ಅಪರೂಪದ ಸೂಪರ್ ಬ್ಲೂ ಮೂನ್ ವೀಕ್ಷಿಸಿ! ಮಿಸ್ ಮಾಡಿಕೊಂಡರೆ ಇಂಥದೇ ವಿದ್ಯಮಾನ ನೋಡಬೇಕಾದರೆ ನೀವು 2037ರ ವರೆಗೆ ಕಾಯಬೇಕು!

ಚಂದ್ರಯಾನದ (Chandrayaan 3) ಯಶಸ್ಸನ್ನು ತೆರೆಯ ಮೇಲೆ ನೋಡಿದ್ದೀರಿ. ಇದೀಗ ವಿಶೇಷ ಚಂದ್ರನನ್ನೇ ಪ್ರತ್ಯಕ್ಷವಾಗಿ ನೋಡಿ. ಆಗಸ್ಟ್ 30ರಂದು ರಾತ್ರಿ ಆಕಾಶ ಅಪರೂಪದ “ನೀಲಿ ಸೂಪರ್‌ಮೂನ್” (Blue Super Moon) ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ದಶಕಕ್ಕೊಮ್ಮೆ ಮಾತ್ರ ಸಂಭವಿಸುವ ಈ ಅಪರೂಪದ ವಿದ್ಯಮಾನವನ್ನು ನೋಡಲು ಮರೆಯಬೇಡಿ. ಇನ್ನೊಂದು ಇಂಥದೇ ವಿದ್ಯಮಾನ ನೋಡಬೇಕಾದರೆ ನೀವು 2037ರ ವರೆಗೆ ಕಾಯಬೇಕು!

blue moon visible dates and time in india

blue moon information in kannada

ಬುಧವಾರ (ಆ.30) ಸಂಭವಿಸಲಿರುವ ನೀಲಿ ಸೂಪರ್‌ಮೂನ್‌ ವಿದ್ಯಮಾನ ಇನ್ನೊಂದು ದಶಕ ಮತ್ತೆ ಕಾಣಿಸಲಾರದು. ʼನೀಲಿ ಚಂದ್ರʼ ಎನ್ನಲಾಗಿದ್ದರೂ ಈ ಸಂದರ್ಭದಲ್ಲಿ ಚಂದ್ರ ಅಕ್ಷರಶಃ ನೀಲಿಯಾಗಿರುವುದಿಲ್ಲ. ವಾಸ್ತವವಾಗಿ ಈ ಸಂದರ್ಭದಲ್ಲಿ ಚಂದ್ರನು ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತಾನೆ. ನಾಲ್ಕು ಭಾಗಗಳ ಈ ಸೂಪರ್‌ಮೂನ್ ಸರಣಿಯು ಈ ರಾತ್ರಿ ಅಂತ್ಯಗೊಳ್ಳಲಿದೆ. ಆದರೆ ಈ ಸೂಪರ್ ಬ್ಲೂ ಮೂನ್ ಈ ವರ್ಷ ಇದುವರೆಗೆ ಕಾಣಿಸಿಕೊಂಡ ಮೂರನೇ ಅತಿದೊಡ್ಡ ಚಂದ್ರ. ಈ ಖಗೋಳ ವಿದ್ಯಮಾನದ ಸಂಪೂರ್ಣ ವಿವರ ಇಲ್ಲಿದೆ.

ಬ್ಲೂ ಮೂನ್‌ ಎಂದರೇನು?

ʼಬ್ಲೂ ಮೂನ್ʼ ಇದು ಒಂದೇ ತಿಂಗಳಲ್ಲಿ ಕಾಣಿಸಿಕೊಳ್ಳುವ ಎರಡನೇ ಹುಣ್ಣಿಮೆ. ಹುಣ್ಣಿಮೆಗಳು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಸಂಭವಿಸುತ್ತವೆ. ಆದರೆ ನೀಲಿ ಚಂದ್ರನಿದ್ದಾಗ ಅದು ಎರಡು ಬಾರಿ ಸಂಭವಿಸುತ್ತದೆ. ನೀಲಿ ಚಂದ್ರನಲ್ಲಿ ಎರಡು ವಿಧ. ನಾಸಾದ ಪ್ರಕಾರ, ನಾಲ್ಕು ಹುಣ್ಣಿಮೆಗಳನ್ನು ಹೊಂದಿರುವ ಒಂದು ಋತುವಿನಲ್ಲಿ ಮೂರನೇ ಹುಣ್ಣಿಮೆಯೇ ನೀಲಿ ಚಂದ್ರ. ಇದು ನೀಲಿ ಚಂದ್ರನ ಸಾಂಪ್ರದಾಯಿಕ ವ್ಯಾಖ್ಯಾನ. ಮಾಸಿಕ ಬ್ಲೂ ಮೂನ್‌ ಎಂದರೆ ಒಂದೇ ಕ್ಯಾಲೆಂಡರ್ ತಿಂಗಳೊಳಗೆ ಸಂಭವಿಸುವ ಎರಡನೇ ಹುಣ್ಣಿಮೆ.

ಚಂದ್ರನ ಹುಣ್ಣಿಮೆ- ಅಮವಾಸ್ಯೆಯ ಹಂತಗಳು ಸರಾಸರಿ 29.5 ದಿನಗಳ ಅಂತರದಲ್ಲಿ ಇರುತ್ತವೆ. ಹೀಗಾಗಿ 12 ಚಂದ್ರನ ಚಕ್ರಗಳು ವರ್ಷದ 354 ದಿನಗಳಲ್ಲಿ ಪೂರ್ಣಗೊಳ್ಳುತ್ತವೆ. ಹೀಗಾಗಿ 13ನೇ ಹುಣ್ಣಿಮೆಯು ಪ್ರತಿ 2.5 ವರ್ಷಗಳಿಗೊಮ್ಮೆ ಗೋಚರಿಸುತ್ತದೆ. ಈ 13ನೇ ಹುಣ್ಣಿಮೆಯನ್ನೂ ಸಾಮಾನ್ಯವಾಗಿ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.

ಸೂಪರ್ ಬ್ಲೂ ಮೂನ್ ಎಂದೇಕೆ ಕರೆಯುತ್ತಾರೆ?

ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ ಮೂರನೇ ಮತ್ತು ಕೊನೆಯ ಹುಣ್ಣಿಮೆಯು “ಸೂಪರ್ ಬ್ಲೂ ಮೂನ್” ಆಗಿರುತ್ತದೆ. ಏಕೆಂದರೆ ಇದು ಒಂದು ಕ್ಯಾಲೆಂಡರ್ ತಿಂಗಳಿನಲ್ಲಿ ಎರಡನೇ ಹುಣ್ಣಿಮೆ. ಚಂದ್ರ ಭೂಮಿಯನ್ನು ಸುತ್ತುವ 29 ದಿನಗಳ ಕಕ್ಷೆಯ ಪ್ರಕಾರ ಇದು ಒಂದು ʼಸೂಪರ್‌ಮೂನ್’. ಸೂಪರ್‌ಮೂನ್‌ಗಳು ಸಾಮಾನ್ಯ ಚಂದ್ರನಿಗಿಂತ 16% ಹೆಚ್ಚು ಪ್ರಕಾಶಮಾನವಾಗಿರುತ್ತವೆ. ಸಾಮಾನ್ಯ ಹುಣ್ಣಿಮೆಗಿಂತ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತದೆ. ಚಂದ್ರನು ಪೂರ್ಣವಾಗಿದ್ದಾಗ ಮತ್ತು ಅದರ ಕಕ್ಷೆಯು ಭೂಮಿಗೆ ಹತ್ತಿರದಲ್ಲಿದ್ದಾಗ ಈ ವಿದ್ಯಮಾನ ಕಾಣಿಸುತ್ತದೆ.

ನೋಡಲು ಉತ್ತಮ ಸಮಯ ಯಾವುದು?

ಹುಣ್ಣಿಮೆಯಂದು ಮುಸ್ಸಂಜೆಯ ಸಮಯದಲ್ಲಿ ಸೂರ್ಯಾಸ್ತದ ನಂತರ ಉದಯಿಸುವ ಚಂದ್ರನನ್ನು ವೀಕ್ಷಿಸಿದರೆ ಒಳ್ಳೆಯ ವೀಕ್ಷಣೆಯ ಅನುಭವ ಸಿಗುತ್ತದೆ. ಆಗಸ್ಟ್ 30, 2023ರಂದು, ನಿಖರವಾಗಿ ರಾತ್ರಿ 8:37ಕ್ಕೆ ಸೂಪರ್ ಬ್ಲೂ ಮೂನ್ ತನ್ನ ಗರಿಷ್ಠ ಹೊಳಪನ್ನು ತಲುಪುತ್ತದೆ. ಇದು ಯುರೋಪ್‌ನಲ್ಲಿ. ಆದರೆ ಭಾರತದಲ್ಲಿ ಆಗಸ್ಟ್‌ 31ರಂದು ಬೆಳಗ್ಗೆ 7.06 ನಿಮಿಷಕ್ಕೆ ಇದು ಗರಿಷ್ಠ ಪ್ರಭೆಯನ್ನು ತೋರಲಿದೆ.

Join Telegram Group Join Now
WhatsApp Group Join Now

ನೀಲಿ ಸೂಪರ್‌ಮೂನ್ ಎಷ್ಟು ಅಪರೂಪ?

ನಾಸಾ ಪ್ರಕಾರ, ನೀಲಿ ಸೂಪರ್‌ಮೂನ್‌ಗಳು ಬಹಳ ಅಪರೂಪದ ವಿದ್ಯಮಾನ. ಖಗೋಳ ಪರಿಸ್ಥಿತಿಗಳಿಂದಾಗಿ ಈ ಚಂದ್ರಗಳು ಪ್ರತಿ ಹತ್ತು ವರ್ಷಗಳಿಗೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ; ಕೆಲವೊಮ್ಮೆ, ನೀಲಿ ಸೂಪರ್‌ಮೂನ್‌ಗಳ ನಡುವಿನ ಮಧ್ಯಂತರ ಇಪ್ಪತ್ತು ವರ್ಷಗಳವರೆಗೆ ಇರಬಹುದು. ಬ್ಲೂ ಮೂನ್‌ಗಳು ಕೇವಲ 3% ಹುಣ್ಣಿಮೆಗಳಿಗೆ ಮಾತ್ರ ಕಾರಣವಾದರೆ, ಸೂಪರ್‌ಮೂನ್‌ಗಳು ಎಲ್ಲಾ ಹುಣ್ಣಿಮೆಗಳಲ್ಲಿ ಸುಮಾರು 25%ರಷ್ಟಿದೆ. ಸೂಪರ್ ಬ್ಲೂ ಮೂನ್‌ಗಳ ನಡುವಿನ ಮಧ್ಯಂತರವು ಹೆಚ್ಚು ಅನಿಯಮಿತವಾಗಿದೆ. ಮುಂದಿನ ಸೂಪರ್ ಬ್ಲೂ ಮೂನ್‌ಗಳು 2037ರ ಜನವರಿ ಮತ್ತು ಮಾರ್ಚ್‌ನಲ್ಲಿ ಜೋಡಿಯಾಗಿ ನಡೆಯಲಿವೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ