ಇಂತವರ ಸಿಮ್ ಕಾರ್ಡ್ ರದ್ದಾಗಲಿದೆ: ಸಿಮ್ ಕಾರ್ಡ್ ಬಳಸುವವರಿಗೆ ದೇಶದಲ್ಲಿ ಜಾರಿಗೆ ಬಂತು ಹೊಸ ನಿಯಮ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.

ಒಂದು ಮಹತ್ವದ ಕಾನೂನು ಕ್ರಮದಲ್ಲಿ, ದೂರಸಂಪರ್ಕ ಉದ್ಯಮ ಮತ್ತು ಮೊಬೈಲ್ ಫೋನ್ ಬಳಕೆದಾರರಿಗೆ ದೂರಗಾಮಿ ಪರಿಣಾಮಗಳೊಂದಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹೆಗ್ಗುರುತು ನಿರ್ಧಾರವು ಸಿಮ್ ಕಾರ್ಡ್‌ಗಳ ರದ್ದತಿಯ ಸುತ್ತ ಸುತ್ತುತ್ತದೆ ಮತ್ತು ಅಂತಹ ತೀರ್ಪಿನ ಕಾನೂನು, ತಾಂತ್ರಿಕ ಮತ್ತು ಸಾಮಾಜಿಕ ಪ್ರಭಾವದ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಅಸಾಧಾರಣ ತೀರ್ಪಿನ ವಿವರಗಳನ್ನು ನಾವು ಪರಿಶೀಲಿಸುತ್ತೇವೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಅನ್ವೇಷಿಸುತ್ತೇವೆ.

The Supreme Court has given an important verdict canceling the SIM card
The Supreme Court has given an important verdict canceling the SIM card

ಪ್ರಸ್ತುತ ಈ ಡಿಜಿಟಲ್ ದುನಿಯಾದಲ್ಲಿ ಹೆಚ್ಚಿನ ಜನರು ಮೊಬೈಲ್ ಫೋನ್ (Mobile Phone) ಗಳನ್ನೂ ಬಳಕೆ ಮಾಡೇ ಮಾಡುತ್ತಾರೆ. ಒಬ್ಬರ ಬಳಿ ಒಂದಾದರು ಫೋನ್ ಇದ್ದೆ ಇರುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಒಂದೇ ಫೋನ್ ನಲ್ಲಿ ಎರಡು ಸಿಮ್(Sim) ಗಳನ್ನೂ ಬಳಸುವಂತ ಅವಕಾಶ ನೀಡುವ ಫೋನ್ ಗಳು ಕೂಡ ಲಭ್ಯವಿದೆ. ಸದ್ಯದ 5G ಯುಗದಲ್ಲಿ ಡ್ಯುಯೆಲ್ ಸಿಮ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು.

ಇನ್ನು ಎರಡು ಸಿಮ್ ಕಾರ್ಡ್ (Sim Card) ಗಳನ್ನೂ ಬಳಸುವವರು ಒಂದು ಸಿಮ್ ಅನ್ನು ಮಾತ್ರ ಪದೇ ಪದೇ ಸಕ್ರಿಯಗೊಳಿಸಿಕೊಂಡಿರುತ್ತಾರೆ. ಇನ್ನೊಂದು ನಂಬರ್ ನಲ್ಲಿ ವಾಟ್ಸಾಪ್ ಖಾತೆಯನ್ನು ತೆರೆದು ಅಥವಾ ಇನ್ನಾವುದೇ ಕೆಲಸಕ್ಕೆ ಬಳಸಿಕೊಂಡು ಆ ಸಿಮ್ ಅನ್ನು ಬಳಸದೆ ಹಾಗೆ ಬಿಟ್ಟುಬಿಡುತ್ತಾರೆ. ಸದ್ಯ ಇದೀಗ ಎರಡೆರಡು ಸಿಮ್ ಕಾರ್ಡ್ ಬಳಸುವವರಿಗೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ ಹೊರಬಿದ್ದಿದೆ.

ಸಿಮ್ ಕಾರ್ಡ್ ಬಳಸುವವರಿಗೆ ದೇಶದಲ್ಲಿ ಜಾರಿಗೆ ಬಂತು ಹೊಸ ನಿಯಮ
ಹೆಚ್ಚು ಸಮಯದಿಂದ ಬಳಕೆಯಲ್ಲಿಲ್ಲದ ನಂಬರ್ ಅನ್ನು TRAI 90 ದಿನಗಳ ನಂತರ ಹೊಸ ಬಳಕೆದಾರರಿಗೆ ನೀಡುತ್ತದೆ. TRAI ನ ಈ ಕ್ರಮ ಬಳಕೆದಾರರ ಗೌಪ್ಯತೆಗೆ ತೊಂದರೆ ನೀಡುತ್ತದೆ ಎಂದು ಹಲವಾರು ಪ್ರಶ್ನಿಸಿ TRAI ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗದೆ. ಸುಪ್ರೀಂ ಕೋರ್ಟ್ TRAI ಕ್ರಮದ ಅರ್ಜಿಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಮಹತ್ವದ ತೀರ್ಪನ್ನು ನೀಡಿದೆ. TRAI ಕ್ರಮವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿದೆ.

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಹಳೆಯ ಅಥವಾ ನಿಷ್ಕ್ರಿಯಗೊಳಿಸಿದ ಮೊಬೈಲ್ ಸಂಖ್ಯೆಯನ್ನು ಮರುಬಳಕೆ ಮಾಡುವುದನ್ನು ನಿಲ್ಲಿಸಲು TRAI ಗೆ ನಿರ್ದೇಶಿಸುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಯಿತು. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ.

“ಕಾನೂನುಬದ್ಧ 90 ದಿನಗಳ ಅವಧಿಯ ಮುಕ್ತಾಯದ ನಂತರ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಂಡ ಅಥವಾ ಸಂಪರ್ಕ ಕಡಿತಗೊಂಡ ಸಂಖ್ಯೆಗಳನ್ನು ಮರುಹಂಚಿಕೆ ಮಾಡುವುದರಿಂದ ಮೊಬೈಲ್ ಫೋನ್ ಸೇವಾ ಪೂರೈಕೆದಾರರನ್ನು ನಿರ್ಬಂಧಿಸಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ 90 ದಿನಗಳ ಅವಧಿಯ ಮುಕ್ತಾಯದ ನಂತರ ಹೊಸ ಚಂದಾದಾರರಿಗೆ ನಿಷ್ಕ್ರಿಯಗೊಂಡ ಅಥವಾ ಸಂಪರ್ಕ ಕಡಿತಗೊಂಡ ಸಂಖ್ಯೆಗಳನ್ನು ಮರುಹಂಚಿಕೆ ಮಾಡಲು ಸುಪ್ರೀಂ ಕೋರ್ಟ್ TRAI ಗೆ ಅನುಮತಿ ನೀಡಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ