ಚಂದ್ರನ ಬೆನ್ನಲ್ಲೇ ಸೂರ್ಯಶಿಕಾರಿಗೆ ಇಸ್ರೋ ಸಜ್ಜು; ಸೆ.2ಕ್ಕೆ ಆದಿತ್ಯ L1 ಉಡಾವಣೆ, ಶನಿವಾರ ಗಗನಕ್ಕೆ ಚಿಮ್ಮಲಿದೆ ರಾಕೆಟ್!.

Hello ಸ್ನೇಹಿತರೇ,  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಯಶಸ್ವಿಯಾಗಿ ಚಂದ್ರಯಾನ 3 ಮಿಷನ್‌ ಕೈಗೊಂಡಿದೆ. ಅದರಲ್ಲೂ, ಜಗತ್ತಿನಲ್ಲೇ ಮೊದಲ ಬಾರಿಗೆ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲಾಗಿದ್ದು, ವಿಶ್ವದ ವಿಜ್ಞಾನಿಗಳು ಇಸ್ರೋ ಸಾಧನೆಯನ್ನು ಕೊಂಡಾಡಿವೆ. ಚಂದ್ರಯಾನ 3 (Chandrayaan 3) ಯಶಸ್ಸಿನ ಬೆನ್ನಲ್ಲೇ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಗೆ ಸಜ್ಜಾಗಿದೆ. ಹೌದು, ಸೂರ್ಯನ ಅಧ್ಯಯನಕ್ಕಾಗಿ ಕೈಗೊಳ್ಳುತ್ತಿರುವ ಆದಿತ್ಯ ಎಲ್‌ 1 ಮಿಷನ್‌ಅನ್ನು (Aditya L1 Mission) ಸೆಪ್ಟೆಂಬರ್‌ 2ರಂದು ಉಡಾವಣೆ ಮಾಡಲು ಇಸ್ರೋ ತೀರ್ಮಾನಿಸಿದೆ.

Aditya l1 Mission In Kannada
Aditya l1 Mission In Kannada

aditya l1 mission information in kannada

ಸೂರ್ಯಯಾನದ ಕುರಿತು ಇಸ್ರೋ ಮಾಹಿತಿ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಮಿಷನ್‌ ಇದೆ. ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಇದನ್ನು ಹೊತ್ತುಕೊಂಡು ಸಾಗಲಿದೆ. ಸೆಪ್ಟೆಂಬರ್‌ 2ರಂದು ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.

ಆದಿತ್ಯ L1 ಮಿಷನ್‌ ಉದ್ದೇಶ ಏನು?

ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್‌ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್‌ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಅಂದರೆ, ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್‌ ಕಾರ್ಯನಿರ್ವಹಿಸಲಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್‌ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.

ಆದಿತ್ಯ L1 ಲ್ಯಾಗ್ರೆಂಜ್‌ ಪಾಯಿಂಟ್‌ ತಲುಪಲು 4 ತಿಂಗಳು ಬೇಕು

ಆದಿತ್ಯ ಎಲ್‌ 1 ಮಿಷನ್‌ ಕುರಿತು ಇಸ್ರೋ ವಿಜ್ಞಾನಿ ಇಸ್ರೋ ವಿಜ್ಞಾನಿ ಎಚ್.ಎನ್ ಸುರೇಶ್ ಕುಮಾರ್ ಅವರು ಹೆಚ್ಚಿನ ಮಾಹಿತಿ ನೀಡಿದ್ದು, ಮಿಷನ್‌ ಸೂರ್ಯನ ಲ್ಯಾಂಗ್ರೆಂಜ್‌ ಪಾಯಿಂಟ್‌ (Lagrange Point) ತಲುಪಲು ನಾಲ್ಕು ತಿಂಗಳು ಬೇಕು ಎಂದು ತಿಳಿಸಿದ್ದಾರೆ. ಆನೇಕಲ್ ತಾಲೂಕಿನ ಜಿಗಣಿಯ ಆಜ್ರೀ ಇಂಜಿನಿಯರಿಂಗ್ ಸಂಸ್ಥೆಗೆ ಭೇಟಿ ನೀಡಿದ ವೇಳೆ ಅವರು ಈ ಕುರಿತು ಮಾಹಿತಿ ನೀಡಿದರು.

ಮಂಗಳಯಾನಕ್ಕೂ ಸಿದ್ಧತೆ

“ಚಂದ್ರಯಾನ 3, ಆದಿತ್ಯ ಎಲ್‌ 1 ಮಿಷನ್‌ ಜತೆಗೆ ಮಂಗಳಯಾನಕ್ಕೂ ಸಿದ್ಧತೆ ನಡೆಯುತ್ತಿದೆ. ಅದರ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಎಲ್ಲ ಮಾಹಿತಿ ನೀಡಲಾಗುತ್ತಿದೆ. ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಕುರಿತು ನಮಗೆ ಗೊತ್ತಿರದ ಅಂಶಗಳ ಬಗ್ಗೆ ಅಧ್ಯಯನ ಮಾಡಲಿದೆ. ಇದು ಸೂರ್ಯನ ಕೊರೋನಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಹಾಗೆಯೇ, ಸೂರ್ಯನ ಸುತ್ತ ಎಷ್ಟು ಲೇಯರ್ ಇದೆ ಎಂಬ ಮಾಹಿತಿಯನ್ನು ಕಲೆಹಾಗುತ್ತದೆ” ಎಂದು ವಿವರಿಸಿದರು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ