ರಾಜ್ಯದಲ್ಲಿ ಮತ್ತೆ ಶುರುವಾಯಿತು ಲೋಡ್ ಶೆಡ್ಡಿಂಗ್ ಆತಂಕ: ಇದಕ್ಕೇನು ಸರ್ಕಾರದಿಂದ ಪರ್ಯಾಯ ಮಾರ್ಗ!

ವಿದ್ಯುತ್ ವಲಯದಲ್ಲಿ ನಡೆಯುತ್ತಿರುವ ಸವಾಲುಗಳ ನಡುವೆ ವಿದ್ಯುತ್ ಕೊರತೆಯ ಬಗ್ಗೆ ಕಳವಳಗಳು ಮರುಕಳಿಸುತ್ತಿರುವುದರಿಂದ ರಾಜ್ಯಾದ್ಯಂತ ನಿವಾಸಿಗಳು ಮತ್ತೊಮ್ಮೆ ಲೋಡ್ ಶೆಡ್ಡಿಂಗ್‌ನ ಸಂಭಾವ್ಯ ವಾಪಸಾತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಲೋಡ್ ಶೆಡ್ಡಿಂಗ್‌ನ ಅಪಾಯವು ನಾಗರಿಕರು, ವ್ಯವಹಾರಗಳು ಮತ್ತು ನೀತಿ ನಿರೂಪಕರಲ್ಲಿ ಸಮಾನವಾಗಿ ಚಿಂತೆಗಳನ್ನು ಹುಟ್ಟುಹಾಕಿದೆ, ಇದು ರಾಜ್ಯದ ಇಂಧನ ಮೂಲಸೌಕರ್ಯದಲ್ಲಿನ ನಿರಂತರ ದೋಷಗಳನ್ನು ಎತ್ತಿ ತೋರಿಸುತ್ತದೆ.

Worry about load shedding started again in the state
Worry about load shedding started again in the state

ಲೋಡ್ ಶೆಡ್ಡಿಂಗ್, ಗ್ರಿಡ್ ಓವರ್‌ಲೋಡ್ ಅಥವಾ ಸಿಸ್ಟಮ್ ವೈಫಲ್ಯಗಳನ್ನು ತಡೆಗಟ್ಟಲು ಉದ್ದೇಶಪೂರ್ವಕವಾಗಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವುದು, ರಾಜ್ಯದಲ್ಲಿ ದೀರ್ಘಕಾಲ ಮರುಕಳಿಸುವ ಸಮಸ್ಯೆಯಾಗಿದೆ, ಇದು ಸಾಕಷ್ಟು ಉತ್ಪಾದನಾ ಸಾಮರ್ಥ್ಯ, ಪ್ರಸರಣ ನಿರ್ಬಂಧಗಳು ಮತ್ತು ವಿದ್ಯುತ್ ಉಪಯುಕ್ತತೆಗಳನ್ನು ಎದುರಿಸುತ್ತಿರುವ ಹಣಕಾಸಿನ ನಿರ್ಬಂಧಗಳಂತಹ ವಿವಿಧ ಅಂಶಗಳಿಂದ ಉಂಟಾಗುತ್ತದೆ.

ಏಫ್ರಿಲ್ ಮೇ ನಲ್ಲಿ ಇರ್ತಿದ್ದ ಬಿಸಿಲ ಧಗೆ ಈ ವರ್ಷದ ಆರಂಭದಲ್ಲಿದೆ.‌ ಕುಂತ್ರು ಬಿಸಿ,ನಿಂತ್ರು ಬಿಸಿ ,ಮಲ್ಕೊಂಡ್ರು ಬಿಸಿ….ನಗರದಲ್ಲಿ ಬಿಸಿಲಿನ ಕಾವು ಹೆಚ್ಚಾಗ್ತಿದೆ … ಸೂರ್ಯನ ಬಿಸಿಯಿಂದ ಎಸ್ಕೇಪ್ ಆಗೋಕೆ ಜನ್ರು ವಿದ್ಯುತ್ ಬಳಕೆಯನ್ನ ಹೆಚ್ಚಾಗಿ ಮಾಡ್ತ ಇದ್ದಾರೆ.

ಈ ಬಾರಿ ಬೇಸಿಗೆ ಆರಂಭದಲ್ಲಿಯೇ ಜನರು ಬಳಸಿದ ವಿದ್ಯುತ್ ಪ್ರಮಾಣ ಹೊಸ ರೆಕಾರ್ಡ್ ಕ್ರಿಯೇಟ್ ಆಗುವಂತೆ ಮಾಡಿದೆ.

ಬೇಸಿಗೆ ಆರಂಭದಲ್ಲಿಯೇ ಸೂರ್ಯ ನೆತ್ತಿ ಸುಡ್ತಿದ್ದಾನೆ. ರಣ ಬಿಸಲಿಗೆ ಸಿಲಿಕಾನ್ ಸಿಟಿ ಮಂದಿ ಸೊರಗಿ ಹೋಗ್ತಿದ್ದಾರೆ‌.‌ ಅದ್ರಲ್ಲೂ ಈ ಬಾರಿ ಸಮ್ಮರ್ ಸ್ಟಾರ್ಟಿಂಗ್ ನಲ್ಲಿ ಧಗೆ ಸ್ವಲ್ಪ ಹೆಚ್ಚಾಗಿ ಕಾಡ್ತಿದೆ..ಬಿರು ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಫ್ಯಾನ್, ಏಸಿ ಕೂಲರ್ ಮೊರೆ ಹೋಗಿದ್ದಾರೆ. ಇದರಿಂದ ವಿದ್ಯುತ್ ಬಳಕೆಯಲ್ಲಿ ಬೆಂಗಳೂರು ಜನ ಹೊಸ ದಾಖಲೆ ಮಾಡಿದ್ದಾರೆ.‌ ಇದು ಲೋಡ್ ಶೆಡಿಂಗ್ ನ ಆತಂಕ ಹುಟ್ಟಿಸಿದೆ.‌

Rameshwaram Cafe Blast: ಬಾಂಬ್ ಸ್ಪೋಟದ ಆರೋಪಿಯ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ. ಪರಮೇಶ್ವರ್

Join Telegram Group Join Now
WhatsApp Group Join Now

ಬಿಸಿಲಿನ ಹಬೆಯಿಂದ ಬೆಂದಿರುವ ಜನರು ಫ್ಯಾನ್, ಏರ್ ಕಂಡಿಷನ್, ಏರ್ ಕೂಲರ್ ಬಳಸುವುದು ಹೆಚ್ಚಾಗಿದೆ…ಇದರಿಂದ ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ 8,128 ಮೆಗಾ ವ್ಯಾಟ್ ವಿದ್ಯುತ್ ಬಳಸಲು ಮೂಲಕ ಸಿಟಿ‌ ಮಂದಿ ಹೊಸ ರೆಕಾರ್ಡ್ ಕ್ರಿಯೆಟ್ ಮಾಡಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ 7496 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. ಆದರೆ ಈ ವರ್ಷ ಫೆಬ್ರರಿಯಲ್ಲಿ 632 ಮೆಗಾ ವ್ಯಾಟ್ ಹೆಚ್ಚಾಗಿದ್ದು 8,128 ಮೆಗಾ ವ್ಯಾಟ್ ಬಳಕೆಯಾಗಿದೆ. ಈ ಮೂಲಕ ಅಲ್ ಟೈಂ ರೆಕಾರ್ಡ್ ಬ್ರೇಕ್ ಆಗಿದೆ. ಎಸಿ, ಫ್ಯಾನ್ ಸಹ ಹೆಚ್ಚಾಗಿ ರನ್ ಆಗಿದ್ದೆ ವಿದ್ಯುತ್ ಹೆಚ್ಚಿನ ಬಳಕೆಗೆ ಕಾರಣವಂತೆ. ಅಲ್ಲದೇ ಹೆಚ್ಚುತ್ತಿರುವ ತಾಪಮಾನದಿಂದ ಜನರು, ಕೈಗಾರಿಗೆ ಹಾಗೂ ಮೋಟಾರ್ ಗೆ ವಿದ್ಯುತ್ ಬಳಸಿದ್ದಾರೆ. ಅಲ್ಲದೇ ಎಸಿ, ಫ್ಯಾನ್ ಸಹ ಹೆಚ್ಚಾಗಿ ರನ್ ಆಗಿವೆ ಅಂತಿದ್ದಾರೆ ಬೆಸ್ಕಾಂ ಅಧಿಕಾರಿಗಳು.ಅಲ್ಲದೆ ಅನಾವಶ್ಯಕವಾಗಿ ವಿದ್ಯುತ್ ಬಳಕೆ ಮಾಡದಂತೆ ಜಾಗ್ರತೆ ವಹಿಸಲು ಬೆಸ್ಕಾಂ ಮನವಿ ಮಾಡಿದೆ

ಗೃಹಜ್ಯೊತಿ ಉಚಿತ ಎಫೆಕ್ಟ್ ಕೂಡ ವಿದ್ಯುತ್ ಅಧಿಕ ಬಳಕೆಯೆ ಕಾರಣವಂತೆ. ಹೇಗೋ ಕರೆಂಟ್ ಫ್ರೀ ಇದೆ. ಹಾಗಾಗಿ ಫ್ಯಾನ್, ಎಸಿ, ಕೂಲರ್ ಜಾಸ್ತಿ ರನ್‌ ಮಾಡಲಾಗ್ತಿದೆ. ಸರಾಸರಿ ಯೂನಿಟ್ ಗಿಂತಲೂ ಹೆಚ್ಚಿನ ಬಳಕೆಯಾದ್ರೂ, ನೂರು-ಇನ್ನೂರು ರೂಪಾಯಿ ಬಿಲ್ ಬಂದ್ರು ತೊಂದರೆ ಇಲ್ಲ‌ ಎಂಬ ಲೆಕ್ಕಾಚಾರದಲ್ಲಿದ್ದಾರೆ ಜನರು. ಮಾರ್ಚ್ ತಿಂಗಳ ಗರಿಷ್ಠ ಬೇಡಿಕೆಯು 8,300 MW ಎಂದು ಅಂದಾಜಿಸಲಾಗಿದೆ. ಮಾರ್ಚ್ 2023ರಲ್ಲಿ 7740 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಆಗಿತ್ತು.‌ ಈ ಬಾರಿ ಏಪ್ರಿಲ್ ಮತ್ತು ಮೇನಲ್ಲಿ ಮತ್ತಷ್ಟು ವಿದ್ಯುತ್ ಬಳಕೆ ಏರಿಕೆಯಾಗಬಹುದು ಅಂತಿದ್ದಾರೆ ಬೆಸ್ಕಾಂ ಅಧಿಕಾರಿಗಳು.‌ ಇದರ ನಡುವೆ ಜನರಿಗೆ ಬೇಸಿಗೆ ಆರಂಭದಲ್ಲಿ ಹೆಚ್ಚಿನ‌ ವಿದ್ಯುತ್ ಬಳಕೆ ಮಾಡಿದ್ರಿಂದ ಬೇಸಿಗೆ ಮಧ್ಯೆಭಾಗದಲ್ಲಿ ಲೋಡ್ ಶೆಡ್ಡಿಂಗ್ ಆಗುವ ಆತಂಕ ಜನರನ್ನ ಕಾಡ್ತಿದೆ.

ಒಟ್ನಲ್ಲಿ ಬೇಸಿಗೆ ಆರಂಭದಲ್ಲಿ‌ ನೀರಿನ ಸಮಸ್ಯೆ ಜೊತೆ ಸೂರ್ಯನ ತಾಪಮಾನ ಕಿರಿಕಿರಿ ಉಂಟು ಮಾಡುತ್ತಿರೋದಂತು ಸುಳ್ಳಲ್ಲ…ಬಿಸಿಲು ಹೆಚ್ಚಾಗಿರೋ ಕಾರಣ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಅತಿಮುಖ್ಯವಾಗಿದೆ..

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ