ಇತ್ತೀಚಿನ ಸುದ್ದಿಗಳಲ್ಲಿ, ಶೆಲ್ ಬ್ಯಾಂಕ್‌ನ ನಿವಾಸಿಗಳು ಮತ್ತು ಪ್ರಯಾಣಿಕರು ಡೀಸೆಲ್ ಬೆಲೆಯಲ್ಲಿ ಅನಿರೀಕ್ಷಿತ ಮತ್ತು ಗಮನಾರ್ಹ ಏರಿಕೆಯೊಂದಿಗೆ ಸ್ವಾಗತಿಸಿದ್ದಾರೆ. ಕೇವಲ ಒಂದು ವಾರದಲ್ಲಿ 20 ರೂ.ಗಳ ಈ ಹಠಾತ್ ಉಲ್ಬಣವು ಸಮುದಾಯದಲ್ಲಿ ಆತಂಕ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರೂ.20 ಹೆಚ್ಚಳ
ಸರ್ಕಾರಿ ಬಂಕ್ ಗಳಲ್ಲಿ ಹೆಚ್ಚಳವಾಗದ ಡೀಸೆಲ್ ಬೆಲೆ ಮಾತ್ರ, ಖಾಸಗಿ ಶೆಲ್ ಬಂಕ್ ಗಳಲ್ಲಿ ಒಂದೇ ವಾರದಲ್ಲಿ ರೂ.20 ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗೆ ಏರಿಕೆಯಾಗಿರುವ ಹಿನ್ನಲೆಯಲ್ಲಿ, ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡಲಾಗಿದೆ.
ಶೆಲ್ ಬಂಕ್ ಗಳಲ್ಲಿ ಕೇವಲ ಒಂದು ವಾರದಲ್ಲೇ ಪ್ರತಿ ಲೀಟರ್ ಡೀಸೆಲ್ ಗೆ ಬರೋಬ್ಬರಿ 20 ರೂ.ನಷ್ಟು ಹೆಚ್ಚಳ ಮಾಡಿ, ಡೀಸೆಲ್ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ.
ರೂ.20ರಷ್ಟು ಡೀಸೆಲ್ ಹೆಚ್ಚಳ ಮಾಡಿದ ಕಾರಣ ಶೆಲ್ ಬಂಕ್ ಗಳಲ್ಲಿ ಬೆಂಗಳೂರಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.122 ತಲುಪಿದ್ರೇ, ಮುಂಬೈನಲ್ಲಿ ರೂ.130, ಚೈನ್ನೈನಲ್ಲಿ ರೂ.129ರಷ್ಟು ತಲುಪಿದೆ.
ಇನ್ನೂ ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ದರ ಹೆಚ್ಚಳ ಮಾಡಲಾಗಿದೆಯೇ ವಿನಹ, ಸರ್ಕಾರಿ ಬಂಕ್ ಗಳಲ್ಲಿ ಸತತ 18ನೇ ತಿಂಗಳು ಕೂಡ ದರ ಏರಿಕೆ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಸರ್ಕಾರಿ ಬಂಕ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ ರೂ.87.99ರಷ್ಟಿದೆ.