ಇಳಿಕೆಯಾಯ್ತು ದಿಢೀರ್ ಏರಿಕೆಯಾಗಿದ್ದ ಈರುಳ್ಳಿ ದರ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಹಕರು: ಇಳಿಕೆಯಾದ ಈರುಳ್ಳಿ ದರ.

The relief for consumers is a reduction in onion prices
The relief for consumers is a reduction in onion prices

ಈರುಳ್ಳಿ ಬೆಲೆ ಕೆಲವು ದೇಶಗಳಲ್ಲಿ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಈ ಅತ್ಯಗತ್ಯ ಅಡಿಗೆ ಪದಾರ್ಥವು ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳಲ್ಲಿ ಪ್ರಧಾನವಾಗಿದೆ, ಆದರೆ ಅದರ ಬೆಲೆಗಳಲ್ಲಿನ ಏರಿಳಿತಗಳು ಮನೆಯ ಬಜೆಟ್‌ಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಇತ್ತೀಚೆಗಷ್ಟೇ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಹೆಚ್ಚುತ್ತಿರುವ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯಾಗಿದೆ.

ಕಳೆದ 15 ದಿನಗಳಿಂದ ಏರುಗತಿಯಲ್ಲಿ ಸಾಗಿ ಶತಕ ಬಾರಿಸಿದ್ದ ಈರುಳ್ಳಿ ದರ ಇಳಿಮುಖವಾಗಿದೆ. ರಾಜ್ಯದ ಮಾರುಕಟ್ಟೆಗಳಿಗೆ ಮಹಾರಾಷ್ಟ್ರ ಈರುಳ್ಳಿ ಬರತೊಡಗಿದ್ದು, ದಿಢೀರ್ ಏರಿಕೆ ಕಂಡಿದ್ದ ಈರುಳ್ಳಿ ದರ ಕಡಿಮೆಯಾಗತೊಡಗಿದೆ.

ಒಂದು ತಿಂಗಳ ಹಿಂದೆ ಟೊಮೆಟೊ ದರ ಗಗನಕ್ಕೇರಿ ಹೊಸ ದಾಖಲೆಯನ್ನೇ ಬರೆದಿತ್ತು.

ಈಗ ಈರುಳ್ಳಿ ಕೂಡ ಅದೇ ಹಾದಿಯಲ್ಲಿ ಸಾಗಿತ್ತು. ಚಿಕ್ಕಮಗಳೂರಿನಲ್ಲಿ 100 ರೂಪಾಯಿ ಗಡಿ ದಾಟಿತ್ತು. ರಾಜ್ಯದ ವಿವಿಧೆಡೆ ಕೆಜಿ ಈರುಳ್ಳಿಗೆ 70, 80, 90 ರೂಪಾಯಿವರೆಗೂ ಮಾರಾಟವಾಗಿತ್ತು.

ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದ್ದು, ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ರಾಜ್ಯದ ಮಾರುಕಟ್ಟೆಗಳಿಗೆ ಮಹಾರಾಷ್ಟ್ರ ಈರುಳ್ಳಿ ಬರತೊಡಗಿದ್ದು, ದರ ಇಳಿಕೆಯತ್ತ ಸಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ