Hello ಸ್ನೇಹಿತರೇ , ಸಾಮಾನ್ಯವಾಗಿ ಎಲ್ಲರು ಬ್ಯಾಂಕ್ ಸಿಬ್ಬಂದಿಯ (Bank Employees) ಕೆಲಸ ಬಹಳ ಸುಲಭ ಎಂದು ಪರಿಗಣಿಸುತ್ತಾರೆ. ಬ್ಯಾಂಕ್ ಸಿಬ್ಬಂದಿಗಳಿಗೆ ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೆ ಯಾವುದೇ ವಿಶೇಷ ಹಬ್ಬ ಬಂದರೆ ಬ್ಯಾಂಕ್ ಸಿಬ್ಬಂದಿಗಳಿಗೆ ಅಂದು ರಜೆ ಇರುತ್ತದೆ. ತಿಂಗಳಲ್ಲಿ 30 ದಿನ ಇದ್ದರು ಕೂಡಾ ಬ್ಯಾಂಕ್ ಸಿಬ್ಬದಿಂದಗಳಿಗೆ ತಿಂಗಳಲ್ಲಿ 10 ರಿಂದ 15 ರಜೆಗಳು ಇದ್ದೆ ಇರುತ್ತದೆ. ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವಾಗ ಗ್ರಾಹಕರಿಗೆ ಯಾವುದೇ ತೊಂದರೆ ಕೂಡ ಆಗಬಾರದು. ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರು ಕೆಲ ಹಕ್ಕನ್ನು ಹೊಂದಿರುತ್ತಾರೆ.

ಬ್ಯಾಂಕಿಂಗ್ ಗ್ರಾಹಕರ ಹಕ್ಕು
ಇನ್ನು ಜನರಿಗೆ ಬ್ಯಾಂಕುಗಳಲ್ಲಿ ನಾನಾ ರೀತಿಯಾ ವ್ಯವಹಾರ ಮಾಡಲು ಇರುತ್ತದೆ. ಇತ್ತೀಚಿಗೆ ಆನ್ಲೈನ್ ವಹಿವಾಟುಗಳು ಬಂದಿದ್ದರು ಕೂಡ ದೊಡ್ಡ ರೀತಿಯ ಹಣದ ವರ್ಗಾವಣೆ, ಅಥವಾ ಚೆಕ್ ವ್ಯವಹಾರಗಳನ್ನು ಬ್ಯಾಂಕ್ ನಲ್ಲಿಯೇ ಮಾಡಬೇಕಾಗುತ್ತದೆ. ಬ್ಯಾಂಕ್ ನಲ್ಲಿ ಯಾವುದೇ ಕೆಲಸವಿದ್ದರೂ ಕೂಡ ಕೆಲವೊಮ್ಮೆ ದಿನಪೂರ್ತಿ ಬ್ಯಾಂಕ್ ನಲ್ಲಿಯೇ ಇರಬೇಕಾದ ಸಂದರ್ಭ ಕೂಡ ಬರುತ್ತದೆ.
ಹೆಚ್ಚಿನ ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿದಾಗ ಎಲ್ಲರ ವ್ಯವಹಾರವನ್ನು ಪೂರ್ಣಗೊಳಿಸಲು ಕಷ್ಟವಾಗುತ್ತದೆ. ಇನ್ನು ಕೆಲವೊಮ್ಮೆ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರ ಜೊತೆ ಅನುಚಿತವಾಗಿ ವರ್ತಿಸುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇದೀಗ ಬ್ಯಾಂಕ್ ಸಿಬ್ಬಂಧಿಗಳು ಗ್ರಾಹಕರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವ ಬಗ್ಗೆ ಸಾಕಷ್ಟು ನಿಯಮಗಳಿವೆ. ಬ್ಯಾಂಕ್ ಸಿಬ್ಬಂದಿಗಳು ಅನುಚಿತವಾಗಿ ಗ್ರಾಹಕರ ಜೊತೆ ವರ್ತಿಸಿದರೆ ಗ್ರಾಹಕರು ಪ್ರಶ್ನಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಬ್ಯಾಂಕ್ ನೌಕರರಿಗೆ ಸಿಬ್ಬಂದಿಗಳನ್ನು ಪ್ರಶ್ನಿಸುವ ಅಧಿಕಾರ ಗ್ರಾಹಕರಿಗಿದೆ
RBI ನಿಯಮದ ಪ್ರಕಾರ, ಎಲ್ಲ ಬ್ಯಾಂಕ್ ಸಿಬ್ಬಂದಿಗಳಿಗೆ ಒಟ್ಟಿಗೆ ಊಟದ ವಿರಾಮವನ್ನು ನೀಡುವಂತಿಲ್ಲ. ಕೆಲವರು ಮಾತ್ರ ಊಟಕ್ಕೆ ಹೋದರೆ ಇನ್ನುಳಿದವರು ಗ್ರಾಹಕರ ಸಮಸ್ಯೆಯನ್ನು ನಿವಾರಿಸಬೇಕಾಗುತ್ತದೆ. ಬ್ಯಾಂಕ್ ಸಿಬ್ಬಂದಿ ನಿಮಗೆ ಊಟದ ನೆಪ ಹೆಲಿ ನಿಮ್ಮನ್ನು ಕಾಯಿಸಿದರೆ ನೀವು ಆ ಸಿಬ್ಬಂದಿ ವಿರುದ್ಧ ದೂರನ್ನು ನೀಡಬಹುದು.
ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಬಹುದು
ಇನ್ನು ಬ್ಯಾಂಕ್ ಮ್ಯಾನೇಜರ್ ನಿಮ್ಮ ಬಳಿ ಸರಿಯಾಗಿ ನಡೆದುಕೊಳ್ಳದಿದ್ದರೆ ಅಧಿಕಾರಿಗೆ ಅದರ ಬಗ್ಗೆ ದೂರು ನೀಡಬಹುದು. ಹಾಗೆಯೆ ಭಾರತೀಯ ರಿಸರ್ವ್ ಬ್ಯಾಂಕ್ ಲೋಕಪಾಲ್ ಮತ್ತು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಆಯ್ಕೆಯೂ ಗ್ರಾಹಕರಿಗೆ ಇರುತ್ತದೆ. CrPC@rbi.org.in ಗೆ ಇಮೇಲ್ ಮಾಡುವ ಮೂಲಕ ನೀವು cms.rbi.org.in ನಲ್ಲಿ ದೂರು ನೀಡಬಹುದು . ನಿಮ್ಮ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.