Gruha Lakshmi: ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ 2000 ರೂ ಪಡೆಯಲು ಈ ಕೆಲಸ ಮಾಡುವುದು ಅವಶ್ಯಕ!

Gruha Lakshmi Yojana

Gruha Lakshmi Yojana: ಕರ್ನಾಟಕದ ಗೃಹ ಲಕ್ಷ್ಮೀ ಯೋಜನೆಯಲ್ಲಿ ಆರನೇ ಕಂತು ಆರ್ಥಿಕ ಸಹಾಯವನ್ನು ಪಡೆಯಲು ಅಗತ್ಯ ಕ್ರಮಗಳನ್ನು ನೆನಪಿಸಿಕೊಳ್ಳುತ್ತಾರೆ. ಫಲಾನುಭವಿಗಳು ರೂ 2000 ಸಬ್ಸಿಡಿಗೆ ಅರ್ಹತೆ ಪಡೆಯಲು ಗೊತ್ತುಪಡಿಸಿದ ಕೆಲಸದ ನಿಯೋಜನೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

This work is necessary to get Rs 2000 for the 6th installment of Gruha Lakshmi Yojana in karnataka
This work is necessary to get Rs 2000 for the 6th installment of Gruha Lakshmi Yojana in karnataka

ರಾಜ್ಯ ಸರ್ಕಾರ ರಾಜ್ಯದ ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣವನ್ನು ತಿಂಗಳವಾರು ಬಿಡುಗಡೆ ಮಾಡುತ್ತಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳು ಈಗಾಗಲೇ 5 ಕಂತಿನ ಹಣವನ್ನು ಪಡೆದಿದ್ದಾರೆ. ಗೃಹಿಣಿಯರು ಒಟ್ಟಾಗಿ ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 10 ಸಾವಿರ ಹಣವನ್ನು ಪಡೆದುಕೊಂಡಿದ್ದಾರೆ.

ಇನ್ನು ಫೆಬ್ರವರಿಯಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಯಾಗುವುದಾಗಿ ಮಾಹಿತಿ ಲಭಿಸಿದೆ. ಆದರೆ ಗೃಹ ಲಕ್ಷ್ಮಿ 6 ನೇ ಕಂತಿನ ಹಣವನ್ನು ಪಡೆಯಲು ನೀವು ಸರ್ಕಾರ ಈ ಹೊಸ ನಿಯಮ ಪಾಲಿಸುವುದು ಅಗತ್ಯವಾಗಿದೆ. ಅದೇನು ಹೊಸ ನಿಯಮ ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

ಗೃಹ ಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿ

ಗೃಹ ಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಹಾಗೆಯೆ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗೇ ಹಣ ಜಮಾ ಮಾಡಲು ಸಾದ್ಯವಾಗುವಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಅಗತ್ಯವಾಗಿದೆ. ನೀವು ಗೃಹ ಲಕ್ಷ್ಮಿ ಯೋಜನೆಗಾಗಿ ಎಲ್ಲ ರೀತಿಯ ಕೆಲಸವನ್ನು ಮಾಡಿದ್ದೂ, ಈ ಒಂದು ಕೆಲಸ ಬಾಕಿಯಿದ್ದರೆ ನಿಮಗೆ ಈ ತಿಂಗಳ ಹಣ ಜಮಾ ಆಗಲು ಸಾಧ್ಯವಿಲ್ಲ. ನೀವು 6 ನೇ ಕಂತಿನ ಲಾಭವನ್ನು ಪಡೆಯಲು ಈ ಕೆಲಸ ಮಾಡುವುದು ಅವಶ್ಯಕವಾಗಿದೆ.

ಇನ್ನು ಓದಿ: HSRP ನಂಬರ್ ಪ್ಲೇಟ್ ಅಳವಡಿಸುವುದು ಹೇಗೆ…? ವಾಹನ ಮಾಲೀಕರಿಗೆ ಫೆಬ್ರವರಿ 17 ಕೊನೆಯ ದಿನಾಂಕ.

Join Telegram Group Join Now
WhatsApp Group Join Now

ಗೃಹ ಲಕ್ಷ್ಮಿ ಮಾಸಿಕ 2000 ಪಡೆಯಲು NPCI ಕಡ್ಡಾಯ

ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಮಾಸಿಕ 2000 ರೂ ಹಣ ಪಡೆಯಲು ಹೊಸ ನಿಯಮವನ್ನು ರೂಪಿಸಿದೆ. ಗೃಹ ಲಕ್ಷ್ಮಿ ಪಾಲನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಸದ್ಯ ಗೃಹ ಲಕ್ಷ್ಮಿ ಫಲಾನುಭವಿಗಳು E -KYC, ಆಧಾರ್ ಸೀಡಿಂಗ್ ಮಾಡಿಸುವುದರ ಜೊತೆಗೆ ಇನ್ನುಮುಂದೆ NPCI ಕೂಡ ಮಾಡುವುದು ಅಗತ್ಯವಾಗಿದೆ.

ಇನ್ನು ಮುಂದೆ ಗೃಹ ಲಕ್ಷ್ಮಿ ಫಲಾನುಭವಿ ಪ್ರತಿಯೊಬ್ಬರೂ National Payment Corporation of India (NPCI) ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ. NPCI ಆಗದಿದ್ದರೆ 6 ನೇ ಕಂತಿನ ಹಣ ಜಮಾ ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ