Job Alert: ಬರೋಬ್ಬರಿ 75,768 ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನ.24ರಿಂದ ಅರ್ಜಿ ಸಲ್ಲಿಸಿ!

ದೇಶದ ಭದ್ರತಾ ಪಡೆಗಳನ್ನು ಬಲಪಡಿಸುವ ಪ್ರಯತ್ನದಲ್ಲಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್‌ಗಳು), ಎನ್‌ಐಎ, ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಜನರಲ್ ಡ್ಯೂಟಿ (ಜಿಡಿ) ಕಾನ್ಸ್‌ಟೇಬಲ್‌ಗಳಿಗೆ ಬಹು ನಿರೀಕ್ಷಿತ ನೇಮಕಾತಿಯನ್ನು ಪ್ರಕಟಿಸಿದೆ. . ತಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮತ್ತು ಸಹ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಉತ್ಸಾಹ ಹೊಂದಿರುವ ವ್ಯಕ್ತಿಗಳಿಗೆ ಈ ನೇಮಕಾತಿ ಡ್ರೈವ್ ಒಂದು ಸುವರ್ಣ ಅವಕಾಶವಾಗಿದೆ

SSC GD Constable 2023 Recruitment, apply online
SSC GD Constable 2023 Recruitment, apply online

ಉದ್ಯೋಗ ಹುಡುಕುತ್ತಿರುವವರಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (Staff Selection Commission- SSC) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಬರೋಬ್ಬರಿ 75,768 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರು ಈ ಕಾನ್‌ಸ್ಟೇಬಲ್‌ (General Duty-GD) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು (SSC GD Constable 2023 Recruitment).

ನವೆಂಬರ್‌ 24ರಿಂದ ನೋಂದಣಿ ನಡೆಯಲಿದೆ. ಡಿಸೆಂಬರ್‌ 28 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (Job Alert).

ಹುದ್ದೆಗಳ ವಿವರ

ಬಾರ್ಡರ್‌ ಸೆಕ್ಯುರಿಟಿ ಫೋರ್ಸ್‌ (BSF)-ಪುರುಷರು: 24,806, ಮಹಿಳೆಯರು: 3,069
ಸೆಂಟ್ರಲ್‌ ಇಂಡಸ್ಟ್ರೀಯಲ್‌ ಸೆಕ್ಯುರಿಟಿ ಫೋರ್ಸ್‌ (CISF)-ಪುರುಷರು: 7,877, ಮಹಿಳೆಯರು: 721
ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (CRPF)-ಪುರುಷರು: 22,196, ಮಹಿಳೆಯರು: 3,231
ಶಸ್ತ್ರ ಸೀಮಾ ಬಲ್‌ (SSB)-ಪುರುಷರು: 4,839, ಮಹಿಳೆಯರು: 439
ಇಂಡೋ-ಟಿಬೆಟನ್‌ ಬಾರ್ಡರ್‌ ಪೊಲೀಸ್‌ (ITBP)-ಪುರುಷರು: 2,564, ಮಹಿಳೆಯರು: 442
ರೈಫಲ್‌ಮ್ಯಾನ್‌ (ಜನರಲ್‌ ಡ್ಯೂಟಿ) ಇನ್‌ ಅಸ್ಸಾಂ ರೈಫಲ್ಸ್‌ (AR)-ಪುರುಷರು: 4,624, ಮಹಿಳೆಯರು: 152
ಸೆಕ್ರಟ್ರಿಯೇಟ್‌ ಸೆಕ್ಯುರಿಟಿ ಫೋರ್ಸ್‌ (SSF)-ಪುರುಷರು: 458, ಮಹಿಳೆಯರು: 125
ನ್ಯಾಷನಲ್‌ ಇನ್‌ವೆಸ್ಟಿಗೇಷನ್‌ ಏಜೆನ್ಸಿ (NIA)-ಪುರುಷರು: 125.
ಹೀಗೆ ಪುರುಷರಿಗೆ 67,489 ಮತ್ತು ಮಹಿಳೆಯರಿಗೆ 8,179 ಹುದ್ದೆಗಳಿವೆ.

ವಿದ್ಯಾರ್ಹತೆ ಮತ್ತು ವಯೋಮಿತಿ

Join Telegram Group Join Now
WhatsApp Group Join Now

ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು: 18 ವರ್ಷ ಮತ್ತು ಗರಿಷ್ಠ ವಯಸ್ಸು: 23 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಸಾಮಾನ್ಯ / ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕಿದೆ. ನೆಟ್‌ ಬ್ಯಾಂಕಿಂಗ್, ಎಸ್‌ಬಿಐ ಚಲನ್, ಕ್ರೆಡಿಟ್ ಕಾರ್ಡ್‌, ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಸಬಹುದು.

ಆಯ್ಕೆ ವಿಧಾನ

ಆನ್‌ಲೈನ್‌ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಮಾನದಂಡ ಪರೀಕ್ಷೆ (PST), ವೈದ್ಯಕೀಯ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
  • ಹೋಮ್‌ ಪೇಜ್‌ನಲ್ಲಿ ನೋಂದಣಿ ಲಿಂಕ್‌ ಅನ್ನು ಆಯ್ಕೆ ಮಾಡಿ
  • ಹೆಸರು ನೋಂದಾಯಿಸಿ
  • ಸರಿಯಾದ ಮಾಹಿತಿ ಒದಗಿಸಿ ಅರ್ಜಿ ಭರ್ತಿ ಮಾಡಿ
  • ಡಾಕ್ಯುಮೆಂಟ್‌, ಫೋಟೊ ಅಪ್‌ಲೋಡ್‌ ಮಾಡಿ (ಅಗತ್ಯವಿದ್ದರೆ ಮಾತ್ರ)
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ)
  • ಮಾಹಿತಿ ಎಲ್ಲ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿ Submit ಬಟನ್‌ ಕ್ಲಿಕ್‌ ಮಾಡಿ
  • ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ ಔಟ್‌ ತೆಗೆದಿಡಿ

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ