RS 500 Note: ರಾಮನ ಫೋಟೋ ಇರುವ 500 ರೂ ನೋಟ್! ಜನವರಿ 22 ರಿಂದ ಚಾಲ್ತಿಗೆ. ಇದರ ಸ್ಪಷ್ಟನೆ ನೀಡಿದ RBI.

Ram Photo Note on RS 500 Note

RS 500 Note: ಪ್ರಶ್ನೆಯಲ್ಲಿರುವ ಚಿತ್ರವು 500 ರೂ ನೋಟಿನ ವಾಟರ್‌ಮಾರ್ಕ್ ಪ್ರದೇಶದಲ್ಲಿ ಮಹಾತ್ಮ ಗಾಂಧಿಯವರ ಸಾಂಪ್ರದಾಯಿಕ ಚಿತ್ರದೊಂದಿಗೆ ಭಗವಾನ್ ರಾಮನ ಭಾವಚಿತ್ರವನ್ನು ಪ್ರದರ್ಶಿಸುತ್ತದೆ. ಈ ಚಿತ್ರಣವು ವಿವಿಧ ವ್ಯಾಖ್ಯಾನಗಳಿಗೆ ಕಾರಣವಾಗಿದೆ, ಕೆಲವರು ರಾಷ್ಟ್ರೀಯ ಕರೆನ್ಸಿ ನೋಟಿನಲ್ಲಿ ಧಾರ್ಮಿಕ ಸಂಕೇತಗಳ ಮಿಶ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

RBI Clarification on Ram Photo Note on RS 500 Note
RBI Clarification on Ram Photo Note on RS 500 Note

ಸದ್ಯ ಇಡೀ ದೇಶದ ಜನರು Rama Mandira ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಹಿಂದೂಗಳ ಬಹುನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ಇನ್ನೇನು ನಾಲ್ಕು ದಿನಗಳಲ್ಲಿ ನೆರವೇರಲಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾಯುತ್ತಿದ್ದಾರೆ. ಸದ್ಯ ರಾಮ ಮಂದಿರ ಉಧ್ಘಾಟನೆಯ ಖುಷಿಯಲ್ಲಿದ್ದ ಜನರಿಗೆ ಇದೀಗ ಗೊಂದಲ ಉಂಟಾಗುವಂತಹ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಜನವರಿ 22 ರಂದು ಚಲಾವಣೆಗೆ ಬರಲಿದೆ ರಾಮ ಮಂದಿರದ 500 ರೂ. ನೋಟುಗಳು

ಸಧ್ಯ ಸೋಶಿಯಲ್ ಮೀಡಿಯಾದಲ್ಲಿ 500 ರೂ. ಹೊಸ ವಿನ್ಯಾಸದ ನೋಟಿನ ಚಲಾವಣೆಯ ಕುರಿತು ಸುದ್ದಿಗಳು ವೈರಲ್ ಆಗುತ್ತಿದೆ. 500 ರೂ. ನೋಟಿನಲ್ಲಿ ಮಹಾತ್ಮಗಾಂಧಿ ಹಾಗು ಕೆಂಪು ಕೋಟೆಯ ಬದಲಾಗಿ ಬೇರೆ ಚಿತ್ರವನ್ನು ಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ನೋಟಿನ ಚಿತ್ರವನ್ನು ಕಂಡು ಜನಸಾಮಾನ್ಯರು ಅಚ್ಚರಿ ಪಡುತ್ತಿದ್ದಾರೆ. ಮತ್ತೆ 500 ರೂ.ನೋಟು ಬ್ಯಾನ್ ಆಗುತ್ತಾ ಎನ್ನುವ ಚಿಂತೆ ಜನಸಮಾನ್ಯರಲ್ಲಿ ಮೂಡಿದೆ.

ಇನ್ನು ಓದಿ: Ram Mandir: ಅಯೋಧ್ಯೆಗೆ ಉಚಿತ ರೈಲು ಪ್ರಯಾಣ ಯೋಜನೆ! ಶ್ರೀರಾಮನ ದರ್ಶನಕ್ಕೆ ಉಚಿತ ರೈಲು ಪ್ರಯಾಣ.

ವೈರಲ್ 500 ನೋಟಿನಲ್ಲಿ ಭಗವಾನ್ ರಾಮ

ಅಯೋಧ್ಯೆಯ ರಾಮಮಂದಿರ ಮತ್ತು ರಾಮಮಂದಿರದ ಭಾವಚಿತ್ರಗಳಿಂದ ಅಲಂಕರಿಸಲ್ಪಟ್ಟ 500 ರೂಪಾಯಿ ನೋಟುಗಳ ಮಾರ್ಫಿಂಗ್ ಚಿತ್ರಗಳು ಆನ್‌ ಲೈನ್‌ ನಲ್ಲಿ ಹರಿದಾಡುತ್ತಿವೆ. ವೈರಲ್ ಫೋಟೋಗಳಲ್ಲಿ ನೋಟಿನ ಮುಂಭಾಗದಲ್ಲಿ ಭಗವಾನ್ ರಾಮನನ್ನು ಮತ್ತು ನೋಟಿನ ಹಿಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಕೆಂಪು ಕೋಟೆಯ ಸಾಂಪ್ರದಾಯಿಕ ಚಿತ್ರಗಳನ್ನು ಬದಲಿಸಿ ರಾಮಮಂದಿರವನ್ನು ಚಿತ್ರಿಸಲಾಗಿದೆ.

ರಾಮ ಮಂದಿರದ 500 ರೂ. ನೋಟಿನ ಬಗ್ಗೆ RBI ಸ್ಪಷ್ಟನೆ

ಈ ನೋಟುಗಳನ್ನು ಜನವರಿ 22, 2024 ರಂದು ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನೋಟುಗಳ ಚಿತ್ರಗಳನ್ನು ಎಡಿಟ್ ಮಾಡಲಾಗಿದ್ದು, ಹೊಸ ನೋಟುಗಳ ಬಿಡುಗಡೆಗೆ ಸಂಬಂಧಿಸಿದಂತೆ Reserve Bank of India ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈಗ ಚಲಾವಣೆಯಲ್ಲಿರುವ 500 ರೂ.ನೋಟಿನ ಹೊರತಾಗಿ ರಾಮ ಮಂದಿರ ಚಿತ್ರವಿರುವ 500 ರೂ. ನೋಟುಗಳು ಚಲಾವಣೆಗೆ ಬರುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ