Ration Card: ನಿಮ್ಮ BPL ರೇಷನ್ ಕಾರ್ಡ್ ರದ್ದಾಗಿದ್ದರೆ ಭಯಪಡುವ ಅಗತ್ಯ ಇಲ್ಲ, ಈ ರೀತಿ ಆಕ್ಟಿವ್ ಮಾಡಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿಗಳನ್ನು ರದ್ದುಪಡಿಸಿದ ನಿದರ್ಶನಗಳಿವೆ, ಇದು ಪೀಡಿತ ವ್ಯಕ್ತಿಗಳು ಮತ್ತು ಕುಟುಂಬಗಳಲ್ಲಿ ಕಳವಳ ಮತ್ತು ಅನಿಶ್ಚಿತತೆಯನ್ನು ಉಂಟುಮಾಡುತ್ತದೆ. ಪ್ಯಾನಿಕ್ಗೆ ಒಳಗಾಗುವ ಬದಲು ಪೂರ್ವಭಾವಿ ಮನಸ್ಥಿತಿಯೊಂದಿಗೆ ಈ ಪರಿಸ್ಥಿತಿಯನ್ನು ಸಮೀಪಿಸುವುದು ಮುಖ್ಯವಾಗಿದೆ.

No need to panic if your BPL ration card is canceled get active like this
No need to panic if your BPL ration card is canceled get active like this

ಬಡವರು ಮತ್ತು ನಿರ್ಗತಿಕರಿಗಾಗಿ ಉಚಿತ ಪಡಿತರನ್ನು ನೀಡುವ ಉದ್ದೇಶದಿಂದ ಸರ್ಕಾರ BPL Ration Card ಅನ್ನು ಜನರಿಗೆ ನೀಡುತ್ತಿದೆ. BPL Ration Card ಹೊಂದಿರುವ ಪ್ರತಿ ಕುಟುಂಬದವರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಕರೋನ ಪ್ರಾರಂಭವಾದಾಗಿನಿಂದ ಈ ಉಚಿತ ಪಡಿತರ ಸೇವೆಯನ್ನು ಜಾರಿಗೆ ತರಲಾಗಿತ್ತು. ಈಗಲೂ ಕೂಡ ಈ ಸೌಲಭ್ಯವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ರೇಷನ್ ಕಾರ್ಡ್ ರದ್ದಾಗಿದ್ದರೆ ಚಿಂತಿಸಬೇಡಿ
ಅದರಲ್ಲೂ ರಾಜ್ಯ ಸರ್ಕಾರ BPL Ration Card ಹೊಂದಿರುವವರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಹೀಗಾಗಿ ದೇಶದಲ್ಲಿ BPL Ration Card ಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಸದ್ಯ ಸರ್ಕಾರ BPL Ration Card ಹೊಂದುವುದಕ್ಕೆ ಕೆಲವು ಮಾನದಂಡವನ್ನು ವಿವಿಧಿಸಿದೆ. ಸರ್ಕಾರ ನಿಯಮಾನುಸಾರ ಯಾರು ರೇಷನ್ ಕಾರ್ಡ್ ಅನ್ನು ಹೊಂದಿರುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದುಪಡಿಸಿದೆ. ಇನ್ನು ಒಂದುವೇಳೆ ನಿಮ್ಮ ರೇಷನ್ ಕಾರ್ಡ್ ರದ್ದುಗೊಂಡಿದ್ದರೆ ನೀವು ಈ ಸುಲಭ ವಿಧಾನದ ಮೂಲಕ ಮತ್ತೆ ಆಕ್ಟಿವ್ ಮಾಡಿಕೊಳ್ಳಬಹುದು.

6 ತಿಂಗಳು ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದುಗೊಂಡಿದೆಯಾ..?
ಇನ್ನು ಪ್ರತಿ ತಿಂಗಳು ಪಡಿತರ ಚೀಟಿದಾರರು ಪಡಿತರನ್ನು ಪಡೆಯುತ್ತಾರೆ. ಕೆಲವರು ಒಂದು ತಿಂಗಳಿನಲ್ಲಿ ಪಡೆದರೆ ಇನ್ನೊಂದು ತಿಂಗಳಿನಲ್ಲಿ ಪಡೆಯುವುದಿಲ್ಲ. ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 1.27 ಕೋಟಿಗೂ ಅಧಿಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳಿದ್ದು, 4.37 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ.

ಆರು ತಿಂಗಳಿನಿಂದ ರೇಷನ್ ಪಡೆಯವದರ ಪಡಿತರ ಚೀಟಿಯನ್ನು ಅಮಾನತ್ತು ಮಾಡಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿತ್ತು. ಆದರೆ ಯಾರು ಯಾರು ರೇಷನ್ ಪಡೆಯುತ್ತಿಲ್ಲವೋ ಅವರ ಮನೆಗೆ ತೆರಳಿ, ಪರಿಶೀಲನೆ ನಡೆಸಿ ಅವರು ನೀಡಿರುವಂತ ವಿಳಾಸದಲ್ಲಿ ವಾಸವಿಲ್ಲ ಅಂದರೆ ಅಂತಹ ಕಾರ್ಡ್ ಗಳನ್ನು ಅಮಾನತ್ತಿನಲ್ಲಿ ಇಡುವಂತಹ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರ ಹೊರತಾಗಿ ಯಾವುದೇ ರೇಷನ್ ಕಾರ್ಡ್ ಗಳನ್ನೂ ರದ್ದು ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ರೇಷನ್ ಕಾರ್ಡ್ ಆಕ್ಟಿವ್ ಮಾಡಿಕೊಳ್ಳಲು ಈ ರೀತಿ ಮಾಡಿ
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು 6 ತಿಂಗಳಿಂದ ಪಡಿತರ ಧಾನ್ಯಗಳನ್ನು ಪಡೆಯದವರಿಗೆ ಅವರ ಬಯೋಮೆಟ್ರಿಕ್ಸ್ ಪಡೆಯಲು ಮತ್ತು ಅವರ ಕಾರ್ಡ್ ಅಮಾನತುಗೊಂಡಿದ್ದರೂ ಸಹ ಆಹಾರ ಧಾನ್ಯಗಳನ್ನು ವಿತರಿಸಲು ಅವಕಾಶ ನೀಡಿದೆ. ಅಂದರೆ ನಿಮ್ಮ ರೇಷನ್ ಕಾರ್ಡ್ ಅಮಾನತ್ತುಕೊಂಡಿದ್ದರೂ ಕೂಡ ನೀವು ನಿಮ್ಮ ಬಯೋಮೆಟ್ರಿಕ್ ಅನ್ನು ನೀಡುವ ಮೂಲಕ ನಿಮ್ಮ ಪಡಿತರ ಚೀಟಿಯನ್ನು ಆಕ್ಟಿವ್ ಮಾಡಿಕೊಂಡು ಉಚಿತ ಪಡಿತರ ಲಾಭವನ್ನು ಪಡೆಯಬಹುದು.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ