Hello ಸ್ನೇಹಿತರೇ, ಪ್ರಗ್ಯಾನ್ ರೋವರ್ ಈಗ ಆತ ನಿದ್ರೆಗೆ ಜಾರಿದ್ದಾನೆ ಎಂಬುದಾಗಿ ಇಸ್ರೋದ ಅಧಿಕಾರಿಗಳು ಹೇಳಿಕೊಂಡಿದ್ದಾರೆ ಬನ್ನಿ ಅದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

what happened to vikram lander after 14 days
ನಮ್ಮ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬ ಭಾರತೀಯರು ಕೂಡ ಹೆಮ್ಮೆಪಡುವಂತಹ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹೌದು ಚಂದ್ರನ ಮೇಲೆ ಕಾಲಿಟ್ಟಿರುವಂತಹ ನಾಲ್ಕನೇ ದೇಶದ ರೂಪದಲ್ಲಿ ನಮ್ಮ ಭಾರತ ದೇಶ ಇದೆ ಎಂದರೆ ಅದಕ್ಕಾಗಿ ನಾವು ನಮ್ಮ ಇಸ್ರೋ ವಿಜ್ಞಾನಿಗಳನ್ನು(Isro Scientists) ಪ್ರಶಂಶಿಸಲೇಬೇಕು. ಅದರಲ್ಲೂ ವಿಶೇಷವಾಗಿ ಚಂದ್ರನ ದಕ್ಷಿಣ ಧ್ರುವಕ್ಕೆ ಸೇಫ್ ಆಗಿ ಕಾಲಿಟ್ಟಂತಹ ಮೊದಲ ದೇಶವಾಗಿ ನಾವು ಕಾಣಿಸಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಕೂಡ ನಾವು ಎದೆ ಉಬ್ಬಿಸಿಕೊಂಡು ಗರ್ವದಿಂದ ಹೇಳಿಕೊಳ್ಳಬೇಕಾಗಿದೆ.
ಪ್ರಜ್ಞಾನ್ ರೋವರ್
ಇನ್ನು ಚಂದ್ರನ ಮೇಲೆ ಹೇಳಿದಿರುವಂತಹ ಚಂದ್ರಯಾನ 3 ನ ವಿಕ್ರಂ ಲ್ಯಾಂಡರ್(Vikram Lander) ಪ್ರಗ್ಯಾನ್ ರೋವರ್ ಅನ್ನು ಈಗಾಗಲೇ ಚಂದ್ರನ ಮೇಲೆ ಇಳಿಸಿ ಪ್ರಗ್ಯಾನ್ ಕೂಡ ಚಂದ್ರನ ಮೇಲೆ ಎಲ್ಲಾ ಕಡೆ ಹೋಗಿ ಸಂಶೋಧನೆಯನ್ನು ನಡೆಸಿ ಇಸ್ರೋದ ಕೇಂದ್ರಕ್ಕೆ ಕಳಿಸಬೇಕಾಗಿರುವಂತಹ ಬಹುತೇಕ ಎಲ್ಲಾ ಪ್ರಮುಖ ದಾಖಲೆಗಳನ್ನು ಹಾಗೂ ಫೋಟೋಗಳನ್ನು ಕಳುಹಿಸಿಕೊಟ್ಟಿದೆ. ಆದರೆ ಈಗ ಆತ ನಿದ್ರೆಗೆ ಜಾರಿದ್ದಾನೆ ಎಂಬುದಾಗಿ ಇಸ್ರೋದ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಅರೆ ಇದೇ ನಿದು ನಿದ್ರೆ ಜಾರಿರೋದು ಅಂತ ನೀವು ಆಶ್ಚರ್ಯಪಟ್ಕೊಂಡಿದ್ದೀರಾ ತಲೆಕೆಡಿಸಿಕೊಳ್ಳಬೇಡಿ. ಅದಕ್ಕೆ ಕಾರಣ ಕೂಡ ಇದ್ದು ಬನ್ನಿ ಅದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಭೂಮಿಯ ಮೇಲಿನ 11 ದಿನಗಳ ಕಾಲ ಚಂದ್ರನ ಮೇಲೆ 100 ಮೀಟರ್ ಗಳವರೆಗೆ ಶಿವಶಕ್ತಿ ಪಾಯಿಂಟ್ ನಿಂದ ಪ್ರಗ್ಯಾನ್ ರೋವರ್ ಚಲಿಸಿ ಎಲ್ಲಾ ಮಾಹಿತಿಗಳನ್ನು ಕೂಡ ತನ್ನಲ್ಲಿ ಕೇಂದ್ರೀಕರಿಸಿಕೊಂಡಿದೆ. ಸದ್ಯದ ಮಟ್ಟಿಗೆ ಪ್ರಗ್ಯಾನ್ ನಿದ್ದೆಗೆ ಜಾರಿದ್ದಾನೆ ಮುಂದಿನ ಚಂದ್ರನ ಸೂರ್ಯ ಉದಯದ ದಿನಾಂಕ ಅಂದರೆ ಸೆಪ್ಟೆಂಬರ್ 22ರಂದು ಎಚ್ಚರಿಕೆ ಆದರೂ ಕೂಡ ಆಗಬಹುದು ಎನ್ನುವುದಾಗಿ ಇಸ್ರೋದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಈ ರೋವರ್ ಅನ್ನು ಚಂದ್ರನ ಒಂದು ದಿನದ ಜೀವತಾವಧಿಯನ್ನು ಹೊಂದಲು ವಿನ್ಯಾಸಗೊಳಿಸಲಾಗಿತ್ತು ಎಂಬುದನ್ನು ಕೂಡ ವಿಜ್ಞಾನಿಗಳು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಈಗಾಗಲೇ ಚಂದ್ರನ ಮಣ್ಣಿನ ತಾಪವನ್ನು ಕೂಡ ಇಳಿದ ಕೂಡಲೇ ಕಳುಹಿಸಿ ಕೊಟ್ಟಿತ್ತು ಎಂಬುದನ್ನು ಕೂಡ ಮರೆಯುವ ಹಾಗಿಲ್ಲ. ವಿಕ್ರಂ ಲ್ಯಾಂಡರ್ ಮೂಲಕ ಈಗಾಗಲೇ ಎಲ್ಲಾ ಪೇಲೋಡ್ ಗಳ ಡೇಟಾವನ್ನು ಭಾರತಕ್ಕೆ ಕಳುಹಿಸಲಾಗುತ್ತದೆ ಎಂಬುದನ್ನು ಕೂಡ ISRO ದೃಢೀಕರಿಸಿದೆ.
ಪ್ರಗ್ಯಾನ್ ರೋವರ್ ಎಲ್ಲಾ ಅಂದುಕೊಂಡಂತೆ ಆದರೆ ಚಂದ್ರನ ಮೇಲೆ ಸೂರ್ಯೋದಯದ ದಿನಾಂಕ ಆಗಿರುವ ಸೆಪ್ಟೆಂಬರ್ 22ರಂದು ಮತ್ತೆ ಎದ್ದೇಳಬೇಕು ಇಲ್ಲವಾದಲ್ಲಿ ಭಾರತದ ರಾಯಭಾರಿಯಾಗಿ ಚಂದ್ರನ ಮೇಲೆ ಉಳಿದುಕೊಳ್ಳುತ್ತಾನೆ ಎಂಬುದಾಗಿ ಹೆಸರು ಹೇಳಿಕೊಂಡಿದೆ. ಈಗಾಗಲೇ ರೋವರ್ ಮಾಡಬೇಕಾಗಿರುವಂತಹ ಪ್ರತಿಯೊಂದು ಕೆಲಸಗಳನ್ನು ಕೂಡ ಮಾಡಿ ಮುಗಿಸಿ ಆಗಿದ್ದು ನಿಜಕ್ಕೂ ಕೂಡ ಭಾರತದ ಬಾಹ್ಯಾಕಾಶ ಒಂದು ಹೆಜ್ಜೆ ಮುಂದಕ್ಕೆ ಹೋಗುವ ರೀತಿಯಲ್ಲಿ ಈ ಸಾಧನೆ ನಡೆದಿದೆ ಎಂದು ಹೇಳಬಹುದಾಗಿದೆ.