ಗಂಜಿ ನೀರನ್ನು ಚೆಲ್ಲಬೇಡಿ! ಅನ್ನದ ಗಂಜಿಯ ಆರೋಗ್ಯ ಗುಟ್ಟು! ಪ್ರಯೋಜನಗಳು ಗೊತ್ತಾದ್ರೆ ನಿಮಗೂ ಅಚ್ಚರಿಯಾಗಬಹುದು.

Don't spill porridge water Rice porridge is healthy
Don’t spill porridge water Rice porridge is healthy

ಅನ್ನ ತಯಾರಿಸಿಕೊಂಡ ಬಳಿಕ ಅದರಿಂದ ಬರುವ ಗಂಜಿ ನೀರನ್ನು ಬಿಸಾಕದೆ ಅದನ್ನು ಬಳಸಿಕೊಂಡರೆ ಆಗ ನಾನಾ ರೀತಿಯ ಲಾಭಗಳು ದೇಹಕ್ಕೆ ಸಿಗುವುದು.

ಭಾರತೀಯರು, ಅದರಲ್ಲೂ ದಕ್ಷಿಣ ಭಾರತೀಯರು ಅನ್ನ ಪ್ರಿಯರು. ಅವರು ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಊಟದ ತನಕ ಪ್ರತಿಯೊಂದಕ್ಕೂ ಅನ್ನ ವನ್ನು ಬಳಕೆ ಮಾಡುವರು. ಅನ್ನದಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇವೆ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ.

ಇದನ್ನು ಬೇಯಿಸುವ ವೇಳೆ ಸಿಗುವ ಗಂಜಿ ನೀರನ್ನು ಹೆಚ್ಚಿನವರು ಚೆಲ್ಲುವರು. ಆದರೆ ಇದರಲ್ಲಿ ಇರುವ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಂಡರೆ, ಆಗ ಖಂಡಿತ ವಾಗಿಯೂ ಇಂದಿನಿಂದಲೇ ಇದನ್ನು ಎಲ್ಲರೂ ಕುಡಿಯಲು ಆರಂಭಿಸುವರು. ಇದು ಆರೋಗ್ಯ ಸುಧಾರಿಸುವ ಜತೆಗೆ ಕೂದಲು ಹಾಗೂ ಚರ್ಮದ ಕಾಂತಿ ವೃದ್ಧಿಸುವುದು. ದೇಹಕ್ಕೆ ಇದು ಹಲವಾರು ಬಗೆಯ ಪೋಷಕಾಂಶಗಳನ್ನು ನೀಡುವುದು.

ಶಕ್ತಿ ವೃದ್ಧಿ

ಶಕ್ತಿ ವೃದ್ಧಿ

ಗಂಜಿನೀರು ಕುಡಿದರೆ ಆಗ ಇದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು, ಮಲಬದ್ಧತೆ ನಿವಾರಿಸಿ, ಹಲವಾರು ಸಮಸ್ಯೆ ಗಳನ್ನು ತಡೆಯಬಹುದು. ಗಂಜಿ ನೀರಿನಲ್ಲಿ ಖನಿಜಾಂಶಗಳು ಮತ್ತು ಆರೋಗ್ಯಕಾರಿ ಕಾರ್ಬೋಹೈಡ್ರೇಟ್ಸ್ ಗಳು ಇದ್ದು, ಒಂದು ಲೋಟ ಗಂಜಿನೀರು ಸೇವನೆ ಮಾಡಿದರೆ ಆಗ ಇದರಿಂದ ದೇಹಕ್ಕೆ ಶಕ್ತಿ ಸಿಗುವುದು.

ನವಜಾತ ಶಿಶುಗಳಿಗೆ ಆಹಾರ

ನವಜಾತ ಶಿಶುಗಳಿಗೆ ಆಹಾರ

ಶಿಶುಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಆಹಾರ ನೀಡುವ ಬದಲಿಗೆ ಗಂಜಿನೀರನ್ನು ಕೊಟ್ಟರೆ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಹಠಾತ್ ಆಗಿ ಶಕ್ತಿ ನೀಡುವುದು. ಇದು ಮಲಬದ್ಧತೆ ನಿವಾರಣೆ ಮಾಡುವುದು.

ಬಟ್ಟೆಗಳಿಗೆ ಕಾರ್ನ್ ಸ್ಟ್ರಾಚ್

ಬಟ್ಟೆಗಳಿಗೆ ಕಾರ್ನ್ ಸ್ಟ್ರಾಚ್

ಹತ್ತಿ ಬಟ್ಟೆಗಳನ್ನು ಖಡಕ್ ಮಾಡಲು ಹಿಂದಿನಿಂದಲೂ ಗಂಜಿನೀರನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ತೊಳೆದಿರುವ ಬಟ್ಟೆಗಳನ್ನು ಇದರಲ್ಲಿ ಅದ್ದಿಕೊಳ್ಳಿ ಮತ್ತು ಬಿಸಿಲಿನಲ್ಲಿ ಇದನ್ನು ಒಣಗಲು ಬಿಡಿ. ಇದನ್ನು ಹತ್ತಿ ಬಟ್ಟೆಗಳನ್ನು ಸುಲಭವಾಗಿ ಖಡಕ್ ಮಾಡುವುದು.

Join Telegram Group Join Now
WhatsApp Group Join Now

ಮೊಡವೆ ನಿವಾರಣೆ

ಮೊಡವೆ ನಿವಾರಣೆ
  • ಗಂಜಿ ನೀರನ್ನು ಮೊಡವೆಗಳಿಗೆ ಹಚ್ಚಿಕೊಂಡರೆ ಆಗ ಇದು ನೈಸರ್ಗಿಕವಾಗಿ ಕಲೆಗಳನ್ನು ಮಾಯ ಮಾಡುವುದು. ತೆರೆದ ರಂಧ್ರಗಳನ್ನು ಕಡಿಮೆ ಮಾಡಲು ಇದನ್ನು ಟೋನರ್ ಆಗಿ ಬಳಕೆ ಮಾಡಬಹುದು.
  • ಒಂದು ಹತ್ತಿ ಉಂಡೆಯನ್ನು ಗಂಜಿ ನೀರಿನಲ್ಲಿ ಅದ್ದಿಕೊಂಡು ಅದನ್ನು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಮೊಡವೆಯನ್ನು ತುಂಬಾ ಸರಳ ಹಾಗೂ ನೈಸರ್ಗಿಕವಾಗಿ ನಿವಾರಿಸಿಕೊಳ್ಳಿ.​

ಕೂದಲಿನ ಮಾಸ್ಕ್

ಕೂದಲಿನ ಮಾಸ್ಕ್

ಇದು ತುಂಬಾ ಸರಳ ಮತ್ತು ತುಂಬಾ ಅಗ್ಗದ ಚಿಕಿತ್ಸೆಯಾಗಿದೆ. ಕೂದಲನ್ನು ಗಂಜಿ ನೀರಿನಿಂದ ತೊಳೆಯಿರಿ ಮತ್ತು ೨೦ ನಿಮಿಷ ಹಾಗೆ ಬಿಡಿ. ಇದರಿಂದ ಕೂದಲಿಗೆ ಕೆಲವೇ ದಿನಗಳಲ್ಲಿ ಕಾಂತಿ ಬರುವುದು. ದಾಸವಾಳದ ಹೂ ಮತ್ತು ಗಂಜಿ ನೀರು ಬಳಸಿಕೊಂಡು ಹೇರ್ ಟಾನಿಕ್ ಕೂಡ ತಯಾರಿಸಬಹುದು. ಇದನ್ನು ಕೂದಲಿಗೆ ಸ್ಪ್ರೇ ಮಾಡಿಕೊಂಡು ಇದರ ಬಳಿಕ ತೊಳೆದರೆ, ಆಗ ಒಳ್ಳೆಯ ಫಲಿತಾಂಶ ಸಿಗುವುದು.

ಜೀರ್ಣಕ್ರಿಯೆ ಹಾಗೂ ಹೊಟ್ಟೆಯ ಆರೋಗ್ಯ ಸುಧಾರಣೆ

ಜೀರ್ಣಕ್ರಿಯೆ ಹಾಗೂ ಹೊಟ್ಟೆಯ ಆರೋಗ್ಯ ಸುಧಾರಣೆ

ಗಂಜಿ ನೀರನ್ನು ಕುಡಿದರೆ ಆಗ ಇದರಿಂದ ಹೊಟ್ಟೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಇರುವುದು. ಇದರಲ್ಲಿ ಇರುವ ಖನಿಜಾಂಶ ಗಳು ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಮಟ್ಟವನ್ನು ನಿಯಂತ್ರಿಸುವುದು. ಮುಖ್ಯವಾಗಿ ಬೇಸಗೆಯಲ್ಲಿ ಇದನ್ನು ಕುಡಿದರೆ ಒಳ್ಳೆಯದು. ಇದು ದೇಹಕ್ಕೆ ಬೇಕಾಗಿರುವ ತೇವಾಂಶ ನೀಡುವುದು ಹಾಗೂ ಕಳೆದುಕೊಂಡ ಪೋಷಕಾಂಶಗಳನ್ನು ಇದು ಮರಳಿಸುವುದು.

ಮುಖದ ಸಿರಮ್

ಮುಖದ ಸಿರಮ್

ಗಂಜಿನೀರು, ರೋಸ್ ವಾಟರ್ ಮತ್ತು ಗ್ಲಿಸರಿನ್ ನ್ನು ಒಂದು ಬಾಟಲಿಗೆ ತುಂಬಿಸಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅದಕ್ಕೆ ಸ್ವಲ್ಪ ಕಿತ್ತಳೆ ಸಾರಭೂತ ತೈಲ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದು ಮುಖದ ಕಲೆ ತೆಗೆದು, ಕಾಂತಿ ನೀಡುವುದು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ