Agriculture Loan: ರೈತರೇ ಬ್ಯಾಂಕ್ ಸಾಲದ EMI ಕಟ್ಟಲು ಕಷ್ಟವಾಗುತ್ತಿದೆಯಾ? ಸಾಲ ಪರಿವರ್ತಿಸಲು ಸರ್ಕಾರದ ಆದೇಶ!!

Agriculture Loan Extensions

Agriculture Loan Extensions: ಗ್ರಾಮೀಣ ಆರ್ಥಿಕತೆಯ ಹೃದಯಭಾಗದಲ್ಲಿ, ಹೊಲಗಳು ಋತುಗಳ ಲಯದೊಂದಿಗೆ ಪ್ರತಿಧ್ವನಿಸುತ್ತವೆ, ರೈತರು ಅಸಂಖ್ಯಾತ ಸವಾಲುಗಳನ್ನು ಎದುರಿಸುತ್ತಾರೆ, ಅವುಗಳಿಗೆ ಆಗಾಗ್ಗೆ ನವೀನ ಪರಿಹಾರಗಳು ಬೇಕಾಗುತ್ತವೆ. ಇತ್ತೀಚಿನ ದಿನಗಳಲ್ಲಿ, ಕೃಷಿ ಸಾಲಗಳ ವಿಸ್ತರಣೆಯು ರೈತರಿಗೆ ಜೀವನಾಡಿಯಾಗಿ ಹೊರಹೊಮ್ಮಿದೆ, ಅನಿರೀಕ್ಷಿತ ಹವಾಮಾನ, ಮಾರುಕಟ್ಟೆ ಏರಿಳಿತಗಳು ಮತ್ತು ಜಾಗತಿಕ ಅನಿಶ್ಚಿತತೆಗಳ ಮೂಲಕ ಸಾಗಲು ಅಗತ್ಯವಾದ ಬೆಂಬಲವನ್ನು ಒದಗಿಸುತ್ತದೆ.

Agriculture Loan Extensions
Agriculture Loan Extensions

ರೈತರು ತಮ್ಮ ಕೃಷಿ ಚಟುವಟಿಕೆಗಳ ಉದ್ದೇಶಕ್ಕಾಗಿ ಬ್ಯಾಂಕ್ ನಿಂದ ಸಾಲ ಪಡೆಯುತ್ತಾರೆ. ಒಂದು ಭೂಮಿಯಲ್ಲಿ ಬೆಳೆ ಬೆಳೆಯಬೇಕೆಂದರೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇರುತ್ತದೆ ಹಾಗಾಗಿ ರೈತರು ಭೂಮಿಯನ್ನು ನಂಬಿ ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆದಿರುತ್ತಾರೆ.

ಅಧಿಕ ಮಳೆ, ಬರಗಾಲ ಅಥವಾ ಇನ್ನಿತರ ಕಾರಣಗಳಿಂದ ಬೆಳೆ ನಾಶ ಆದರೆ ಅವರಿಗೆ ಸಾಲವನ್ನು ಮರು ಪಾವತಿ ಮಾಡಲು ಬಹಳ ಕಷ್ಟ ಆಗುತ್ತದೆ. ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಬ್ಯಾಂಕ್ ಗೆ ಕಟ್ಟಲು ಅಸಾಧ್ಯ ವಾಗಿ ರೈತರು ಬಹಳ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಇಂತಹ ವಿಚಾರಗಳನ್ನು ಗಮನಿಸಿದ ಸರಕಾರ ಬ್ಯಾಂಕ್ ಗೆ ಒಂದು ಸೂಚನೆ ಯನ್ನು ನೀಡಿದೆ.

ಇನ್ನು ಓದಿ : ಮಧ್ಯಮ ವರ್ಗಕ್ಕಾಗಿ ಬಂತು ಸ್ವಿಫ್ಟ್ ಹೈಬ್ರಿಡ್ ಕಾರ್, ಕಡಿಮೆ ಬೆಲೆ 40 Km ಮೈಲೇಜ್

ಸಾಲ ಮರುಪಾವತಿ ಅವಧಿ ವಿಸ್ತರಣೆ

ರೈತರು ಸಾಲ ಮಾಡದೇ ಕೃಷಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ಅವರ ಸಾಲ ಮರುಪಾವತಿ ಬಗ್ಗೆ ಹೆಚ್ಚಿನ ಗಮನಹರಿಸಿದ ಸರಕಾರ ಒಂದು ನಿರ್ದಿಷ್ಟ ಕ್ರಮವನ್ನು ಜಾರಿಗೆ ತರಲಿದೆ ಎನ್ನಲಾಗಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರೈತರ ಸಾಲ ಮರುಪಾವತಿ ಅವಧಿ ಪರಿವರ್ತಿಸಲು ಅಥವಾ ವಿಸ್ತರಣೆ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಗೆ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Join Telegram Group Join Now
WhatsApp Group Join Now

ರೈತರ ಬರ ಪರಿಹಾರ ಯೋಜನೆಗೆ ಚಾಲನೆ

ರೈತರಿಗೆ ಚಳ್ಳಕೆರೆ ತಾಲೂಕಿನಲ್ಲಿ ಬರ ಪರಿಹಾರದ ಮೊದಲ ಕಂತು ₹2,000 ಡಿಬಿಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ 45,45,749 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಉಚಿತವಾಗಿ 2 ಜೊತೆ ಸಮವಸ್ತ್ರ ಮತ್ತು ಶೂ-ಸಾಕ್ಸ್‌ಗಳನ್ನು ವಿತರಿಸಲಾಗಿದೆ ಹಾಗು 55,43,828 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಉಚಿತವಾಗಿ 4,47,17,051 ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದ್ದಾರೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ