‘ಗೃಹಲಕ್ಷ್ಮಿ’ಯರಿಗೆ ಗುಡ್ ನ್ಯೂಸ್: ಸೆ.10ರವರೆಗೆ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಅವಕಾಶ, ಇದು ಕೊನೆಯ ಅವಕಾಶ ಕಳೆದುಕೊಳ್ಳಬೇಡಿ.

Hello ಸ್ನೇಹಿತರೇ, ರಾಜ್ಯದ ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಆಹಾರ ಇಲಾಖೆಯಿಂದ ಸೆ.10ರವರೆಗೆ ರೇಷನ್ ಕಾರ್ಡ್ ಗಳ ( Ration Card ) ತಿದ್ದುಪಡಿ, ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಈ ಮೂಲಕ ಗೃಹಲಕ್ಷ್ಮಿಯರಿಗೆ ( Gruha Lakshmi Scheme ) ಪಡಿತರ ಚೀಟಿಯ ತಿದ್ದುಪಡಿ, ಸೇರ್ಪಡೆಗೆ ಅವಕಾಶ ನೀಡುವ ಮೂಲಕ ಗುಡ್ ನ್ಯೂಸ್ ನೀಡಲಾಗಿದೆ.

ration card correction online in kannada

ration card correction online karnataka

ಈ ಬಗ್ಗೆ ಆಹಾರ ಇಲಾಖೆಯಿಂದ ( Food Department ) ಮಾಹಿತಿ ನೀಡಲಾಗಿದ್ದು ಸೆಪ್ಟೆಂಬರ್.1ರಿಂದ 10ರವರೆಗೆ ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಫಲಾನುಭವಿಗಳು ಸಮೀಪದ ಆಹಾರ ಇಲಾಖೆಯ ಕಚೇರಿಗೆ ತೆರಳಿ, ತಿದ್ದುಪಡಿ, ಸೇರ್ಪಡೆಯಂತ ಕೆಲಸವನ್ನು ಮಾಡಬಹುದಾಗಿದೆ ಎಂದು ಹೇಳಿದೆ.

ತಿದ್ದುಪಡಿ, ಸೇರ್ಪಡೆಗೆ ಬೇಕಾದ ದಾಖಲೆಗಳು ಏನು.?

ಇಂದಿನಿಂದ ಆರಂಭಗೊಳ್ಳುತ್ತಿರುವಂತ ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆಗೆ ಬಹುಮುಖ್ಯವಾಗಿ ಸೇರ್ಪಡೆಗೆ ಸಂಬಂಧಿಸಿದಂತ ವ್ಯಕ್ತಿಯ ಆಧಾರ್ ಕಾರ್ಡ್ ನೀಡಬೇಕಿದೆ. ಆಧಾರ್ ಸಂಖ್ಯೆಯ ಮಾಹಿತಿ ಆಧರಿಸಿ, ಇ-ಕೈವೆಸಿಯೊಂದಿಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗುತ್ತದೆ.

ಇನ್ನೂ ತಿದ್ದುಪಡಿಗೆ ಸೂಕ್ತ ದಾಖಲೆಯನ್ನು ನೀಡಬೇಕಿದೆ. ಆದ್ರೇ ಹೆಸರು ತೆಗೆಸೋದಕ್ಕೆ ಯಾವುದೇ ದಾಖಲೆ ಅಗತ್ಯವಿಲ್ಲ. ಕಾರಣ ತಿಳಿಸಿ, ಅವರ ಹೆಸರನ್ನು ಪಡಿತರ ಚೀಟಿಯಿಂದ ಡಿಲಿಟ್ ಮಾಡಿಸಬಹುದಾಗಿದೆ.

ಹೊಸ ಸದಸ್ಯರ ಸೇರ್ಪಡೆಗೆ ಈ ದಾಖಲೆಗಳು ಕಡ್ಡಾಯ

ಈಗಾಗಲೇ ಚಾಲ್ತಿಯಲ್ಲಿರುವಂತ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರನ್ನು ಸೇರ್ಪಡೆಗೊಳಿಸಬೇಕಾದರೇ, ಅದಕ್ಕಾಗಿ ಕೆಲವು ದಾಖಲೆಗಳನ್ನು ಕೊಡುವುದು ಅತ್ಯಗತ್ಯವಾಗಿದೆ. ಅದೇ ಮದುವೆಯ ನಂತ್ರ ಮಹಿಳೆಯ ಆಧಾರ್ ಕಾರ್ಡ್, ವಿವಾಹ ನೋಂದಣಿ ಪತ್ರ, ಗಂಡನ ಪಡಿತರ ಪೋಟೋ ಕಾಪಿಯನ್ನು ನೀಡಬೇಕು.

ಮಗುವಿನ ಹೆಸರು ಸೇರ್ಪಡೆಗೆ ಈ ದಾಖಲೆ ತೆಗೆದುಕೊಂಡು ಹೋಗಿ

ನೀವು ನಿಮ್ಮ ಮಗುವಿನ ಹೆಸರನ್ನು ಚಾಲ್ತಿಯಲ್ಲಿರುವಂತ ರೇಷನ್ ಕಾರ್ಡ್ ಗೆ ಸೇರಿಸೋದಕ್ಕೆ, ಆ ಮಗುವಿನ ಜನನ ಪ್ರಮಾಣ ಪತ್ರ, ಇಬ್ಬರು ಪೋಷಕರ ಆಧಾರ್ ಕಾರ್ಡ್ ಪ್ರತಿಯನ್ನು ನೀಡುವುದು ಕಡ್ಡಾಯವಾಗಿದೆ. ಅಲ್ಲದೇ ಮನೆಯ ಮುಖ್ಯಸ್ಥರ ಪಡಿತರ ಚೀಟಿಯನ್ನು ನೀಡಬೇಕಿದೆ. ಈ ಬಳಿಕ ನಿಮ್ಮ ಮಗುವಿನ ಹೆಸರನ್ನು ಚಾಲ್ತಿಯಲ್ಲಿರುವಂತ ರೇಷನ್ ಕಾರ್ಡ್ ಗೆ ಸೇರಿಸಬಹುದಾಗಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ