ಸಾಲಾರ್ ಚಿತ್ರ ಬಿಡುಗಡೆ ಡೇಟ್ ಮುಂದೂಡಿದ ತಂಡ.! ನವೆಂಬರ್‌ನಲ್ಲಿ ಬಿಡುಗಡೆ ಆಗುತ್ತಾ ಪ್ರಭಾಸ್ ನಟನೆಯ ಸಲಾರ್!?

Hello ಸ್ನೇಹಿತರೇ, ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ತೆಲುಗು ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ಸಲಾರ್. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಅವರಿಗೆ ಈ ಸಿನಿಮಾ ತುಂಬಾ ಮುಖ್ಯವಾಗಿದೆ. ಆದರೆ, ಪದೇ ಪದೇ ಸಲಾರ್ ಬಿಡುಗಡೆ ದಿನಾಂಕ ಮುಂದೂಡಲಾಗುತ್ತಿದೆ.

 salaar movie release date postponed in kannada

salaar release date 2023

ಸೆಪ್ಟಂಬರ್ 28, 2023ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಮತ್ತೆ ಮುಂದೂಡಲಾಗಿದೆ.

ಇದು ಅಭಿಮಾನಿಗಳಲ್ಲಿ ಭಾರೀ ನಿರಾಸೆ ಉಂಟುಮಾಡಿದೆ. ಸಲಾರ್ ಭಾಗ-1 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನು ಮುಗಿಯದ ಕಾರಣ ಸಿನಿಮಾ ತಂಡ ಘೋಷಿಸಿದ್ದ ದಿನದಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗುತ್ತಿಲ್ಲ.

ಇತ್ತೀಚಿನ ಮಾಹಿತಿ ಪ್ರಕಾರ ಈ ವರ್ಷ ನವೆಂಬರ್‌ನಲ್ಲಿ ಸಲಾರ್ ಚಿತ್ರಮಂದಿರಗಳಿಗೆ ಬರಲಿದೆ. ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಬೇಕಾಗಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಶನಿವಾರ ಟ್ವೀಟ್ ಮಾಡಿರುವ ಅವರು, “ಬ್ರೇಕಿಂಗ್ ನ್ಯೂಸ್… ಪ್ರಭಾಸ್ ಅವರ ‘ಸಲಾರ್’ ನವೆಂಬರ್‌ನಲ್ಲಿ ಬರಲಿದೆ. ಸಲಾರ್ ಸೆಪ್ಟೆಂಬರ್ 28ಕ್ಕ ಬಿಡುಗಡೆಯಾಗುವುದಿಲ್ಲ ಎಂಬುದು ಅಧಿಕೃತವಾಗಿದೆ. ಪ್ರಭಾಸ್ ಅಭಿನಯದ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸವು ನಡೆಯುತ್ತಿದೆ. ಹೊಂಬಾಲೆ ಫಿಲ್ಮ್ಸ್ ನವೆಂಬರ್ 2023 ರಲ್ಲಿ ಚಲನಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ” ಎಂದಿದ್ದಾರೆ.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಅಂತ್ಯಗೊಳ್ಳದ ಕಾರಣ ಸಲಾರ್ ಈ ವರ್ಷದ ಕೊನೆಗೆ ಅಂದರೆ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹಿಂದಿನ ವರದಿಗಳು ಶುಕ್ರವಾರ ಸುಳಿವು ನೀಡಿದ್ದವು. ಆದರೆ, ವಿಶ್ಲೇಷಕ ತರಣ್ ಆದರ್ಶ್ ಸಲಾರ್ ನವೆಂಬರ್‌ನಲ್ಲಿ ನಮ್ಮ ಮುಂದಿರಲಿದೆ ಎಂದಿದ್ದಾರೆ.

Join Telegram Group Join Now
WhatsApp Group Join Now

ಇನ್ನು, ಸಲಾರ್ ಸಿನಿಮಾ ಬಿಡುಗಡೆ ಮುಂದೂಡಿಕೆ ಬಗ್ಗೆ ಅಭುಮಾನಿಗಳು ಬೇಸ ವ್ಯಕ್ತಪಡಿಸಿದ್ದಾರೆ. ಕೊನೆ ಕ್ಷಣದಲ್ಲಿ ರಿಲೀಸ್ ಡೇಟ್ ಬದಲಿಸೋದು ಸರಿಯಲ್ಲ. ಈ ಬಗ್ಗೆ ಚಿತ್ರತಂಡ ಕ್ಷಮೆ ಕೇಳಬೇಕು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಸಲಾರ್

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಗಪತಿ ಬಾಬು, ದೇವರಾಜ್, ಈಶ್ವರಿ ರಾವ್, ಭಜರಂಗಿ ಲೋಕಿ ಸೇರಿ ಹಲವು ನಟರು ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕೆಜಿಎಫ್ ಸರಣಿಯನ್ನು ನಿರ್ಮಿಸಿದ್ದ ತಂಡವೇ ಸಲಾರ್ ನಿರ್ಮಿಸುತ್ತಿದೆ. ಇದೇ ಕಾರಣಕ್ಕೆ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ.

ಸಿನಿಮಾವನ್ನು ಅಂದಾಜು 300 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣಕ್ಕಾಗಿ 14 ಸೆಟ್‌ಗಳನ್ನು ನಿರ್ಮಿಸಲಾಗಿದೆ. ಸಲಾರ್ ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಲಾರ್ ಬಿಡುಗಡೆ ಮುಂದೂಡಿದ ಕಾರಣ ಸೆಪ್ಟೆಂಬರ್ 28 ರಂದು, ರಿಚಾ ಚಡ್ಡಾ, ವರುಣ್ ಶರ್ಮಾ, ಪುಲ್ಕಿತ್ ಸಾಮ್ರಾಟ್, ಪಂಕಜ್ ತ್ರಿಪಾಠಿ ಮತ್ತು ಮಂಜೋತ್ ಸಿಂಗ್ ನಟಿಸಿರುವ ಫುಕ್ರೆ 3 ಸಲಾರ್‌ಗಾಗಿ ಬುಕ್ ಮಾಡಲಾಗಿದ್ದ ಚಿತ್ರಮಂದಿರಗಳಿಗೆ ಬರಲಿದೆ. ರವಿತೇಜ ಅಭಿನಯದ ಟೈಗರ್ ನಾಗೇಶ್ವರ ರಾವ್ ಕೂಡ ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ