ಪಿಎಂ ಕಿಸಾನ್ ಇ-ಕೆವೈಸಿ ಮಾಡಿಸುವಾಗ ಈ ವಿಷಯ ಗಮನಿಸಿ.! ಇಲ್ಲದಿದ್ರೆ ಸಿಗಲ್ಲ 17ನೇ ಕಂತಿನ ಹಣ.

ದೇಶದ ಕೋಟ್ಯಾಂತರ ರೈತರು ಪಿಎಂ ಕಿಸಾನ್‌ ಯೋಜನೆಯ 17ನೇ ಕಾಂತಿಗೆ ಕಾಯುತ್ತಿದ್ದಾರೆ. ಆದರೆ, ಇದಕ್ಕಾಗಿ ರೈತರು E-kyc ಪೂರ್ತಿಗೊಳಿಸುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲ, E-kyc ಪೂರ್ಣಗೊಳಿಸುವ ವೇಳೆ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

PM Kisan e-KYC information in Kannada
PM Kisan e-KYC information in Kannada

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಪ್ರತಿ ರೈತರಿಗೆ ವಾರ್ಷಿಕವಾಗಿ ₹ 6000 ಧನ ಸಹಾಯವನ್ನು ನೀಡಲಾಗುವುದು. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಲಭ್ಯವಿರುವ ವಿವರಗಳ ಪ್ರಕಾರ, ಇದುವರೆಗೂ ದೇಶದ 11 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆದಿವೆ. ಸದ್ಯ  ದೇಶದ ರೈತರು 17ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ಕಂತನ್ನು ಪಡೆಯಲು e-KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. 

ನೀವು ಈ ಯೋಜನೆಯ (PM Kisan Yojane) ಫಲಾನುಭವಿಯಾಗಿದ್ದರೆ ಇನ್ನೂ ಇ-ಕೆವೈಸಿ ಸಂಪೂರ್ಣಗೊಳಿಸಿದ್ದರೆ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸುವುದು ಅಗತ್ಯ. ಅಷ್ಟೇ ಅಲ್ಲ, PM Kisan e-KYC ಪೂರ್ಣಗೊಳಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅವಶ್ಯಕವಾಗಿದ್ದು, ಇವುಗಳನ್ನು ನಿರ್ಲಕ್ಷಿಸಿದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. 

ಪಿಎಂ ಕಿಸಾನ್:  ಇ-ಕೆವೈಸಿ ಮಾಡುವಾಗ ನೆನಪಿದಬೇಕಾದ ಅಂಶಗಳೆಂದರೆ: 
ಸಕ್ರಿಯ ಮೊಬೈಲ್ ಸಂಖ್ಯೆ: 

ಪಿಎಂ ಕಿಸಾನ್ ಫಲಾನುಭವಿಗಳು ಇ-ಕೆವೈಸಿ (PM Kisan Beneficiaries e-KYC) ಪೂರ್ಣಗೊಳಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ನಂಬರ್ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. 

ಬಯೋಮೆಟ್ರಿಕ್ ಪರಿಶೀಲನೆ: 

ಇ-ಕೆವೈಸಿ ಪರಿಶೀಲನೆ ವೇಳೆ ಆಧಾರ್ ಒಟಿಪಿ ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ಬಯೋಮೆಟ್ರಿಕ್ ಪರಿಶೀಲನೆ ಮಾಡಬಹುದು ಎಂಬುದನ್ನೂ ನೆನಪಿನಲ್ಲಿಡಿ. 

ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ:

ಒಂದೊಮ್ಮೆ ಪಿಎಂ ಕಿಸಾನ್ ಪೋರ್ಟಲ್ (PM Kisan Portal) ನಲ್ಲಿ ಆನ್ಲೈನ್ ಮೂಲಕ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಹತ್ತಿರದ ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಿ. 

Join Telegram Group Join Now
WhatsApp Group Join Now

ಸ್ಥಿತಿ ಪರಿಶೀಲನೆ: 

ನೀವು E-kyc ಯನ್ನು ಪೂರ್ಣಗೊಳಿಸಿದ ನಂತರ ಪಿಎಂ ಕಿಸಾನ್  ಪೋರ್ಟಲ್‌ನಲ್ಲಿ ನಿಮ್ಮ E-kyc ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ. 

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ