ಮಕ್ಕಳೇ ಇಲ್ಲಿದೆ ಮುಖ್ಯ ಮಾಹಿತಿ! SSLC ನಂತರ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿದರೆ ಉತ್ತಮ? ಇಲ್ಲಿದೆ ಲಿಸ್ಟ್.

ನಮಸ್ಕಾರ ಸ್ನೇಹಿತರೆ ಬನ್ನಿ ಈ ಲೇಖನದಲ್ಲಿ ನಾವು ಎಸ್ ಎಸ್ ಎಲ್ ಸಿ ಮುಗಿದ ಮಕ್ಕಳಿಗೆ ಕೆಲವೊಂದು ಕೋರ್ಸ್ ಗಳನ್ನು ನೀಡಿದ್ದೇವೆ ಇದರಲ್ಲಿ ಬೆಸ್ಟ್ ಕೋಸನ್ನು ಆಯ್ಕೆ ಮಾಡಿ ನಿಮ್ಮ ಫೀಚರ್ ಅನ್ನು ಉತ್ತಮಗೊಳಿಸಿ.

Which courses are best to choose after SSLC
Which courses are best to choose after SSLC

ಹೌದು ಮಕ್ಕಳಲ್ಲಿ ಯಾವಾಗಲೂ ಈ ಒಂದು ಗೊಂದಲದಲ್ಲಿ ಸಿಲುಕಿರುತ್ತಾರೆ ಯಾಕೆಂದರೆ ಅವರಿಗೆ ಅರ್ಥವಾಗುವುದಿಲ್ಲ ಆದ್ದರಿಂದ ನೀವು ನಿಮ್ಮ ಶಿಕ್ಷಕರ ಬಳಿ ಹೋಗಿ ಸಲಹೆಯನ್ನು ಪಡೆಯಿರಿ ಮತ್ತು ಇದರ ಬಗ್ಗೆ ಗೊತ್ತಿರುವಂತಹ ಜನರಲ್ಲಿ ಹೋಗಿ ಸಲಹೆಯನ್ನು ಪಡೆಯಿರಿ ನಾವು ಕೂಡ ಕೆಲವು ಕೋರ್ಸ್ ಗಳನ್ನು ನಿಮಗೆ ನೀಡಿದ್ದೇವೆ ಇದರ ಬಗ್ಗೆ ಯೋಚನೆ ಮಾಡಿ ಕೋರ್ಸ್ ಸೆಲೆಕ್ಟ್.

ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಸಾಕಷ್ಟು ಅವಕಾಶಗಳು ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕಾಡುವ ಪ್ರಶ್ನೆ, ಯಾವ ಕೋರ್ಸ್ ಸೂಕ್ತ. ಯಾವ ಶಿಕ್ಷಣಕ್ಕೆ ಸ್ಕೋಪ್‌ ಇದೆ ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಇದಕ್ಕೆ ಉತ್ತರ ನೀಡುವುದು ಕಷ್ಟವಾದರು, ಮುಂದಿನ ಶಿಕ್ಷಣ ಆರಿಸುವಾಗ ಸ್ವಲ್ಪ ಜಾಗುರುಕತೆಯಿಂದ ಆಯ್ಕೆ ಮಾಡಿಕೊಂಡರೆ ಉತ್ತಮ. 

after 10th courses list in karnataka check here
ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿದರೆ ಉತ್ತಮ? ಇಲ್ಲಿದೆ ಲಿಸ್ಟ್

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು 10ನೇ ತರಗತಿಯ ಪರೀಕ್ಷೆಗಳಿಗೆ ಇನ್ನೂ ಕೇವಲ ಒಂದರಿಂದ ಎರಡು ತಿಂಗಳು ಮಾತ್ರ ಬಾಕಿ ಇವೆ. ಎಸ್‌ಎಸ್‌ಎಲ್‌ಸಿ ಮತ್ತು 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಬಹುತೇಕ ಪೋಷಕರು ಎಸ್‌ಎಸ್‌ಎಲ್‌ಸಿ, 10ನೇ ತರಗತಿ ನಂತರ ಯಾವ ಕೋರ್ಸ್‌ ತೆಗೆದುಕೊಳ್ಳಬೇಕು? ಭವಿಷ್ಯದ ದೃಷ್ಟಿಯಿಂದ ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬ ಪ್ರಶ್ನೆಗಳು ಮೂಡುತ್ತಿರುವುದು ಸಹಜ.

ಅನೇಕ ವರ್ಷಗಳಿಂದ ಪೋಷಕರು ತಮ್ಮ ಮಕ್ಕಳಿಗೆ ಸಾಮನ್ಯವಾಗಿ ಹೆಚ್ಚಿಗೆ ಅಂಕ ಬಂದರೆ ವಿಜ್ಞಾನ, ಕಡಿಮೆ ಅಂಕ ಬಂದರೆ ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇದೊಂದು ಅವೈಜ್ಞಾನಿಕ ಕ್ರಮ ಮಾತ್ರವಲ್ಲ, ವಿದ್ಯಾರ್ಥಿಗಳು ಭವಿಷ್ಯಕ್ಕೂ ಮಾರಕವಾಗುವಂತಹ ಕ್ರಮವಾಗಿದೆ ಎಂದರೆ ತಪ್ಪಾಗಲಾರದು.

​ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೋರ್ಸ್ ಆಯ್ಕೆ ಮಾಡಿ

​ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೋರ್ಸ್ ಆಯ್ಕೆ ಮಾಡಿ

ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಸಾಕಷ್ಟು ಅವಕಾಶಗಳು ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕಾಡುವ ಪ್ರಶ್ನೆ, ಯಾವ ಕೋರ್ಸ್ ಸೂಕ್ತ. ಯಾವ ಶಿಕ್ಷಣಕ್ಕೆ ಸ್ಕೋಪ್‌ ಇದೆ ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಇದಕ್ಕೆ ಉತ್ತರ ನೀಡುವುದು ಕಷ್ಟವಾದರು, ಮುಂದಿನ ಶಿಕ್ಷಣ ಆರಿಸುವಾಗ ಜೀವನದ ಉದ್ದೇಶ, ಸ್ವ-ವ್ಯಕ್ತಿತ್ವ, ಬೆಳದ ಪರಿಸರ ಮತ್ತು ಬಾಧ್ಯತೆ ಈ ವಿಷಯಗಳನ್ನು ಗಮನದಲ್ಲಿರಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಹಾಗಾಗಿ, ಯಾವುದೇ ವಿದ್ಯಾರ್ಥಿಯು ಶಿಕ್ಷಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತನ್ನ ಆಸಕ್ತಿ ಯಾವುದು, ಆಕಾಂಕ್ಷೆ ಏನು, ತನ್ನ ಸಾಮರ್ಥ್ಯ ಏನು, ತಾನು ಯಾವ ವಿಷಯವನ್ನು ಸುಲಭವಾಗಿ ಗ್ರಹಿಸಬಲ್ಲೆ ಎನ್ನುವುದನ್ನು ಪರಿಶೀಲಿಸಿಕೊಂಡು ನಂತರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.

Join Telegram Group Join Now
WhatsApp Group Join Now

​ಎಸ್‌ಎಸ್‌ಎಲ್‌ಸಿ ಮತ್ತು 10ನೇ ತರಗತಿ ನಂತರ ಇರುವ ಆಯ್ಕೆಗಳು

​ಎಸ್‌ಎಸ್‌ಎಲ್‌ಸಿ ಮತ್ತು 10ನೇ ತರಗತಿ ನಂತರ ಇರುವ ಆಯ್ಕೆಗಳು
  • ವಿಜ್ಞಾನ (ಸೈನ್ಸ್‌) ವಿಭಾಗ – ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಇತ್ಯಾದಿ.
  • ವಾಣಿಜ್ಯ ವಿಭಾಗ (ಕಾಮರ್ಸ್‌) – ಅಕೌಂಟೆನ್ಸಿ, ವ್ಯಾಪಾರೋದ್ಯಮ, ಗಣಿತ, ಸಂಖ್ಯಾಶಾಸ್ತ್ರ ಇತ್ಯಾದಿ.
  • ಕಲಾ ವಿಭಾಗ (ಆರ್ಟ್ಸ್‌) – ಶಿಕ್ಷಣ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ ಇತ್ಯಾದಿ.
  • ಡಿಪ್ಲೊಮ ( ಟೆಕ್ನಿಕಲ್ / ನಾನ್‌ ಟೆಕ್ನಿಕಲ್ )

​ಪಿಯುಸಿ (ಪದವಿ ಪೂರ್ವ ಶಿಕ್ಷಣ )

​ಪಿಯುಸಿ (ಪದವಿ ಪೂರ್ವ ಶಿಕ್ಷಣ )

ಎಸ್‌ಎಸ್‌ಎಲ್‌ಸಿ ನಂತರ ಎಲ್ಲರು ಮೊದಲು ಆಯ್ಕೆ ಮಾಡುವುದು ಪಿಯುಸಿ ಯನ್ನ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್‌ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ ( ವಿಜ್ಞಾನ ವಿಭಾಗ), ಕಾಮರ್ಸ್ ( ವಾಣಿಜ್ಯ ವಿಭಾಗ), ಆರ್ಟ್ಸ ( ಕಲಾ ವಿಭಾಗ ), ಈ ಮೂರು ವಿಭಾಗಗಳಲ್ಲಿ ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದಾಗಿದೆ.

ವಿಜ್ಞಾನ ವಿಭಾಗ

ವಿಜ್ಞಾನ ವಿಭಾಗ

PC-Pexels.com

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪೋಷಕರ ಮೊದಲ ಆಯ್ಕೆಯೆ ಸೈನ್ಸ್‌ ಆಗಿದೆ. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಈ ವಿಭಾಗ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ನೆಚ್ಚಿನ ವಿಭಾಗವಾಗಿದೆ.

  • ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ (PCMB)
  • ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ (PCMC)
  • ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ (PCME)

ವಾಣಿಜ್ಯ ವಿಭಾಗ (ಕಾಮರ್ಸ್)

ವಾಣಿಜ್ಯ ವಿಭಾಗ (ಕಾಮರ್ಸ್)

ಇನ್ನು ವಾಣಿಜ್ಯ ವಿಭಾಗದಲ್ಲಿ- ಯಾರಿಗೆ ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ, ಚಾರ್ಟರ್ಡ್‌ ಅಕೌಂಟೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದಕ್ಕೆ ಅವಕಾಶ ನೀಡುತ್ತದೆ. ಇನ್ನು ಯಾವ ವಿದ್ಯಾರ್ಥಿಯೂ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ನಿಮಗೆ ಬಿಟ್ಟಿದ್ದು.

​ಕಲಾ ವಿಭಾಗ (ಆರ್ಟ್ಸ್‌)

​ಕಲಾ ವಿಭಾಗ (ಆರ್ಟ್ಸ್‌)

ಇನ್ನು ಕಲಾ ವಿಭಾಗ- ಭಾಷಾ ವಿಷಯದಲ್ಲಿ ಆಸಕ್ತಿ ಇರುವವರು ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿ ನಂತರ ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಬಹುದು. ಅದಲ್ಲದೆ ಪಿಯುಸಿ ನಂತರ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮ ಮಾಡುವುದಕ್ಕೂ ಅವಕಾಶವಿದೆ.

ಡಿಪ್ಲೊಮ ಕೋರ್ಸ್‌ಗಳು

ಡಿಪ್ಲೊಮ ಕೋರ್ಸ್‌ಗಳು

ಎಸ್ಎಸ್ಎಲ್ಸಿ ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ನಿಮಗೆ ಅವಕಾಶವಿದೆ. ಅದಲ್ಲದೆ ಎಸ್‌ಎಸ್‌ಎಲ್ಸಿ ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಗಳು ಕೂಡಾ ಬೇಕಾಗಿದ್ದಲ್ಲಿ ಇಂಜಿನಿಯರಿಂಗ್‌ನಲ್ಲಿ ನೀವು ಡಿಪ್ಲೊಮ ಮಾಡಬಹುದು. ವಿದ್ಯಾರ್ಥಿಗಳು ಇಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್‌ಗಳನ್ನು ಕೂಡ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ