Hello ಸ್ನೇಹಿತರೇ, ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಸಲು ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು. ಈ ನಿಯರ ಸೆಪ್ಟೆಂಬರ್ 9ವರೆಗೂ ಮಾತ್ರ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಶೇಕಡಾ 50 ರಿಯಾಯಿತಿಯೊಂದಿಗೆ ದಂಡ ಪಾವತಿ ಮಾಡಲು ಸೆಪ್ಟೆಂಬರ್ 9ರವರೆಗೆ ಮಾತ್ರ ಅವಕಾಶ ನೀಡಲಾಗುದ್ದು, ವಾಹನ ಸವಾರರು ಇದರೊಳಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ ಎನ್ನುವ ಮಹತ್ವದ ಸೂಚನೆಯನ್ನು ಪೊಲೀಸ್ ಇಲಾಖೆಯಿಂದ ನೀಡಲಾಗಿದೆ.

ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶ ನೀಡಲಾಗಿತ್ತು. ಇದೀಗ ಸೆಪ್ಟೆಂಬರ್ 9ರೊಳಗೆ ವಾಹನ ಸವಾರರು ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ. ಸಂಚಾರಿ ಪೊಲೀಸ್ ಇಲಾಖೆಯ ಇ-ಚಲನ್‌ನಲ್ಲಿ ಫೆಬ್ರವರಿ 11, 2023ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ.
ಟ್ರಾಫಿಕ್ ದಂಡ ಪಾವತಿಸುವ ಬಗ್ಗೆ ಮಾಹಿತಿ
* ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
* ಪೇಟಿಎಂ ಅಪ್ಲಿಕೇಶನ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ದಂಡ ಕಟ್ಟಬಹುದಾಗಿದೆ.
* ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ವಾಹನದ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ಬಾಕಿ ಪಾವತಿ ಮಾಡಬಹುದು.
* ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ದಂಡ ಪಾವತಿಸಬಹುದಾಗಿದೆ.
* ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ, ದಂಡದ ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 080-22942883 ಅಥವಾ 080-22943381 ಅನ್ನು ಸಂಪರ್ಕಿಸಬಹುದಾಗಿದೆ ಅಂತಾ ಕನ್ನಡ ದುನಿಯಾ ವರದಿ ಮಾಡಿದೆ.
24 ಕಡೆಗಳಲ್ಲಿ ಸ್ಕೈವಾಕ್‌ಗಳು ನಿರ್ಮಾಣ
ಅಪಘಾತಗಳ ಹಾಟ್‌ಸ್ಪಾಟ್ ಅಂತಲೇ ಹೆಸರಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಜನರು ರಸ್ತೆ ದಾಟಲು ಹರಸಾಹಸಪಡುವಂತಾಗಿದ್ದು, ಈ ಹಿನ್ನೆಲೆ ಸ್ಕೈವಾಕ್‌ಗಳು ನಿರ್ಮಾಣ ಆಗಲಿವೆ. 118 ಕಿಲೋ ಮೀಟರ್ ಉದ್ದದ ಎಕ್ಸ್‌ಪ್ರೆಸ್ ವೇಯಲ್ಲಿನ ಒಟ್ಟು 24 ಕಡೆಗಳಲ್ಲಿ ಈ ಸ್ಕೈವಾಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಹೆದ್ದಾರಿ ಪ್ರಾಧಿಕಾರ (NHAI) ಫುಟ್ ಆನ್ ಬ್ರಿಡ್ಜ್‌ಗಳ ಮಾದರಿಯ ನೀಲನಕ್ಷೆ ಮತ್ತು ಕಾಮಗಾರಿಯ ಡಿಪಿಆರ್ ಸಿದ್ಧಪಡಿಸಿದೆ. 24 ಕಡೆ ಸ್ಟೀಲ್ ಬ್ರಿಡ್ಜ್‌ಗಳನ್ನು ನಿರ್ಮಿಸಿ ಈ ಮೂಲಕ ಜನರು ಯಾವುದೇ ಕಿರಿಕಿರಿ ಇಲ್ಲದಂತೆ ಸುಗಮವಾಗಿ ರಸ್ತೆ ದಾಟಲು ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಸುಮಾರು 46.10 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ವಿಜಯ ಕರ್ನಾಕ ಪತ್ರಿಕೆಯಲ್ಲಿ ವರದಿಯಾಗಿದೆ.
ನಿರ್ಮಾಣ ಆಗುವ ಸ್ಕೈವಾಕ್‌ಗಳಲ್ಲಿಇಪಿಸಿ ಮಾದರಿಯನ್ನು ಅಳವಡಿಸಿದ್ದು, ಈ ಮಾದರಿಯಲ್ಲಿ ಗುತ್ತಿಗೆ ಪಡೆದಿರುವವರೇ ಯೋಜನೆ ರೂಪಿಸಿ, ಕಾಮಗಾರಿ ನಡೆಸಲಿದ್ದಾರೆ. ಗುತ್ತಿಗೆ ಪಡೆದ ಕಂಪನಿ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. 5 ವರ್ಷಗಳ ಕಾಲ ಗುತ್ತಿಗೆದಾರರೇ ಇವುಗಳ ನಿರ್ವಹಣೆ ಜವಾಬ್ದಾರಿ ಹೋರಬೇಕಾಗುತ್ತದೆ. ಹೆದ್ದಾರಿ ಪ್ರಾಧಿಕಾರ ಕೇವಲ ಕಾಮಗಾರಿಯ ಮೇಲುಸ್ತುವಾರಿಯ ಜವಾಬ್ದಾರಿಯನ್ನಷ್ಟೇ ನೋಡಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಕ್ಸೆಸ್ ಕಂಟ್ರೋಲ್ ಹೈವೇ ದಾಟಲು ಯಾವುದೇ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡದ ಕಾರಣ ಸಾರ್ವಜನಿಕರು ಕೆಲವೆಡೆ ರಸ್ತೆ ಮಧ್ಯೆಯೇ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಅಪಘಾತ ಹೆಚ್ಚುತ್ತಿದೆ ಎಂದು ರಸ್ತೆ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿದ ಪೊಲೀಸ್ ಇಲಾಖೆ ವರದಿ ನೀಡಿತ್ತು.
ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರ (NHAI) ನಿರ್ಲಕ್ಷ್ಯವಹಿಸುತ್ತಿದೆ ಎಂದು ಇತ್ತೀಚೆಗಷ್ಟೇ ರಸ್ತೆ ಸುರಕ್ಷತೆ ಪರಿಶೀಲಿಸಿದ ಎಡಿಜಿಪಿ ಅಲೋಕ್‌ಕುಮಾರ್ ಅವರು ಸಹ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲ ಬೆಳವಣಿಗಗಳ ಬೆನ್ನಲ್ಲೇ ಇದೀಗ ಹೆದ್ದಾರಿ ಪ್ರಾಧಿಕಾರ ಜನರು ರಸ್ತೆ ದಾಟಲು ಎಫ್‌ಒಬಿಗಳನ್ನು ನಿರ್ಮಾಣ ಮಾಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ.
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿರ್ಮಾಣ ಆಗಲಿರುವ ಸ್ಕೈವಾಕ್ ಸುಧಾರಿತ ವಿಧಾನದಲ್ಲಿ ತಯಾರು ಆಗಲಿದೆ. ಅಲ್ಲದೆ ಇವುಗಳು ಕಾಂಕ್ರಿಟ್ ಬ್ರಿಕ್ಸ್ ಮತ್ತು ಕಬ್ಬಿಣದಿಂದ ನಿರ್ಮಾಣ ಆಗಲಿವೆ. ಆಕ್ಸೆಸ್ ಕಂಟ್ರೋಲ್ ಹೈವೇ ಮತ್ತು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಯಾವುದೇ ಸಮಸ್ಯೆ ಆಗದಂತೆ ಈ ಪಾದಚಾರಿ ಮೇಲ್ಸೇತುವೆಯನ್ನು ವಿನ್ಯಾಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
63 ಅಡಿ ಉದ್ದವಿರುವ ಈ ಬ್ರಿಡ್ಜ್, 3.5 ಮೀಟರ್ ಅಗಲ ಇರಲಿದೆ. ಜನರು ನಡೆದುಕೊಂಡು ಹೋಗಲು 3 ಮೀಟರ್‌ನಷ್ಟು ವಿಶಾಲವಾಗಿರಲಿದೆ. ಇದನ್ನು ಹೊರಗಡೆ ಸಿದ್ಧಪಡಿಸಿ ಹೆದ್ದಾರಿಯಲ್ಲಿ ಕೇವಲ ಅಳವಡಿಕೆ ಮಾಡಲಿದೆ ಎನ್ನಲಾಗಿದೆ.
ಎಲ್ಲೆಲ್ಲಿ ಸ್ಕೈವಾಕ್ ನಿರ್ಮಾಣ?
1. ಕಣಮಿಣಕಿ
2. ಕಲ್ಲುಗೋಪಹಳ್ಳಿ
3. ಹುಲ್ತಾರ್ ಹೊಸದೊಡ್ಡಿ
4. ಮಾದಾಪುರ
5. ರುದ್ರಾಕ್ಷಿಪುರ
6. ಬಿ.ಗೌಡಗೆರೆ
7. ಬೂದನೂರು,
8. ಸಿದ್ದಾಪುರ,
9. ಗಂಗೂರು
10. ಗೌಡಹಳ್ಳಿ
11. ಬ್ರಹ್ಮಾಪುರ
12. ಕಳಸ್ತಾವಾಡಿ,
13. ಸಿದ್ದಲಿಂಗಪುರ
ಪಾದಚಾರಿಗಳು ಸುಗಮವಾಗಿ ಯಾವುದೇ ಕಿರಿಕಿರಿ ಇಲ್ಲದೆ ನಡುದುಕೊಂಡು ಹೋಗುವ ಹಿತದೃಷ್ಟಿಯಿಂದ ಈ 13 ಕಡೆ ಸೇರಿದಂತೆ ಒಟ್ಟು 24 ಕಡೆಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲಾಗುತ್ತದೆ. ಹಾಗಾದರೆ ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಓಡಾಡಲು ಯಾವಾಗ ಸಿದ್ಧವಾಗುತ್ತದೆ ಎಂದು ಕಾದುನೋಡಬೇಕಿದೆ.