ಉದ್ಯೋಗ ವಾರ್ತೆ : ‘IDBI’ ಬ್ಯಾಂಕ್ ನಲ್ಲಿ 2000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ : ಡಿ.6 ರೊಳಗೆ ಅರ್ಜಿ ಸಲ್ಲಿಸಿ.

ತನ್ನ ಕಾರ್ಯಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮದಲ್ಲಿ, IDBI ಬ್ಯಾಂಕ್ ಬೃಹತ್ ನೇಮಕಾತಿ ಡ್ರೈವ್ ಅನ್ನು ಘೋಷಿಸಿದೆ, ಮಹತ್ವಾಕಾಂಕ್ಷಿ ವ್ಯಕ್ತಿಗಳಿಗೆ 2000 ಕ್ಕೂ ಹೆಚ್ಚು ವೃತ್ತಿ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಸಂಭಾವ್ಯ ಅಭ್ಯರ್ಥಿಗಳಿಗೆ ಅವಕಾಶವನ್ನು ಪಡೆದುಕೊಳ್ಳಲು ಮತ್ತು ಭಾರತದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಲು ಪ್ರೋತ್ಸಾಹಿಸುತ್ತದೆ.

Recruitment for more than 2000 posts in IDBI Bank Apply by 6th December.
Recruitment for more than 2000 posts in IDBI Bank Apply by 6th December.

ನೀವು ಬ್ಯಾಂಕಿನಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ಇಲ್ಲಿದೆ ಗುಡ್ ನ್ಯೂಸ್. ಐಡಿಬಿಐ ಬ್ಯಾಂಕ್ ಎಕ್ಸಿಕ್ಯೂಟಿವ್ ಸೇಲ್ಸ್ ಮತ್ತು ಆಪರೇಷನ್ಸ್ ಜೊತೆಗೆ 2100 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಹೊರಡಿಸಿದೆ.

ಅಧಿಸೂಚನೆಯಲ್ಲಿ, ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಡಿಸೆಂಬರ್ 31 ರಂದು ಪರೀಕ್ಷೆ ನಡೆಯಲಿದ್ದು, ಕಾರ್ಯನಿರ್ವಾಹಕ ಮಾರಾಟ ಮತ್ತು ಕಾರ್ಯಾಚರಣೆಗಳಿಗೆ ಡಿಸೆಂಬರ್ 30, 2023 ರಂದು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ibpsonline.ibps.in/idbiesonov23/ ಲಿಂಕ್ ಗೆ ಭೇಟಿ ನೀಡುವ ಮೂಲಕ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇದಕ್ಕಾಗಿ ಅರ್ಹತಾ ಮಾನದಂಡಗಳು ಯಾವುವು ಎಂದು ನಾವು ಈಗ ನಿಮಗೆ ಹೇಳೋಣ.

ಹುದ್ದೆಯ ಹೆಸರು ಮತ್ತು ಹುದ್ದೆಯ ಸಂಖ್ಯೆ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್1300
ಎಕ್ಸಿಕ್ಯೂಟಿವ್800

ವಿದ್ಯಾರ್ಹತೆ

ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೂ ವಿಷಯದಲ್ಲಿ ಬ್ಯಾಚುಲರ್ ಪದವಿಯನ್ನು ಕನಿಷ್ಠ 60% ನೊಂದಿಗೆ ಪೂರ್ಣಗೊಳಿಸಿರಬೇಕು.

ಎಕ್ಸಿಕ್ಯೂಟಿವ್ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

Join Telegram Group Join Now
WhatsApp Group Join Now

ವಯೋಮಿತಿ

ಈ ನೇಮಕಾತಿಯಲ್ಲಿರುವ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ಹಾಗು ಗರಿಷ್ಠ ವಯಸ್ಸು 25 ವರ್ಷದೊಳಗಿರಬೇಕು. ಆದರೆ, ಸರ್ಕಾರದ ಆದೇಶದಂತೆ ಕೆಲವು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಈ ಕೆಳಕಂಡಂತೆ ಸಡಿಲಿಕೆ ನೀಡಲಾಗಿದೆ.

  • ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ
  • SC ST ಅಭ್ಯರ್ಥಿಗಳಿಗೆ – 05 ವರ್ಷ
  • ವಿಕಲಚೇತನ ಅಭ್ಯರ್ಥಿಗಳಿಗೆ – 10 ವರ್ಷ
  • ಮಾಜಿ ಸೈನಿಕರಿಗೆ – 05 ವರ್ಷ
  • 1984 ರ ಗಲಭೆಗಳಿಂದ ಪ್ರಭಾವಿತರಾದ ವ್ಯಕ್ತಿಗಳಿಗೆ – 05 ವರ್ಷ

ವೇತನ

ಈ ನೇಮಕಾತಿಯಲ್ಲಿರುವ ಎರಡೂ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಕಂಡಂತೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

  • ಮೊದಲ ವರ್ಷ ಪ್ರತಿ ತಿಂಗಳು – ರೂ. 29000/-
  • ಎರಡನೇ ವರ್ಷ ಪ್ರತಿ ತಿಂಗಳು – ರೂ. 31000/-

ಆಯ್ಕೆ ವಿಧಾನ

ಈ ನೇಮಕಾತಿಯಲ್ಲಿರುವ ಎರಡೂ ಹುದ್ದೆಗಳಿಗೂ ಸಹ ಒಂದೇ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳಿಗೆ ಮೊದಲು ಆನ್ಲೈನ್ ಟೆಸ್ಟ್ ನೀಡಲಾಗುತ್ತದೆ ಹಾಗು ಅದರಲ್ಲಿ ಪಾಸಾದವರಿಗೆ ನಂತರ ಡಾಕ್ಯುಮೆಂಟ್ಸ್ ವೆರಿಫಿಕೇಷನ್ ಮಾಡಲಾಗುತ್ತದೆ. ಹಾಗು ಕೊನೆಯದಾಗಿ ಅಭ್ಯರ್ಥಿಗಳಿಗೆ ಮೆಡಿಕಲ್ ಟೆಸ್ಟ್ ಮಾಡುವುದರ ಮೂಲಕ ಅತಿ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸುವ ವಿಧಾನ

ಈ ನೇಮಕಾತಿಗೆ ಅರ್ಜಿ ಹಾಕಲು ಆಸಕ್ತಿ ಇರುವ ಅಭಾಯ್ರ್ಥಿಗಳು IDBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಕೆರಿಯರ್(Careers) ವಿಭಾಗದಲ್ಲಿ ಈ ನೇಮಕಾತಿ ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ನವೆಂಬರ್ 22, 2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 06, 2023

ಅರ್ಜಿ ಶುಲ್ಕ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿ ಪಡಿಸಿದ ಅರ್ಜಿ ಶುಲ್ಕವನ್ನು ಸಹ ಆನ್ಲೈನ್ ನಲ್ಲಿಯೇ ಪಾವತಿಸಬೇಕು. ಅರ್ಜಿ ಶುಲ್ಕದ ವಿವರ ಕೆಳಗಿನಂತಿದೆ.

  • SC ST ಹಾಗು ವಿಕಲಚೇತನ ಅಭ್ಯರ್ಥಿಗಳಿಗೆ – ರೂ. 200/-
  • ಉಳಿದ ಎಲ್ಲ ಅಭ್ಯರ್ಥಿಗಳಿಗೆ – ರೂ. 1000/-

ಪ್ರಮುಖ ಲಿಂಕುಗಳು

ಮೇಲಿನ ನೇಮಕಾತಿಯ ಅಧಿಸೂಚನೆCLICK HERE
ಮೇಲಿನ ನೇಮಕಾತಿಗೆ ಅರ್ಜಿ ಸಲ್ಲಿಸಲುCLICK HERE

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ