Hello ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಕುರಿತಾಗಿ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈಗಾಗಲೇ ನಾಲ್ಕು ಯೋಜನೆಗಳ ಅನುಸ್ತಾನದ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಐದನೇ ಯೋಜನೆಯ ಅನುಷ್ಠಾನದ ಸಿದ್ಧತೆಯಲ್ಲಿದೆ. ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳ ಲಾಭವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದ ಗೃಹಿಣಿಯರು ಗೃಹ ಲಕ್ಷ್ಮಿಯ 2000 ಹಣ ಖಾತೆಗೆ ಯಾವಾಗ ಜಮಾ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

rice price increase in karnataka
ಇನ್ನು ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳ ಜಾರಿ ಮಾಡುವ ನಿರ್ಧಾರ ಕೈಗೊಂಡಾಗಿನಿಂದ ಜನರು ಬೆಲೆ ಏರಿಕೆಯ ಪರಿಣಾಮ ಎದುರಿಸಬೇಕಾಗಿದೆ. ಕೆಲ ವಸ್ತುಗಳ ಬೆಲೆಯ ಏರಿಕೆ ಮಾಡಲಾಗುತ್ತಿದೆ. ಈ ಹಿಂದೆ ಏಪ್ರಿಲ್ 1 ಹಣಕಾಸು ವರ್ಷದ ಆರಂಭದ ಹಿನ್ನಲೆ ಕೂಡ ಜನರು ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಈಗಾಗಲೇ ಹಣದುಬ್ಬರ ಪರಿಣಾಮ ಎದುರಿಸುತ್ತಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಗಲಿದೆ. ದಿನನಿತ್ಯ ಬಳಕೆಯ ಈ ವಸ್ತುವಿನ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.
ರಾಜ್ಯದ ಜನತೆಗೆ ಬೇಸರದ ಸುದ್ದಿ
ಇನ್ನು ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಸರ್ಕಾರ ಉಚಿತವಾಗಿ 5 ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುತ್ತಿದೆ. ರಾಜ್ಯದ ಜನರು ಹಣ, ಅಕ್ಕಿಯ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಸಾರ್ಕಾರದ ಯೋಜನೆಯ ಲಾಭ ಪಡೆಯಲು ಹೆಚ್ಚಿನ ಜನರು ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಉಚಿತ ಅಕ್ಕಿ ಪಡೆಯುವ ಖುಷಿಯಲ್ಲಿದ್ದ ರಾಜ್ಯದ ಜನತೆಗೆ ಇದೀಗ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಶೇ.15 ರಿಂದ 20 ರಷ್ಟು ಏರಿಕೆ ಕಾಣುತ್ತಿದೆ ಅಕ್ಕಿಯ ದರ
ಉಚಿತ 5 ಕೆಜಿ ಅಕ್ಕಿ ಪಡೆಯುತ್ತಿರುವ ರಾಜ್ಯದ ಜನತೆ ಇದೀಗ ಅಕ್ಕಿಯನ್ನು ಹೆಚ್ಚಿನ ಹಣ ನೀಡಿ ಖರೀದಿಸಬೇಕಾಗಿದೆ. ವಿವಿಧ ತಳಿಯ ಅಕ್ಕಿಯ ಬೆಲೆಗಳು ಏರಿಕೆ ಕಾಣುತ್ತಿದೆ. ಅಕ್ಕಿಯ ದರ ರಾಜ್ಯದಲ್ಲಿ ಶೇ. 15 ರಿಂದ 20 ರಷ್ಟು ಏರಿಕೆ ಕಾಣುತ್ತಿದೆ. ಕೆಜಿಗೆ 45 ರಿಂದ 48 ರೂ. ಇದ್ದ ರಾ ಸೋನಾ ಮಸೂರಿ ಅಕ್ಕಿ ದರ 55 ರಿಂದ 60 ತಲುಪಿದೆ.
ಕೆಜಿಗೆ 28 ರಿಂದ 30 ರೂ. ಇದ್ದ ದೋಸೆ ಅಕ್ಕಿಯ ದರ 35 ರೂ. ಹೆಚ್ಚಳವಾಗಿದೆ. ಕೆಜಿಗೆ 38 ರಿಂದ 43 ರೂ. ಇದ್ದ ಸ್ಟೀಮ್ ಅಕ್ಕಿ ದರ 45 ರಿಂದ 50 ತಲುಪಿದೆ. ಇನ್ನು ಮುಂಗಾರು ಮಳೆಯಲ್ಲಿನ ಏರುಪೇರು ಅಕ್ಕಿಯ ದರದ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮಳೆಯ ಕೊರತೆಯಿಂದಾಗಿ ರೈತರ ಬೆಲೆಗಳು ನಾಶವಾಗುತ್ತಿದೆ. ಮಳೆಯ ಕೊರತೆಯ ಕಾರಣ ಮುಂದಿನ ದಿನದಲ್ಲಿ ಅಕ್ಕಿಯ ಬೆಲೆಗಳು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.