು. ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಇ-ಆಧಾರ್‌ನ ನಕಲನ್ನು ಡೌನ್‌ಲೋಡ್ ಮಾಡುವ ಮೂಲಕ ನಿಮ್ಮ ಅಪ್‌ಡೇಟ್ ಆದ ಆಧಾರ್ ಕಾರ್ಡ್ ಪ್ರಿಂಟ್ ಪಡೆಯಬಹುದು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ