Breaking News.! ಇನ್ಮುಂದೆ ದೇವಸ್ಥಾನದಲ್ಲಿ ಈ ವಸ್ತುಗಳನ್ನ ಮಾರಾಟ ಮಾಡುವಂತಿಲ್ಲ.! ಸರ್ಕಾರದ ಇನ್ನೊಂದು ಘೋಷಣೆ.

ಸಾಮಾನ್ಯವಾಗಿ ಹಿಂದೂ ಧರ್ಮದವರು ದೇವರ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಪ್ರತಿ ಊರಿನಲ್ಲಿ ಕೂಡ ಒಂದಕ್ಕಿಂತ ಹೆಚ್ಚು ದೇವಾಲಯಗಳು ಇದ್ದೆ ಇರುತ್ತದೆ. ಇನ್ನು ರಾಜ್ಯದಲ್ಲಿ ಕೂಡ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಕರ್ನಾಟಕ ರಾಜ್ಯದ ಪ್ರಸ್ತಿದ್ದ ದೇವಾಲಯಗಳಿಗೆ ದೇಶ ವಿದೇಶದಿಂದ ಲಕ್ಷಾಂತರ ಮಂದಿ ಭಕ್ತರು ಪ್ರತಿ ನಿತ್ಯ ಬರುತ್ತಾರೆ.

rules and regulations of shops in front of temples in karnataka
rules and regulations of shops in front of temples in karnataka

karnataka shops and establishment rules near temple

ರಾಜ್ಯದ ದೇವಾಲಯಗಳಿಂದ ಹೊಸ ನಿಯಮ ಜಾರಿ

ಸಾಮಾನ್ಯವಾಗಿ ದೇವಸ್ಥಾನ ಪವಿತ್ರತೆಯ ಸಂಕೇತವಾಗಿದೆ. ದೇವಸ್ಥಾನದ ಪಾವಿತ್ರತೆಯನ್ನು ಭಕ್ತರು ಎಂದು ಹಾಳುಮಾಡಬಾರದು ಎನ್ನುವ ಉದ್ದೇಶದಿಂದ ದೇವಸ್ತಾನದಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಭಕ್ತರು ದೇವಸ್ಥಾನದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯವಾಗುತ್ತದೆ. ಇದೀಗ ರಾಜ್ಯದ ದೇವಾಲಯಗಳಲ್ಲಿ ಹೊಸ ನಿಯಮವನ್ನು ಅಳವಡಿಸಾಲಾಗಿದೆ.

ಇನ್ನುಮುಂದೆ ದೇವಸ್ಥಾನದಲ್ಲಿ ಈ ವಸ್ತುಗಳನ್ನ ಮಾರಾಟ ಮಾಡುವಂತಿಲ್ಲ

ದೇವಸ್ಥಾನದ ಒಳಾಂಗಣದ ಸ್ವಚ್ಛತೆಯ ಜೊತೆಗೆ ದೇವಸ್ಥಾನದ ಹೊರ ವಾತಾವರಣವನ್ನು ಸ್ವಚ್ಛವಾಗಿರಿಸುವ ಉದ್ದೇಶದಿಂದ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ದೇವಾಲಯಗಳ ಆವರಣದ ಸುತ್ತಮುತ್ತ ಮೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳಾದಂತಹ ಗುಟ್ಕಾ, ಸಿಗರೇಟ್, ಪಾನ್ ಮಸಾಲಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ಈ ವಸ್ತುಗಳ ಮಾರಾಟದ ಜೊತೆಗೆ ದೇವಸ್ಥಾನದಲ್ಲಿ ಇಂತಹ ವಸ್ತುಗಳ ಬಳಕೆಯನ್ನು ಕೂಡ ನಿಷೇಧಿಸಲು ಸರ್ಕಾರ ಮುಂದಾಗಿದೆ.

ಸದ್ಯದಲ್ಲೇ ಜಾರಿಯಾಗಲಿದೆ ಹೊಸ ನಿಯಮ

ಸದ್ಯದಲ್ಲೇ ಈ ಹೊಸ ನಿಯಮದ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಜಾರಿಯಾಗಲಿದೆ. ಈ ಹಿಂದೆ ಸರ್ಕಾರ ಶಾಲಾ ಕಾಲೇಜುಗಳ ಆವರಣದ ವ್ಯಾಪ್ತಿಯ ನೂರು ಮೀಟರ್ ಗಳಲ್ಲಿ ಯಾವುದೇ ಅಂಗಡಿಗಳಲ್ಲಿ ಬಿಡಿ, ಗುಟ್ಕಾ, ಸಿಗರೇಟ್, ಪಾನ್ ಮಸಾಲಾ ಮಾರಾಟವನ್ನು ಸಂಪೂರ್ಣವಾಗಿ ನಿಷೇದಿಸಿತ್ತು. ಇದೀಗ ಈ ನಿಯಮವನ್ನು ರಾಜ್ಯದ ದೇವಾಲಯಗಳಲ್ಲಿಯೂ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಸದ್ಯದಲ್ಲೇ ದೇವಸ್ಥಾನದ ಸುತ್ತ ಮುತ್ತಲು ತಂಬಾಕು ವಸ್ತುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ