Hello ಸ್ನೇಹಿತರೇ, ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಹಾಗೂ ಸುದೀಪ್ (Darshan And Sudeep) ಅವರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಅದರೆ ಇದ್ದಕ್ಕಿದಂತೆ ದರ್ಶನ್ ಅವರು “ಇನ್ನುಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ” ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವೆಯೂ ಮುನಿಸು ಬೆಳೆಯುತ್ತಲೇ ಹೋಯಿತು.

ದರ್ಶನ್ ಹಾಗೂ ಸುದೀಪ್ ಇಬ್ಬರು ಕೂಡ ಒಬ್ಬರನೊಬ್ಬರು ಕಂಡರೆ ಆಗದಷ್ಟು ದೂರ ಹೋಗಿದ್ದರು. ದರ್ಶನ್ ಅಭಿಮಾನಿಗಳು ಮತ್ತು ಸುದೀಪ್ ಅವರ ಅಭಿಮಾನಿಗಳು ಇವರಿಬ್ಬರು ಒಂದಾಗಲಿ ಎಂದು ಅಸೆ ಪಡುತ್ತಿದ್ದರು. ಎಷ್ಟೋ ಬಾರಿ ತಮ್ಮ ಆಸೆಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಚ್ಚಿಕೊಂಡಿದ್ದರು. ಅವಾಗ ಕೂಡ ದರ್ಶನ್ ಮತ್ತೆ ಸುದೀಪ್ ಒಂದಾಗುವ ಬಗ್ಗೆ ಮಾತನಾಡಿರಲಿಲ್ಲ. ಇದೀಗ ದರ್ಶನ್ ಹಾಗೂ ಸುದೀಪ್ ಅವರು ಒಂದಾಗುವ ಪ್ರಸಂಗ ಬಂದಿದೆ.
ನಾನು ಮತ್ತೆ ಸುದೀಪ್ ಗೆಳೆಯರಲ್ಲ ಎಂದ ದರ್ಶನ್
2017 ರಲ್ಲಿ ಅಂದರೆ ಆರು ವರ್ಷಗಳ ಹಿಂದೆ ಸುದೀಪ್ ಹಾಗೂ ದರ್ಶನ್ ಮದ್ಯೆ ಬಿನ್ನಾಭಿಪ್ರಾಯ ಏರ್ಪಟ್ಟಿತ್ತು. ಆಗ ದರ್ಶನ್ ಅವರು “ಇನ್ಮುಂದೆ ನಾನು ಹಾಗೂ ಸುದೀಪ್ ಸ್ನೇಹಿತರಲ್ಲ ಎಂದು ಟ್ವೀಟ್ ಮಾಡಿದ್ದರು. ನಾವಿಬ್ಬರು ಒಂದೇ ಚಿತ್ರ ರಂಗದಲ್ಲಿ ಕೆಲಸ ಮಾಡುವ ಕಲಾವಿದರಷ್ಟೇ, ಬೇರೆ ಯಾವ ಊಹಾ ಪೋಹಗಳು ಬೇಡ ಎಂದು ದರ್ಶನ್ ಅವರು ಟ್ವೀಟ್ ಮಾಡಿದ್ದರು.
ಅಲ್ಲಿಂದ ಇಲ್ಲಿತನಕ ದರ್ಶನ್ ಹಾಗೂ ಸುದೀಪ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇಲ್ಲ. ಆದರೆ ಈಗ ಇಬ್ಬರು ಕೂಡ ಒಂದೇ ವೇದಿಕೆಯಲ್ಲಿದ್ದಾರೆ. ಮತ್ತೆ ಇವರು ಒಂದಾಗಬಹುದು ಎನ್ನುವ ಖುಷಿಯಲ್ಲಿ ಇವರಿಬ್ಬರ ಅಭಿಮಾನಿಗಳು ಇದ್ದಾರೆ.
ಸುಮಲತಾ ಬರ್ತ್ಡೇ ಪಾರ್ಟಿ ಅಲ್ಲಿ ಮಹಾ ಸಂಗಮ ಸುದೀಪ್-ದರ್ಶನ್
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಆಗಸ್ಟ್ 27 ಅಂದರೆ ಇಂದು 60 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತಿದ್ದಾರೆ. ಪಾರ್ಟಿ ಗೆ ಆತ್ಮೀಯರಿಗೆ ಹಾಗೂ ಗಣ್ಯರಿಗೆ ಐಷಾರಾಮಿ ಹೋಟೆಲ್ ನಲ್ಲಿ ಪಾರ್ಟಿ ಅನ್ನು ಹಮ್ಮಿಕೊಂಡಿದ್ದಾರೆ.
ಈ ಪಾರ್ಟಿ ಅಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರಿಗೂ ಕೂಡ ಆಹ್ವಾನ ಮಾಡಿದ್ದಾರೆ. ಇದೀಗ ಸುಮಲತಾ ಅವರ ಬರ್ತ್ಡೇ ಪಾರ್ಟಿ ಅಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರು ಕೂಡ ಸೇರಿದ್ದಾರೆ. ದೂರ ಆದಾಗಿನಿಂದ ಇವರಿಬ್ಬರು ಒಂದೇ ವೇದಿಕೆ ಹಂಚಿಕೊಂಡಿದ್ದು ಇದೆ ಮೊದಲ ಬಾರಿಗೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರನ್ನು ಮತ್ತೆ ಒಂದು ಮಾಡಬೇಕೆಂದು ಅದೆಷ್ಟೋ ಮಂದಿ ಪ್ರಯತ್ನ ಪಟ್ಟಿದ್ದಾರೆ ಆದರೆ ಅವರನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಈಗ ಸುಮಲತಾ ಅವರು ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇಬ್ಬರ ಪ್ರಯತ್ನದಿಂದ ಕಿಚ್ಚ ಸುದೀಪ್ ಹಾಗೂ ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ದ್ವೇಷ ಮರೆತು ಒಂದಾಗ್ತಾರಾ ದರ್ಶನ್ ಮತ್ತೆ ಸುದೀಪ್
ದೂರ ಆದಾಗಿನಿಂದ ದರ್ಶನ್ ಮತ್ತೆ ಸುದೀಪ್ ಅವರು ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ದರ್ಶನ್ ಹಾಗೂ ಸುದೀಪ್ ಅವರು ಮುನಿಸು ಮರೆತು ಒಂದಾಗುವ ಎಲ್ಲ ಸಾಧ್ಯತೆಗಳು ಇವೆ. ದರ್ಶನ್ ಮತ್ತೆ ಸುದೀಪ್ ಅವರು ದ್ವೇಷ ಮರೆತು ಒಂದಾಗ್ತಾರಾ ಎನ್ನುದನ್ನು ಕಾದುನೋಡಬೇಕಿದೆ.