50 ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವವರಿಗೆ ಹೊಸ ನಿಯಮ, ಕೇಂದ್ರದ ಆದೇಶ.

ದೇಶದಲ್ಲಿ ಕೇಂದ್ರ ಸರಕಾರ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಂಕ್ ಗ್ರಾಹಕರ ಸುರಕ್ಷತೆಗಾಗಿ ಕೇಂದ್ರ ಸರಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಇತ್ತೀಚಿಗೆ ಸರ್ಕಾರ ನಗದು ವಹಿವಾಟುಗಳು ಹೆಚ್ಚಿನ ನಿಯಮವನ್ನು ವಿಧಿಸಿತ್ತು.

RBI new rules for transactions above Rs 50,000
RBI new rules for transactions above Rs 50,000

ಸದ್ಯ ದೇಶದಲ್ಲಿ ಆನ್ಲೈನ್ ಪಾವತಿ ಹೆಚ್ಚುತ್ತಿದೆ ಎನ್ನವಹುದು, ಯಾವುದೇ ಹಣಕಾಸಿನ ವಹಿವಾಟು ಕೂಡ UPI ಮೂಲಕವೇ ವಾರ್ಗಾವಣೆ ಆಗುತ್ತಿದೆ. ಸದ್ಯ ಕೇಂದ್ರ ಸರ್ಕಾರ ಹಣದ ವಹಿವಾಟಿಗೆ (Money Transaction) ಹೊಸ ನಿಯಾಮವನ್ನು ಪರಿಚಯಿಸಿದೆ. ಅಕ್ರಮ ಹಣದ ವರ್ಗಾವಣೆಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಅಂತಾರಾಷ್ಟ್ರೀಯ ವಹಿವಾಟಿಗೆ ಕೇಂದ್ರದ ಹೊಸ ರೂಲ್ಸ್
ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಹಣದ ವರ್ಗಾವಣೆಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಹಿವಾಟಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ಹೆಚ್ಚುತ್ತಿರುವ ವಂಚನೆಯನ್ನು ತಡೆಗಟ್ಟಲು ಹಾಗೂ ಸುರಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಸರ್ಕಾರ ಹಣ ವರ್ಗಾವಣೆ ತಡೆ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಹಣದ ವಹಿಟಿಗೆ ಪರಿಚಯಿಸಿರುವ ಹೊಸ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ.

50 ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವವರಿಗೆ ಹೊಸ ನಿಯಮ
ಇನ್ನುಮುಂದೆ 50 ಸಾವಿರ ರೂ. ಗಿಂತ ಹೆಚ್ಚಿನ ಅಂತಾರಾಷ್ಟ್ರೀಯ ವಹಿವಾಟು ಕೂಡ ಪರಿಶೀಲನೆಗೆ ಒಳಪಡಲಿದೆ. ಸರ್ಕಾರದ ಈ ಹೆಜ್ಜೆಯು ಟೀಟರ್ ಫಂಡಿಂಗ್ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಮಾಡಿದ ನಿಯಮಗಳನ್ನು ಹೆಚ್ಚು ಕಠಿಣಗೊಳಿಸಿದೆ. ಇದರಿಂದ ಸರ್ಕಾರವು ವಹಿವಾಟು ಪ್ರಕರಣಗಳನ್ನು ತನಿಖೆ ಮಾಡಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಕೇಂದ್ರ ಸರ್ಕಾರವು 2005 ರಲ್ಲಿ ಮನಿ-ಲಾಂಡರಿಂಗ್ ತಡೆಗಟ್ಟುವಿಕೆ ನಿಯಮಗಳನ್ನು ತಿದ್ದುಪಡಿ ಮಾಡಿದೆ.

ಈ ನಿಯಮವು ರೂ. 50,000 ಕ್ಕಿಂತ ಹೆಚ್ಚಿನ ಅಂತರರಾಷ್ಟ್ರೀಯ ವಹಿವಾಟುಗಳನ್ನು ದಾಖಲಿಸಲು ಹೆಚ್ಚು ಕಷ್ಟಕರವಾಗಿದೆ. ಆದರೆ ಈಗ ಸರ್ಕಾರ ಮತ್ತೆ ತಿದ್ದುಪಡಿ ಮಾಡಿದೆ. ಸರ್ಕಾರದ ಈ ಕ್ರಮದಿಂದ 50,000 ರೂ.ಗಿಂತ ಹೆಚ್ಚಿನ ಪ್ರತಿ ವಿದೇಶಿ ವಹಿವಾಟು ಪರಿಶೀಲನೆಗೆ ಒಳಪಡುತ್ತದೆ. ವಹಿವಾಟುದಾರರನ್ನು ಗುರುತಿಸಿ, ವ್ಯವಹಾರದ ಉದ್ದೇಶವನ್ನು ಸರಿಯಾಗಿ ಖಚಿತಪಡಿಸಿಕೊಳ್ಲಬೇಕಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ