ನೀವು ‘ಪೋಟೋ ಲ್ಯಾಬ್’ Apps ಬಳಸಿ ‘ಫೇಸ್ ಎಡಿಟಿಂಗ್’ ಮಾಡ್ತಿದ್ದೀರಾ? ಅದಕ್ಕೂ ಮುನ್ನಾ ಈ ಸುದ್ದಿ ಓದಿ.

ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ಟ್ರೆಂಟ್ ಸೃಷ್ಠಿಸ್ತಾ ಇರೋದು, ಯುವತಿಯರಾಧಿಯಾಗಿ, ಯುವಕರು, ಮಹಿಳೆಯರು, ಪುರುಷರ ಕಲರ್ ಪುಲ್ ತರಾವರಿ ಪೋಟೋಗಳು. ತಮ್ಮ ಮುಖವನ್ನು ಮತ್ತಷ್ಟು ಅಂದ ಚೆಂದವಾಗಿ ಕಾಣುವಂತೆ ಮಾಡೋಕೆ ಬಳಸ್ತಾ ಇರೋದೇ ಪೋಟೋ ಲ್ಯಾಬ್ ( Photo Lab App) ಎನ್ನೋ ಆಪ್.

The Risks of Face Editing with Photo Lab App
The Risks of Face Editing with Photo Lab App

ಹಾಗಾದ್ರೇ ನೀವು ಈ ಆಪ್ ಬಳಸಿ ನಿಮ್ಮ ಪೋಟೋ ಎಡಿಟ್ ಮಾಡ್ತಾ ಇದ್ದೀರ ಅಂದರೇ ಒಂದು ಕ್ಷಣ ನಿಲ್ಲಿಸಿ. ಯಾಕೆ ಅಂತ ಮುಂದೆ ಸುದ್ದಿ ಓದಿ.

ನೀವು ವಾಟ್ಸಾಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ತರಾವರಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಮಿಂಚುತ್ತಿರೋ ಪೋಟೋಗಳನ್ನು ಗಮನಿಸಿರ್ತೀರಿ. ವಾಟ್ಸಾಪ್ ಡಿಪಿ, ಸ್ಟೇಟಸ್, ಫೇಸ್ ಬುಕ್ ಪ್ರೊಫೈಲ್ ಪೋಟೋ ಸೇರಿದಂತೆ ಅಂದ ಚೆಂದದ ಪೋಟೋಗಳನ್ನು ಕಂಡ ನೀವು, ಇವರು ನನ್ನ ಫ್ರೆಂಡ್ಸ್ ಅಥವಾ ನನ್ನ ಗೆಳತಿಯೇ ಅನ್ನೋ ಅಚ್ಚರಿ ಕೂಡ ಕಾಡಿರುತ್ತದೆ.

ನಿಮ್ಮನ್ನು ಅಚ್ಚರಿ ಪಡಿಸಿರೋ ಗೆಳಯ, ಗೆಳತಿಯರ ಆ ಅಂದವಾದ ಪೋಟೋಗಳ ಹಿಂದೆ ಪೋಟೋ Photo Lab Pichture Editor and Art ಅನ್ನೋ ಆಪ್ ನ ಕೈಚಳಕದಲ್ಲಿ ಮೂಡಿ ಬಂದಂತವುಗಳು ಆಗಿದ್ದಾವೆ. ಈಗ ಹೆಚ್ಚು ಹೆಚ್ಚು ಜನರು ಇದರ ಮೊರೆ ಹೋಗಿ ತಮ್ಮ ಪೋಟೋಗಳನ್ನು ಅಂದಗಾಣಿಸೋ ಪ್ರಯತ್ನಕ್ಕೆ ಇಳಿದಿದ್ದಾರೆ.

ಆದ್ರೇ.. ಎಚ್ಚರ..!

ಹೌದು.. ನೀವು ಪೋಟೋ ಲ್ಯಾಬ್ ಬಳಸಿ ನಿಮ್ಮ ಪೋಟೋಗಳನ್ನು ಎಡಿಟ್ ಮಾಡೋ ಮುನ್ನಾ ಎಚ್ಚರವಿರಲಿ. ಯಾಕೆಂದ್ರೇ ಅಲ್ಲಿ ಬಳಕೆ ಮಾಡೋ ಪೋಟೋಗಳು ಮತ್ತೆಲ್ಲೋ ಸೋರಿಕೆಯಾಗಿ, ನಿಮ್ಮ ಮಾನ ಹರಾಜಿಗೂ, ನಿಮ್ಮ ತೇಜೋವಧೆಗೂ ಕಾರಣವಾಗುತ್ತಿವೆಯಂತೆ.

Join Telegram Group Join Now
WhatsApp Group Join Now

ನಿಮ್ಮದೇ ಪೋಟೋಗಳು ನಗ್ನ ಚಿತ್ರಗಳಾಗಿ ಹರಿದಾಟ

ನಿಜ ಸಾಕಷ್ಟು ಹುಡುಗಿಯರು PHOTO LAB ಎಂಬ ಆಬ್ ಬಳಸಿಕೊಂಡು ಫೇಸ್ ಎಡಿಟಿಂಗ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡ್ತಿದ್ದಾರೆ. ಆದ್ರೇ ಪೋಟೋ ಲ್ಯಾಬ್ ಆಪ್ ನಲ್ಲಿ ಬಳಕೆಯಾಗುತ್ತಿರೋ ಪೋಟೋಗಳು ನಗ್ನ ಚಿತ್ರಗಳಾಗಿ ಬೇರೆ ಬೇರೆ ವೆಬ್ ಸೈಟ್ ಗಳಲ್ಲಿ ಹರಿದಾಡುತ್ತಿವೆಯಂತೆ.

ಅದೇಗೆ ಗೊತ್ತಾ.?

ನೀವು ಪೋಟೋ ಲ್ಯಾಬ್ ಆಪ್ ನಲ್ಲಿ ನಿಮ್ಮ ಫೇಸ್ ಎಡಿಟ್ ಮಾಡೋದಕ್ಕೆ ನಿಮ್ಮ ಒಂದು ಪೋಟೋವನ್ನು ಅಪ್ ಲೋಡ್ ಮಾಡಲೇ ಬೇಕು. ಹೀಗೆ ಅಪ್ ಲೋಡ್ ಮಾಡೋ ಪೋಟೋಗಳು ಆನ್ ಲೈನ್ ವಂಚಕರಿಗೆ ಶೇರ್ ಆಗುತ್ತಿವೆಯಂತೆ. ನಿಮ್ಮ ಪೋಟೋಗಳು ಆಪ್ ನಲ್ಲೇ ಉಳಿಯೋ ಕಾರಣ ಅವುಗಳನ್ನು ಬಳಸಿ ಬೇರೆ ಬೇರೆ ಅಶ್ಲೀಲ ಜಾಲತಾಣಗಳಲ್ಲಿ ನಿಮ್ಮದೇ ಪೋಟೋಗಳು ಹರಿದಾಡೋ ಸಾಧ್ಯತೆ ಇದೆ ಅಂತ ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸೋ ಪೋಟೋ ಲ್ಯಾಬ್ ಬಳಸಿ ನಿಮ್ಮ ಫೇಸ್ ಎಡಿಟ್ ಮಾಡೋ ಮುನ್ನಾ ಎಚ್ಚರಿಕೆ ವಹಿಸೋದು ಮರೆಯಬೇಡಿ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ