Price Of Milk: ಹೊಸ ವರ್ಷದ ಆರಂಭದಲ್ಲಿ ಮತ್ತೆ ಜನರಿಗೆ ಬೆಲೆ ಏರಿಕೆಯ ಬಿಸಿ!!

Price Of Milk

Price Of Milk : ಪ್ರಮುಖ ಡೈರಿ ಉತ್ಪನ್ನಗಳಾದ ಹಾಲು ಮತ್ತು ಮೊಸರು ಬೆಲೆಗಳು ಅಭೂತಪೂರ್ವ ಏರಿಕೆಯನ್ನು ಅನುಭವಿಸಿವೆ, ಇದು ಗ್ರಾಹಕರನ್ನು ದಿಗ್ಭ್ರಮೆಗೊಳಿಸಿತು ಮತ್ತು ಆಕ್ರೋಶಗೊಂಡಿತು. ನಡೆಯುತ್ತಿರುವ ಜಾಗತಿಕ ಬಿಕ್ಕಟ್ಟಿನ ಆರ್ಥಿಕ ಕುಸಿತದೊಂದಿಗೆ ಕುಟುಂಬಗಳು ಹಿಡಿತ ಸಾಧಿಸುತ್ತಿರುವಾಗ, ಈ ಅಗತ್ಯ ವಸ್ತುಗಳ ಹಠಾತ್ ಏರಿಕೆಯು ವಿವಾದವನ್ನು ಹುಟ್ಟುಹಾಕಿದೆ, ಅದು ಈಗ ಸರ್ಕಾರವನ್ನು ಹಾಟ್ ಸೀಟ್‌ನಲ್ಲಿ ಇರಿಸಿದೆ.

Increase in price of milk and yogurt
Increase in price of milk and yogurt

ರಾಜ್ಯದಲ್ಲಿ ಈಗಾಗಲೇ ಸ್ವಲ್ಪ ದಿನಗಳ ಹಿಂದೆ ಹಾಲು ಹಾಗು ಮೊಸರಿನ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಹೊಸ ವರ್ಷದಿಂದ ಹಾಲು ಹಾಗು ಮೊಸರಿನ ದರ ಏರಿಕೆ ಆಗಲಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗ ಎರಡನೇ ಬಾರಿಗೆ ಹಾಲು ಹಾಗು ಮೊಸರಿನ ಬೆಲೆಯಲ್ಲಿ ಏರಿಕೆ ಆಗುತ್ತಿರುವುದನ್ನು ಕಾಣಬಹುದು. ಹಾಲಿನ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದು, ಹಾಲು ಒಕ್ಕೂಟಗಳ ಮನವಿಯ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹಾಲು ಹಾಗೂ ಮೊಸರಿನ ದರದಲ್ಲಿ ಏರಿಕೆ ಆಗಲಿದೆ.

ಹಾಲು ಹಾಗು ಮೊಸರಿನ ಬೆಲೆ ಏರಿಕೆ

ಹಾಲು ಹಾಗು ಮೊಸರಿನ ಬೆಲೆ ಏರಿಕೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸುಳಿವು ನೀಡಲಾಗಿದ್ದು . ಹಾಲಿನ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲನೆಯಲ್ಲಿದ್ದೇವೆ ಎಂದು ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್, ಶಾಸಕ ನಂಜೇಗೌಡ ಹೇಳಿಕೆ ನೀಡಿದ್ದಾರೆ.

ಇನ್ನು ಓದಿ: ರಾಜ್ಯದ ಮಹಿಳೆಯರಿಗೆ ಪ್ರೇರಣಾ ಯೋಜನೆಯಲ್ಲಿ ಸಿಗಲಿದೆ ರೂ.2,50,000 ರೂ.ವರೆಗೆ ಸಹಾಯಧನ.

Join Telegram Group Join Now
WhatsApp Group Join Now

ರಾಜ್ಯದ 14 ಹಾಲು ಒಕ್ಕೂಟಗಳು ಹಾಲಿನ ದರ ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದ್ರೆ ಸರ್ಕಾರ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಅದೂ ಕೂಡ ಆ ಮೂರು ರೂಪಾಯಿ ನೇರವಾಗಿ ರೈತರಿಗೆ ನೀಡಲಾಗಿತ್ತು. ಹೀಗಾಗಿ ನಷ್ಟದಲ್ಲಿರುವುದರಿಂದ ದರ ಏರಿಕೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ.

ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ

ಹಲವು ಖಾಸಗಿ ಬ್ರಾಂಡ್ ಗಳಲ್ಲಿ ನಂದಿನಿ ಹಾಲು ಉತ್ಪದನಾ ಬ್ರಾಂಡ್ ಕೂಡ ಒಂದಾಗಿದೆ. ಇನ್ನಿತರ ಖಾಸಗಿ ಬ್ರಾಂಡ್ ಗೆ ಹೋಲಿಸಿದರೆ ನಂದಿನಿ ಹಾಲಿನ ದರ 10-12 ರೂಪಾಯಿ ಕಡಿಮೆ ಇದೆ. ಇದರಿಂದಾಗಿ ಹಾಲು ಉತ್ಪಾದನೆ ಮಾಡುವವರು ಹಾಗೂ ಒಕ್ಕೂಟಗಳು ನಷ್ಟದಲ್ಲಿವೆ. ಇದನ್ನು ಮನಗಂಡು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ದರ ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸದನಕ್ಕೆ ಉತ್ತರ ಕೊಟ್ಟಿದ್ದಾರೆ.

ಹೀಗಾಗಿ ಹೊಸ ವರ್ಷದಲ್ಲಿ ನಂದಿನಿ ಉತ್ಪನ್ನಗಳ ದರ ಏರಿಕೆಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಹೊಸ ವರ್ಷದಲ್ಲಿ ನಂದಿನಿ ಹಾಲಿನ ದರ ಎಷ್ಟು ಏರಿಕೆ ಆಗುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಇನ್ನೂ ಕೂಡ ಲಭಿಸಿಲ್ಲ. ಸದ್ಯ ಹಾಲಿನ ದರ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ ಎಂದು ಹೇಳಬಹುದು. ಮೂರೂ ತಿಂಗಳ ಹಿಂದೆ ಹಾಲು ಮತ್ತು ಮೊಸರಿನ ದರ ಏರಿಕೆ ಆಗಿದ್ದು ಹೊಸ ವರ್ಷದಲ್ಲಿ ಮತ್ತೆ ದರ ಏರಿಕೆ ಆಗಲಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ