Recruitment Of Forest Guard : ಕರ್ನಾಟಕ ಅರಣ್ಯ ಇಲಾಖೆಯಲ್ಲಿ 540 ಅರಣ್ಯ ಪಾಲಕ ಹುದ್ದೆಗಳು- ಇಲ್ಲಿದೆ ವಿವರ.

Recruitment Of Forest Guard

Recruitment Of Forest Guard : ಅರಣ್ಯ ರಕ್ಷಣೆ ಮಾಡುವ ಕನಸು ಹಾಗೂ ಈ ಸವಾಲಿನ ಕೆಲಸ ಮಾಡುವ ಇಚ್ಚೆ ಇದ್ದರೆ ನಿಮಗೆ ಹೊಸ ಅವಕಾಶ ಒದಗಿ ಬಂದಿದೆ.

Recruitment of Forest Guard Posts in Karnataka Forest Department
Recruitment of Forest Guard Posts in Karnataka Forest Department

ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ವೃತ್ತಗಳಲ್ಲಿ ಖಾಲಿರುವ 540 ‘ಗಸ್ತು ಅರಣ್ಯ ಪಾಲಕ’ ಅಥವಾ ‘ಅರಣ್ಯ ರಕ್ಷಕ’ (Forest Guard) ಹುದ್ದೆಗಳಿಗೆ ಅರ್ಹ ಪುರುಷ, ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಇದೇ ಡಿಸೆಂಬರ್ 30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ.

ಈ 540 ಹುದ್ದೆಗಳಲ್ಲಿ 506 ಹುದ್ದೆಗಳು ಹೊಸದಾಗಿ ಸೃಜಿಸಲಾದ ಹುದ್ದೆಗಳು. 34 ಹುದ್ದೆಗಳು ಹಿಂಬಾಕಿ ಹುದ್ದೆಗಳಾಗಿವೆ. ಹಾಗಾದರೆ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ? ಎಂಬುದನ್ನು ಇಲ್ಲಿ ತಿಳಿಯೋಣ.

ಶೈಕ್ಷಣಿಕ ಅರ್ಹತೆ

ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಪಾಸಾಗಿರಬೇಕು ಅಥವಾ ತತ್ಸಮಾನ ಆಗಿದೆ. ಕೆಲ ಸಂದರ್ಭಗಳಲ್ಲಿ ಪಿಯುಸಿಗೆ ಸಮಾನ ಎಂದು ಪರಿಗಣಿಸಲಾದ ಮೂರು ವರ್ಷದ ಡಿಪ್ಲೋಮಾ ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಅಲ್ಲ.

ವಯೋಮಿತಿ

Join Telegram Group Join Now
WhatsApp Group Join Now

ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷವಿದ್ದು, ಗರಿಷ್ಠ 27 ವರ್ಷವಿದೆ. ಪ್ರವರ್ಗಗಳಾದ 2ಎ, 2ಬಿ, 3ಎ, 3ಬಿಗಳಿಗೆ ಗರಿಷ್ಠ 30 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 32 ವಯೋಮಿತಿಯಲ್ಲಿ ಸಡಿಲಿಕೆ ಇದೆ. ಮಾಜಿ ಸೈನಿಕರಿಗೆ ಹಾಗೂ ಅರಣ್ಯ ಇಲಾಖೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಅರಣ್ಯ ಪ್ರೇಕ್ಷಕರಿಗೂ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಸಾಮಾನ್ಯ, ಪ್ರವರ್ಗಗಳಾದ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹ 200. ಇದರಲ್ಲಿನ ಮಹಿಳಾ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ₹100, ಎಸ್‌ಸಿ, ಎಸ್‌ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ₹100, ಇದರಲ್ಲಿನ ಮಹಿಳಾ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ₹50.

ಎಲ್ಲರಿಗೂ ₹20 ಸೇವಾ ಶುಲ್ಕ ಇರುತ್ತದೆ. ಶುಲ್ಕ ಪಾವತಿಸಲು ಜನವರಿ 5 ಕಡೆಯ ದಿನ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

ಇನ್ನು ಓದಿ : ‘NTPC’ ಯಲ್ಲಿ ಉದ್ಯೋಗವಕಾಶ, ತಿಂಗಳಿಗೆ 1.5 ಲಕ್ಷ ರೂ. ವೇತನ. Apply Here

ವೇತನ

₹47,650

ಪರೀಕ್ಷೆ ಹೇಗಿರಲಿದೆ?

ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ದೈಹಿಕ ಸಾಮರ್ಥ್ಯತೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಯಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾನದಂಡಗಳಿದ್ದು ಅವುಗಳಿಗಾಗಿ ಆಸಕ್ತರು ಅಧಿಸೂಚನೆ ನೋಡಿಕೊಳ್ಳಬೇಕು.

ದೈಹಿಕ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆ ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ. 2 ಗಂಟೆ ಅವಧಿಯ 100 ಅಂಕಗಳ ಒಂದೇ ಪತ್ರಿಕೆ ಇದಾಗಿರುತ್ತದೆ.

ಇದರಲ್ಲಿ ಎರಡು ಭಾಗ ಇದ್ದು 40 ಅಂಕಗಳಿಗೆ ಗಣಿತ ವಿಷಯ ಆಧರಿಸಿದ 40 ಆಪ್ಟಿಟ್ಯೂಡ್ ಪ್ರಶ್ನೆಗಳಿರುತ್ತವೆ. ಎರಡನೇ ಭಾಗದಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿಷಯಕ್ಕೆ ಸಂಬಂಧಿಸಿದಂತೆ 60 ಅಂಕಗಳಿಗೆ 60 ಪ್ರಶ್ನೆಗಳಿರುತ್ತವೆ.

ಪಿಯುಸಿವರೆಗಿನ ಪಠ್ಯಕ್ರಮವನ್ನು ಇದು ಹೊಂದಿದ್ದು, ತಲಾ 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಹಾಗೂ ಪಿಯುಸಿ/ತತ್ಸಮಾನದ ಮೆರಿಟ್ ಅನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಹುದ್ದೆಗಳ ವಿಭಾಗವಾರು ವರ್ಗೀಕರಣ, ಮೀಸಲು ರೋಸ್ಟರ್‌ಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ aranya.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಐದು ವರ್ಷ ಸೇವೆ ಕಡ್ಡಾಯ

ಅರಣ್ಯ ಪಾಲಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 9 ತಿಂಗಳು ಮೂಲ ತರಬೇತಿ ಇರುತ್ತದೆ. ತರಬೇತಿ ಅವಧಿಯೂ ಸೇರಿದಂತೆ 36 ತಿಂಗಳು ಪ್ರೊಬೇಷನರಿ ಅವಧಿ ಇರುತ್ತದೆ. ಅಲ್ಲದೇ ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಕನಿಷ್ಠ ಐದು ವರ್ಷ ಕೆಲಸ ಮಾಡಬೇಕು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ